Author: editor.udayarashmi@gmail.com

ಸಿಂದಗಿ: ತಾಲೂಕಿನ ರಾಂಪೂರ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು ೩ ಗಂಟೆ ೩೦ ನಿಮಿಷಕ್ಕೆ ಎಂ.ಎಸ್.ಐ.ಎಲ್ ಮದ್ಯದ ಅಂಗಡಿಗೆ ನಾಲ್ಕು ಜನ ದರೋಡೆಕೋರರು ಒಳ ನುಗ್ಗಿ ಹಣ ಹಾಗೂ ಮದ್ಯ ತೆಗೆದುಕೊಂಡು ಪರಾರಿಯಾಗಿದ್ದಾರೆ.ಈ ವೇಳೆ ಮಧ್ಯದ ಅಂಗಡಿ, ಬಂಗಾರದ ಅಂಗಡಿ, ಬುಕ್ ಸ್ಟಾಲ್ ಸೇರಿ ಮೂರು ಅಂಗಡಿಗಳು ಕಳ್ಳತನ ಮಾಡಿರುತ್ತಾರೆ ಎಂದು ತಿಳಿದು ಬಂದಿದೆ.ಬೆಳಗ್ಗೆ ೧೧ಗಂಟೆಗೆ ಮಧ್ಯದ ಅಂಗಡಿಯ ಬಾಗಿಲು ತೆಗೆಯಲು ಹೋದ ಎಂ.ಎಸ್.ಐ.ಎಲ್ ಕೆಲಸಗಾರ ನೋಡಿ ಅನುಮಾನದಿಂದ ಮೇಲಧಿಕಾರಿಗಗಳಿಗೆ ವರದಿ ತಿಳಿಸಿರುತ್ತಾರೆ. ಸಿಂದಗಿ ಅಬಕಾರಿ ಉಪನಿರೀಕ್ಷಕರು ದಿಲೀಪ್ ಸಿಂಗ್ ರಜಪೂತ ಸ್ಥಳಕ್ಕೆ ಭೇಟಿ ನೀಡಿ ಒಳಗೆ ಹೋಗಿ ಸಿ.ಸಿ ಕ್ಯಾಮೆರಾ ಓಪನ್ ಮಾಡಿದಾಗ. ಮುಖಕ್ಕೆ ಬಟ್ಟೆಗಳು ಕಟ್ಟಿಕೊಂಡು ಒಳಗೆ ನುಗ್ಗಿರುವ ದೃಶ್ಯ ಕಂಡು ಬಂದಿದೆ. ೭ಸಾವಿರ ನಗದು ಹಣ ಹಾಗೂ ೮ ಬಿಯರ್ ಬಾಟಲ್ ಮತ್ತು ೫ಐಬೀ ವಿಸ್ಕಿ, ತೆಗೆದುಕೊಂಡು ಪರಾರಿಯಾಗಿದ್ದಾರೆ.ಸಿ.ಸಿ ಕ್ಯಾಮರಾದಲ್ಲಿ ೪ ಜನ ಕಳ್ಳರು ಕಾಣಿಸಿಕೊಂಡಿದ್ದಾರೆನ್ನಲಾಗಿದೆ.ಈ ವಿಷಯ ಸಿಂದಗಿ ಪೊಲೀಸ್ ಠಾಣೆಗೆ ತಿಳಿಸಿದಾಗ, ಸ್ಥಳಕ್ಕೆ ಸಿಂದಗಿ ಪಿ.ಎಸ್.ಐ ಭೀಮಪ್ಪ…

