ವಿಜಯಪುರ: ಮತದಾರರಲ್ಲಿ ರಾಜಕೀಯ ಪ್ರಜ್ಞೆ ಮೂಡಿದರೆ, ದೇಶದಲ್ಲಿ ಮತ್ತು ನಮ್ಮ ಲೋಕಸಭೆ ಕ್ಷೇತ್ರದಲ್ಲೂ ಬದಲಾವಣೆ ನಿಶ್ಚಿತ ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮುಳಸಾವಳಗಿಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ, ತಮಗೊಂದು ಅವಕಾಶ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೆ ಬದ್ಧ ಎಂದರು. ರಾಜ್ಯ ಸರಕಾರದ ಕೆಲಸ ಕೇದ್ರದಲ್ಲೂ ಮುಂದುವರಿಯಲಿವೆ. ಕೆಲಸ ಮಾಡುವವರಿಗೆ ಆದ್ಯತೆ ನೀಡಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಮೋದಿ ಮತ್ತು ಸದ್ಯದ ಸಂಸದರು ಬರೀ ಮಾತೇ ಆಡುತ್ತಾರೆ. ದಶಕದಿಂದ ದೇಶಕ್ಕಾಗಲೀ ವಿಜಯಪುರ ಲೋಕಸಭೆ ಕ್ಷೇತ್ರಕ್ಕಾಗಲಿ ನಯಾ ಪೈಸೆಯ ಲಾಭವಾಗಿಲ್ಲ ಎಂದು ಹೇಳಿದರು. ರಾಜ್ಯ ಸರಕಾರ ಹೇಳಿದಂತೆ ನಡೆದುಕೊಂಡಿದೆ ಎನ್ನುವುದಕ್ಕೆ ಗ್ಯಾರಂಟಿಗಳು ಲಾಗೂ ಆಗಿದ್ದೇ ಸಾಕ್ಷಿ. ಹೆಣ್ಣುಮಕ್ಕಳು, ಯುವಕರಲ್ಲದೇ ಎಲ್ಲ ರ‍್ಗದ ಜನಕ್ಕೆ ಪ್ರತಿ ತಿಂಗಳು ಆರು ಸಾವಿರ ರೂ.ನಷ್ಟು ಹಣ ಬಂದು, ರ‍್ಥಿಕ ಸ್ಥಿತಿ ಸುಧಾರಿಸಿದೆ. ಬಡವರ, ದೀನರ ಬದುಕು ಹಸನಾಗಿದೆ. ಸದ್ಯ ಕಾಂಗ್ರೆಸ್‌ನ ಲೋಕಸಭೆ ಅಭ್ರ‍್ಥಿಗೆ ಮತ ನೀಡಿದರೆ ಜಿಲ್ಲೆ ಮತ್ತಷ್ಟು ಏಳ್ಗೆ ಸಾಧಿಸಲಿದೆ. ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನಷ್ಟು ಗ್ಯಾರಂಟಿಗಳು ಜಾರಿಗೆ ಬರಲಿವೆ. ಹೆಣ್ಣುಮಕ್ಕಳಿಗೆ ತಿಂಗಳಿಗೆ ಲಕ್ಷ ರೂ. ಸಿಗಲಿವೆ. ಹಾಗಾಗಿ ತಾವುಗಳು ಮೋದಿಯ ಮೋಡಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು.
ಪೂಜ್ಯ ಲಿಂಗರಾಯ ಮಹಾರಾಜ, ಹಾಳಾಸಾಬ ದರ‍್ಗಾದ ಅಬ್ದುಲ್ಬಶೇಕರು ಮುಜಾವರ, ಸುಭಾಶ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಬಾಪುಗೌಡ ಪಾಟೀಲ, ಡಾ.ಪ್ರಭುಗೌಡ ಲಿಂಗದಳ್ಳಿ, ಬಶೀರ್ ಬೇಪಾರಿ, ಬಾಳನಗೌಡ ಪಾಟೀಲ, ಸೋಮನಾಥ ಕಳ್ಳಿಮನಿ, ಸರಿತಾ ನಾಯಕ, ಎಂ.ಜಿ. ಯಂಕಂಚಿ, ಪರುಶರಾಮ ದಿಂಡವಾರ, ಸಾಬು ಹುಸನಳ್ಳಿ, ಸೈಯದ್ ರೂಗಿ, ಬಸವನಗೌಡ ಪಾಟೀಲ, ಸುರೇಶಗೌಡ ಪಾಟೀಲ, ಎಂ.ಎಂ. ಪಟೇಲ, ಸದಾಶಿವ ರ‍್ಜಗಿ, ಡಿ.ಎಲ್. ಚವ್ಹಾಣ, ವಿಠ್ಠಲ ದೇಗಿನಾಳ, ಅಡಿವೆಪ್ಪ ಕೊಂಡಗೂಳಿ, ಸುಭಾಷ, ರಾಜು ಸಿಂಧಕೇರಿ, ಸುನಂದಾ ಹೊನ್ಬಳ್ಳಿ, ಅಂಬಣ್ಣ ಆನೇಗುಂದಿ, ಮೂಲಿಮನಿ ಸಾಹುಕಾರ್ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

