ಚಿಮ್ಮಡ: ಗ್ರಾಮದ ಸರ್ವಧರ್ಮಿಯರ ಆರಾದ್ಯ ದೈವ ಶ್ರೀ ಯಮನೂರಪ್ಪನ (ರಾಜಾಬಾಗ್ ಸವಾರ) ಉರುಸು ಮಹೋತ್ಸವ ಎರಡು ದಿನಗಳಕಾಲ ವಿಜ್ರಂಬನೆಯಿಂದ ನಡೆದು ಶನಿವಾರ ರಾತ್ರಿ ಪ್ರಸಾದ ವಿತರಣೆಯೊಂದಿಗೆ ಮಂಗಲಗೊಂಡಿತು.
ಗ್ರಾಮದ ಎಲ್ಲ ಸಮುದಾಯಗಳ ಬಕ್ತಾದಿಗಳು ಸೇರಿ ಸೌಹಾರ್ದ್ಯತೆಯಿಂದ ನೆರವೇರಿಸಲಾಗುವ ಈ ಉರುಸು ಮಹೋತ್ಸವದಲ್ಲಿ ಶುಕ್ರವಾರ ಗಂಧ ಕಾರ್ಯಕ್ರಮ ನೆರವೇರಿದರೆ, ಶನಿವಾರದಂದು ಗ್ರಾಮದ ಸರ್ವ ಧರ್ಮೀಯ ಭಕ್ತರಿಂದ ಮುದ್ದೆ ಸಕ್ಕರೆ, ಗಂಧದ ನೈವೆದ್ಯ ಅರ್ಪಣೆ ಕಾರ್ಯಕ್ರಮ ಹಾಗೂ ರಾತ್ರಿ ಸಾರ್ವಜನಿಕ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಇತರೆಲ್ಲೆಡೆ ಮುಸ್ಲೀಮ್ ಬಾಂಧವರಿಂದ ನೆರವೇರಲ್ಪಡುವ ಈ ಉರುಸು ಮಹೋತ್ಸವವನ್ನು ಗ್ರಾಮದ ಸರ್ವ ಸಮಾಜ ಬಾಂಧವರ ಸಹಕಾರದೊಂದಿಗೆ ರೈತರಾದ ಬಳಗಾರ ಸಹೋದರರು ತಮ್ಮ ಸ್ವಂತ ಖರ್ಚಿನಿಂದ ಪ್ರತಿವರ್ಷ ವಿಜ್ರಂಭಣೆಯಿಂದ ಉರುಸು ನೆರವೇರಿಸಿಕೊಂಡು ಬರುತ್ತಿದ್ದುದು ಈ ಭಾಗದ ವಿಶೇಷ.
Subscribe to Updates
Get the latest creative news from FooBar about art, design and business.
Related Posts
Add A Comment