Read More

ಸಿಂದಗಿ: ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮನೆಕಳ್ಳತನ ಮಾಡಲು ಅಂತರಾಜ್ಯದಿಂದ ಚೆಡ್ಡಿ ಗ್ಯಾಂಗ ಬಂದಿದ್ದು, ಸದರಿ ಗ್ಯಾಂಗ ಸಕ್ರೀಯವಾಗಿರುತ್ತದೆ. ಸದರಿ ಗ್ಯಾಂಗನಲ್ಲಿ ಸುಮಾರು ನಾಲ್ಕೈದು ಜನರು ಇದ್ದಾರೆ. ಇವರು ರಾತ್ರಿ ವೇಳೆ ತಮ್ಮ ಮೈ ಮೇಲೆ ಕೇವಲ ಚಡ್ಡಿ, ಬನಿಯನ್, ಮಂಕಿಕ್ಯಾಪ ಹಾಕಿಕೊಂಡು ಮನೆ ಕಳ್ಳತನ ಮಾಡಲು ತಿರುಗಾಡುತ್ತಿದ್ದು, ಇಂತಹ ಜನರು ತಮ್ಮ ಬಡಾವಣೆ ಹಾಗೂ ಹಳ್ಳಿಗಳಲ್ಲಿ ಕಂಡು ಬಂದಲ್ಲಿ ಸಾರ್ವಜನಿಕರು ಭಯಭೀತರಾಗದೇ ಕೂಡಲೇ ಪೊಲೀಸ ಠಾಣೆ ಮತ್ತು ಪೊಲೀಸ ಕಂಟ್ರೋಲ್ ರೂಮ್ ಅಥವಾ ೧೧೨ಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಸಿಪಿಐ ಡಿ. ಹುಲುಗಪ್ಪ ಮತ್ತು ಪಿಎಸ್ಐ ಭೀಮಪ್ಪ ರಬಕವಿ ತಿಳಿಸಿದ್ದಾರೆ.*ಸಾರ್ವಜನಿಕರಿಗೆ ಸೂಚನೆ*ಸಾರ್ವಜನಿಕರು ಊರಿಗೆ ಹೋಗಬೇಕಾದ ಸಂದರ್ಭ ಬಂದಲ್ಲಿ ತಮ್ಮ ಮನೆಯಲ್ಲಿ ಬೆಲೆಬಾಳುವ ಆಭರಣಗಳು ಮತ್ತು ಹಣ ಇಟ್ಟು ಹೋಗಬಾರದು. ಮತ್ತು ಹೋಗುವ ಮುಂಚೆ ಸಿಂದಗಿ ಪೊಲೀಸ ಠಾಣೆಗೆ ಮಾಹಿತಿ ನೀಡಲು ಸಿಪಿಐ ಡಿ. ಹುಲುಗಪ್ಪ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಮನೆ ಕಳ್ಳತನ ಮಾಡುವ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದ್ದು ಈ ಗ್ಯಾಂಗ್ ನಲ್ಲಿ ೪ ರಿಂದ ೫ ಜನ ಇದ್ದಾರೆ.ಚಡ್ಡಿ, ಬನಿಯನ್ ಮತ್ತು ಮಂಕಿ ಕ್ಯಾಪ್ ಹಾಕಿಕೊಂಡು ತಿರುಗಾಡುತ್ತಿರುತ್ತಾರೆ. ಯಾರಾದರೂ ಇಂತಹ ಅಪರಿಚಿತರು ಕಂಡು ಬಂದಲ್ಲಿ ಯಾರೂ ಭಯಪಡದೇ, ಕೂಡಲೇ ಪೊಲೀಸ್ ಠಾಣೆಗೆ ತಿಳಿಸಲು ಪೊಲೀಸ್ ಪ್ರಕಟಣೆ ತಿಳಿಸಿದೆ.

Read More

*- ಇಲಾಹಿ ಇ. ಜಮಖಂಡಿ*ಚಿಮ್ಮಡ: ಮಕ್ಕಳು ಈ ಹಿಂದೆ ಶಾಲೆಗೆ ರಜೆ ಸಿಕ್ಕರೆ ಸಾಕು ಜಿಗಿಯಿತ್ತ, ಕುಣಿಯುತ್ತ ಮನೆಗೆ ಓಡೋಡಿ ಬರುತಿದ್ದರು. ಈಗ ಕಾಲ ಬದಲಾಗಿದೆ, ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಕಲಿಕೆಯ ಪೈಪೋಟಿ ಶುರುವಾಗಿದೆ. ಜ್ಞಾನಾರ್ಜನೆ ಎಲ್ಲಿ ಯಾವ ಸಮಯದಲ್ಲಿ ಸಿಕ್ಕರೂ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಗಿಬೀಳುತಿದ್ದಾರೆ.ಇದಕ್ಕೆ ಉದಾಹರಣೆ ಎಂಬಂತೆ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಮಹಾಂತೇಶ ಬಡಿಗೇರ ಕಳೆದ ಹಲವು ತಿಂಗಳುಗಳಿಂದ ಎನ್‌ಎಂಎಂಎಸ್, ಮಾನಸಿಕ ಸ್ಥಿರತೆ, ಇಂಗ್ಲಿಷ ಸೇರಿದಂತೆ ಹಲವು ವಿಷಯಗಳ ಕುರಿತು ಬೆಳಿಗ್ಗೆ ೬ ರಿಂದ ೭ ಘಂಟೆಯವರೆಗೆ ವಿಶೇಷ ತರಬೇತಿ ತರಗತಿಗಳನ್ನು ಭೋದಿಸುತಿದ್ದು, ಈ ವಿಶೇಷ ತರಗತಿಗೆ ಬೆಳಗಿನ ಚುಮು ಚುಮು ಛಳಿಯಲ್ಲೂ ಪ್ರತಿದಿನ ೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿರುವುದು ವಿದ್ಯಾರ್ಥಿಗಳ ಜ್ಞಾನದ ದಾಹಕ್ಕೆ ಹಿಡಿದ ಕನ್ನಡಿ.ಹಲವು ವಿದ್ಯಾರ್ಥಿಗಳು ಬೆಳಿಗ್ಗೆ ೫ ಘಂಟೆಗೆ ಎದ್ದು ಛಳಿಗಾಳದ ವಿಪರೀತ ಛಳಿಯಲ್ಲಿ ಸುಮಾರು ಐದು ಕಿ.ಮಿ. ಸೈಕಲ್ ಸವಾರಿ ಮಾಡಿಕೊಂಡು ಬಂದು ಈ ವಿಶೇಷ…

