ವಿಜಯಪುರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಕರೆ ನೀಡಿದರು.
ಮಾ.೩೧ರ ರವಿವಾರದಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛ ಭಾರತ, ಮಿತ ನೀರು ಬಳಕೆ ಹಾಊ ಮತದಾರ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮನುಷ್ಯನ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸ್ವಚ್ಛತ್ರೆ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅದರಂತೆ ಜಗತ್ತಿನ ಅತ್ಯಅಮೂಲ್ಯವಾದ ವಸ್ತು ನೀರು. ಇದರ ಸದುಪಯೋಗವಾಗಬೇಕು. ನೀರು ಎಲ್ಲೆಂದರಲ್ಲಿ ಚೆಲ್ಲದೇ ಅವಶ್ಯಕತೆಯನುಸಾರವಾಗಿ ಮಿತವಾಗಿ ನೀರನ್ನು ಬಳಸುವಂತೆ ಕರೆ ನೀಡಿದ ಅವರು, ಅತಿಯಾದ ಬಳಕೆಯಿಂದ ಮುಂದಿನ ಪೀಳಿಗೆ ಮೇಲೆ ಬೀರುವ ಪರಿಣಾಮ ಕುರಿತು ವಿವರವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಅಧ್ಯಕ್ಷರು ರೋಟರಿ ಕ್ಲಬ್ ಅಧ್ಯಕ್ಷರಾದ ಮಲ್ಲ್ಲಿರ್ಕಾಜುನ ಕಲಾದಗಿ ಅವರು ಮಾತನಾಡಿ, ರೋಟರಿ ಕ್ಲಬ್ ಸಾಮಾಜಿಕ ಕ್ಷೇತ್ರಗಳಲ್ಲಿ ನೀಡುತ್ತಿರುವ ಸೇವೆಗಳ ಕುರಿತು ವಿವರಿಸಿ, ಇನ್ನು ಮುಂದೆ ಪ್ರತಿ ತಿಂಗಳು ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಆವರಣ ಸ್ವಚ್ಛಗೊಳಿಸುವುದು ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕ್ಲಬಿನ ಚಾರ್ಡರ್ ಅಧ್ಯಕ್ಷರಾದ ಡಿ.ಎಸ್. ಪಾಟೀಲ ಇವರು ಮಾತನಾಡಿದರು.
ಕಾರ್ಯಕ್ರಮದಲ್ಲಿ. ಡಾ. ಚಂದು ರಾಠೋಡ,, ಆಸ್ಪತ್ರೆ ಎಲ್ಲ ವೈದ್ಯರು, ಶುಶ್ರೂಷಕ ಅಧಿಕಾರಿಗಳು, ಎಲ್ಲ ಸಿಬ್ಬಂದಿಗಳು ಮತ್ತು ನರ್ಸಿಂಗ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ರೋಟರಿ
ಕ್ಲಬ್ ಸದಸ್ಯರಾದ ಡಾ. ಅಶೋಕ ವಾಲಿ, ಗುರುಶಾಂತ ನಿಡೋಣಿ, ದಿಲೀಪ ಪೋಜಾರಿ, ಶ್ರೀಕಾಂತ
ಶಿರಡೋಣ, ದಿಲೀಪ ತಾಳಿಕೋಟಿ, ವಿಠ್ಠಲ ತೇಲಿ, ಉದಯ ಯಾಳವಾರ, ಪ್ರಸಾದ ನಾಯ್ಡು, ಶೈಲೇಶ ಸಾವಳಾ, ಬಸವರಾಜ ಸೊನ್ನದ, ರವಿ ಅಂಗಡಿ, ರಾಜು ಬಿಜ್ಜರಗಿ, ರಾಜ ಶಾಹಾ, ಡಾ. ಹಂಪ್ಪನಗೌಡ
ಭಾಗವಹಿಸಿ ಸ್ವಚ್ಛತೆಯ ಅಭಿಯಾನದಲ್ಲಿ ತೊಡಗಿಸಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

