ವಿಜಯಪುರ: ವಿಜಯಪುರದಲ್ಲಿ ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ ಪ್ರಾರಂಭವಾಗಿದೆ. ಇದರಿಂದ ಗ್ರಾಮಾಂತರ ಜನರಿಗೂ ಬಂಜೆತನ ಸಮಸ್ಯೆ ಪರಿಹರಿಸಿಕೊಳ್ಳಲು ಸೂಕ್ತವಾಗಲಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಶಿವಾನಂದ ಮಾಸ್ತಿಹೊಳಿ ಇಂದಿಲ್ಲಿ ಹೇಳಿದರು.
ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ವು ನಗರದ ಹೋಟೇಲ್‌ದಲ್ಲಿ ಹೆರಿಗೆ ಮತ್ತು ಪ್ರಸೂತಿ ರೋಗ ತಜ್ಞರಿಗಾಗಿ ಏರ್ಪಡಿಸಿದ ಬಂಜೆತನ ನಿವಾರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತ, ಇದು ಕೇವಲ ಮೆಟ್ರೋ-ಪಾಲಿಟಿನ್ ನಗರಗಳಲ್ಲಿ ಸಿಗುವ ಬಂಜೆತನ ಎಂಬ ಸಮಸ್ಯೆಗೆ ಪರಿಹಾರವನ್ನು ಈಗ ಜಿಲ್ಲಾ ಕೇಂದ್ರಗಳಲ್ಲಿ ಸಿಗುವಂತೆ ಅನೇಕ ಕ್ಲಿನಿಕ್ಸ್ ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ವು ಪ್ರಾರಂಭವಾಗಿದ್ದು, ಬಂಜೆತನ ಸಮಸ್ಯೆಯಿಂದ ಬಳಲುವ ಗ್ರಾಮಾಂತರ ರೋಗಿಗಳು ತಮ್ಮ ಸಮೀಪದ ಕೇಂದ್ರಗಳಲ್ಲಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದವರು ಹೇಳಿದರು.
ಈ ಸೇವೆಯಲ್ಲಿ ೧೬ ವರ್ಷ ಸಕ್ರೀಯವಾಗಿ ಸೇವೆ ಸಲ್ಲಿಸಿದ ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ.ಎಸ್.ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಲೀನಿಕ್ ಬೆಂಗಳೂರು, ದೆಹಲಿ, ಗುರುಗಾಂ, ಮುಂಬೈ, ಬಿಜಾಪುರ, ಮಂಗಳೂರು ಕೊಲಾರ ಹಾಗೂ ಚೆನೈ ಗಳಲ್ಲಿ ಪ್ರಾರಂಭವಾಗಿವೆ. ದೇಶದಾದ್ಯಂತ ಇನ್ನು ೩೬ ಕೇಂದ್ರಗಳನ್ನು ತೆರೆಯಲು ಇಚ್ಛಿಸಿದ್ದೇವೆ, ಎಲ್ಲಾ ಕೇಂದ್ರಗಳಲ್ಲಿ ಲ್ಯಾಬ್, ಅಲ್ಟ್ರಾ ಸೋನೊಗ್ರಫಿ (ಸ್ಕ್ಯಾನಿಂಗ್), ಇನ್ ಟ್ರಾ-ಯುಟ್ರನ್ ಇನ್ಸೆಮಿನೇಷನ್ (ಐಯುಐ), ಲೆಪ್ರೊಸ್ಕೋಪಿ, ಹಿಸ್ಟೆರೋಸ್ಕೋಪಿ, ಟೆಸ್ಟ್ ಟ್ಯೂಬ್ ಬೇಬಿ(ಪ್ರನಾಳ ಶಿಶು) ಸೇರಿದಂತೆ ಅನೇಕ ಸೌಲಭ್ಯಗಳು ಸಿಗುವಂತೆ ವ್ಯವಸ್ಥೆ ಕಲ್ಲಿಸಿಕೊಡಲಾಗಿದೆ. ಬಂಜೆತನ ಸಮಸ್ಯೆಯಿಂದ ಬಳಲುವ ರೋಗಿಗಳು ಜಿಲ್ಲಾ ವೈದ್ಯರ ಬಳಿ ಬಂದಾಗ ಈ ಕೇಂದ್ರಗಳ ಮಾಹಿತಿ ನೀಡಲು ಕರೆ ನೀಡಿದರು.
ಈ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ ಹುಬ್ಬಳ್ಳಿ, ಡಾ. ಕಾವ್ಯಾ ಶರ್ಮಾ, ಡಾ. ಶಿವಕುಮಾರ ಪೂಜಾರಿ, ರಾಜನ್, ಪ್ರಕಾಶಗೌಡ ಹಾಗೂ ಆರ್.ಸಿ.ಜೋಶಿ ಸೇರಿದಂತೆ ಅನೇಕ ವೈದ್ಯರುಗಳು ಉಪಸ್ಥಿತರಿದ್ದರು. ವಿಜಯಪುರ ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ ಸಂಸ್ಥೆಯ ಡಾ.ಶಿವಕುಮಾರ ಪೂಜಾರಿ ಸರ್ವರನ್ನು ಸ್ವಾಗತಿಸಿದರು.
ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ಬೇಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ದ ಡಾ. ಕಾವ್ಯಾ ಶರ್ಮಾ ಸೇರಿದಂತೆ ಅನೇಕರು ಬಂಜೆತನ ನಿವಾರಣಾ ಸಮಸ್ಯೆಯ ಚಿಕಿತ್ಸೆಯ ಕುರಿತು ಮಾತನಾಡಿದರು. ವಿಜಯಪುರ ಜಿಲ್ಲೆಯ ಹೆರಿಗೆ ಮತ್ತು ಪ್ರಸೂತಿ ರೋಗ ತಜ್ಞರುಗಳಾದ ನಳಿನಿ ಬಾಗಲಕೋಟಕರ, ಪಿ.ಬಿ.ಜಾಜು, ಸುಚೇತಾ ಆಕಾಶ, ಎಫ್.ಎನ್.ಮಾಳಗಿ, ಶಕುಂತಲಾ ಹೋಳಿ, ಶೃತಿ ಉಟಗಿ, ವೀಣಾ ದಿವಟೇರ, ಉಷಾ ಬೆಳಗಲಿ, ಜ್ಯೋತಿ ದೇವರೆಡ್ಡಿ ಹಾಗೂ ಸುನಿತಾ ಪಾಟೀಲ ಅವರುಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಬಂಜೆತನಕ್ಕೆ ಬೆಬಿ ಸೈನ್ಸ್ ಐವಿಎಫ್ ಕ್ಲಿನಿಕ್ಸ್ ದಾರಿದೀಪ :ಡಾ.ಮಾಸ್ತಿಹೊಳಿ
Related Posts
Add A Comment