Read More

ಚಿಮ್ಮಡ: ನಿತ್ಯ ಸಮಾಜದಲ್ಲಿ ನಾವು ಉತ್ತಮ ಬದುಕು ಕಂಡುಕೊಳ್ಳಬೇಕಾದರೆ ಸಂಸ್ಕೃತಿ, ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಮಕ್ಕಳಿಗೂ ಕಲಿಸಬೇಕೆಂದು ಸ್ಥಳಿಯ ವಿರಕ್ತಮಠದ ಪ್ರಭು ಸ್ವಾಮಿಗಳು ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಪ್ರಭುಲಿಂಗೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಪ್ರಭು ಮಹಾಸ್ವಾಮಿಗಳ ೫೩ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಮುದಾಯಗಳ ಪ್ರಮುಖರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಬೆಳಗುತ್ತಿರುವ ದೀಪಗಳನ್ನು ಆರಿಸಿ ಜನ್ಮದಿನ ಆಚರಿಸುವ ಸಂಸ್ಕತಿ ಪಾಶ್ಚಾತರದ್ದು. ಇನ್ನೊಬ್ಬರ ಜೀವನದಲ್ಲಿ ಬೆಳಗುವ ದೀಪವಾಗುವ ಕಾರ್ಯ ಮಾಡುವುದು ಭಾರತೀಯ ಸಂಸ್ಕೃತಿ. ನಮ್ಮ ಪರಂಪರೆಯನ್ನು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಆ ಕಾರಣಕ್ಕೆ ಶ್ರೀಮಠದ ಭಕ್ತ ಮಂಡಳಿ ಈ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಗ್ರಾ.ಪಂ ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ ಮಾತನಾಡಿ, ಭಾರತೀಯ ಸಂಸ್ಕೃತಿ, ಸಂಸ್ಕಾರ ಮಠಗಳಿಂದ ದೊರೆಯುತಿದ್ದು ಅದನ್ನು ಜೀವನದಲ್ಲಿ ಅಳವಡಿಸಿಕೊಂಡವರು ಎಂದಿಗೂ ಜೀವನದಲ್ಲಿ ತಪ್ಪು ಹೆಜ್ಜೆ ಇಡುವುದಿಲ್ಲ ಎಂದರು,ಪ್ರಭು ನೇಸೂರ ಮಾತನಾಡಿದರು.ಗ್ರಾಮದ ಪ್ರಮುಖರಾದ ರಾಮಣ್ಣಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ,…

Read More

ರೇವತಗಾಂವದಲ್ಲಿ ಎಳ್ಳ ಅಮವಾಸ್ಯ ಚರಗ ಚೆಲ್ಲುವ ಸಂಭ್ರಮ ಚಡಚಣ: ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ರೇವತಗಾಂವ ಗ್ರಾಮದ ಕೆಂಬತ್ತಿ ವಸ್ತಿಯಲ್ಲಿನ ರೈತ ಮಹಿಳೆಯರು ಗುರುವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತೈದೆಯರಿಗೆ ಊಡಿ ತುಂಬುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.ಬೆಳೆದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜೆ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಭೂತಾಯಿಗೆ ಚರಗ ಚೆಲ್ಲಿದರು. ಗ್ರಾಮದ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯ ಸೇರಿದಂತೆ ಇತರ ವಿಶೇಷ ಭೋಜನವನ್ನು ಭೂತಾಯಿಗೆ ಅರ್ಪಿಸಿದರು.ಚರಗ ಚೆಲ್ಲುವ ಸಂಭ್ರಮ ಮುಗಿದ ನಂತರ ತುಂಬಿದ ಹೊಲದ ಮಧ್ಯ ಮುತ್ತೆöÊದೆಯರ ಊಟವಾದ ಮೇಲೆ ಎಲ್ಲರೂ ಸಹ ಭೋಜನವನ್ನು ಸವಿದರು. ಸ್ವಲ್ಪ ಹೊತ್ತು ಹೊಲದಲ್ಲಿ ವಿಶ್ರಾಂತಿ ಕಳೆದು ಸಂಜೆ ವೇಳೆಗೆ ಮನೆಗೆ ಮರುಳಿದರು.ರೇವತಗಾಂವ…

Read More

ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿನಿ ಪೂಜಾ ಸಾರವಾಡ ಇವರು ಕರ್ನಾಟಕ ಸರಕಾರದ ಕರ್ನಾಟಕ ಸ್ವೀಪ್ ಸಮಿತಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಆರ್.ಎಚ್. ರಮೇಶ ತಿಳಿಸಿದ್ದಾರೆ.ವಿಜಯಪುರ ಜಿಲ್ಲಾ ಪಂಚಾಯತಿಯ ಜಿಲ್ಲಾ ಸ್ವೀಪ್ ಸಮಿತಿ ಏರ್ಪಡಿಸಿದ್ದ ಸ್ಪರ್ಧೆಯಲ್ಲೂ ಜಿಲ್ಲೆಗೆ ಮೊದಲಿಗಳಾಗಿ ಆಯ್ಕೆಯಾಗಿದ್ದ ಪೂಜಾ ಅವರು ೨೦೨೩-೨೪ನೇ ಸಾಲಿನ ರಾಷ್ಟ್ರೀಯ ಮತದಾರ ದಿನಾಚರಣೆ ಅಂಗವಾಗಿ ನಡೆದ ಕನ್ನಡ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈಗ ಫಲಿತಾಂಶ ಪ್ರಕಟವಾಗಿದೆ ಎಂದು ಪ್ರಾಚಾರ್ಯರು ತಿಳಿಸಿದ್ದು, ಕಾಲೇಜು ಅಭಿವೃದ್ದಿ ಸಮಿತಿಯು ವಿದ್ಯಾರ್ಥಿನಿಯನ್ನು ಅಭಿನಂದಿಸಿದೆ.

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜನವರಿ ೨೧ ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ಸರ್ಕಾರದ ವಿಶೇಷ ಪ್ರತಿನಿಧಿ-೨ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ವಿ. ಪಾಟೀಲ, ಹಣಮಂತ್ ಆರ್. ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ. ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ಭೀಮನಗೌಡ (ರಾಜುಗೌಡ) ಪಾಟೀಲ, ಅಶೋಕ ಮನಗೂಳಿ, ಮಹಾನಗರ…

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜನವರಿ ೧೫ ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿದಲ್ಲಿ ಶಿವಯೋಗಿ ಸಿದ್ಧರಾಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ರಂಗಮಂದಿರದವರೆಗೆ ಶಿವಯೋಗಿ ಸಿದ್ಧರಾಮರ ಭಾವಚಿತ್ರ ಮೆರವಣಿಗೆ ಹಾಗೂ ಬೆಳಿಗ್ಗೆ ೧೧ ಗಂಟೆಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ಸರ್ಕಾರದ ವಿಶೇಷ ಪ್ರತಿನಿಧಿ-೨ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ವಿ.…

Read More

ವಿಜಯಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ೨೦೨೪ರ ಮಾರ್ಚ್ ೦೯ರಂದು ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗೂ ತಾಲೂಕಾ ಕೇಂದ್ರದ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ.ರಾಷ್ಟ್ರೀಯ ಲೋಕ್-ಅದಾಲತ್‌ನಲ್ಲಿ ರಾಜಿಯಾಗಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ಪಾಲು ವಿಭಾಗ ಕೋರಿ ಸಲ್ಲಿಸಿರುವ ದಾವೆಗಳು, ದೂರವಾಣಿ ಬಾಕಿ ಬಿಲ್ಲು ಪಾವತಿ ಪ್ರಕರಣಗಳು, ನೀರಿನ ಬಿಲ್ಲು ಬಾಕಿ ಪಾವತಿ ಪ್ರಕರಣಗಳು, ಜೀವನಾಂಶ ಕೊರಿ ಸಲ್ಲಿಸಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವಿಲ್ ಪ್ರಕರಣಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಲಾಗುವುದು.ಮಾ.೯ರಂದು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುವ ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಲು ಸುವರ್ಣಾವಕಾಶವಿದ್ದು, ಹೆಚ್ಚಿನ ಸಂಖ್ಯೆಗೆ ಭಾಗವಹಿಸಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ…

Read More