Author: editor.udayarashmi@gmail.com

ಸಿಂದಗಿಯಲ್ಲಿ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣಿ ಮಾಹಿತಿ ಸಿಂದಗಿ: ಪಟ್ಟಣದ ಡಿ. ೨೪ ರಂದು ರಾತ್ರಿ ೯ ಗಂಟೆಯ ಸುಮಾರಿಗೆ ಯಾರೋ ಕಳ್ಳರು ಸಿಂದಗಿ ಪಟ್ಟಣದ ಹಳೇ ಬಜಾರದ ಬಸವಣ್ಣ ದೇವರ ಗುಡಿಯ ಹತ್ತಿರ ಇರುವ ಶಾಂತವೀರಪ್ಪ ತಂದೆ ಗುರುಬಸಪ್ಪ ವಾರದ ಎಂಬುವವರ ಅಂಗಡಿಯಲ್ಲಿ ಒಟ್ಟು ೪೦,೮೭,೮೮೦/-ರೂ ಕಿಮ್ಮತ್ತಿನ ಸಿಗರೇಟ ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕು ಡಿ.೨೫ ರಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರನ್ವಯ ಖಚಿತ ಮಾಹಿತಿ ಮೇರೆಗೆ ಒಬ್ಬ ಆರೋಪಿಯನ್ನು ಬಂಧಿಸಿ ಆರೋಪಿತನಿಂದ ರೂ.೩೭ ಲಕ್ಷ ಹಾಗೂ ಪ್ರಕರಣದಲ್ಲಿ ಉಪಯೋಗಿಸಿದ ವಾಹನ ಮತ್ತು ವಸ್ತುಗಳನ್ನು ವಶಪಸಿಕೊಳ್ಳಲಾಗಿದೆ ಎಂದು ವಿಜಯಪುರ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವಣಿ ತಿಳಿಸಿದರು.ಶುಕ್ರವಾರ ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಆರೋಪಿತನನ್ನು ದಸ್ತಗೀರ ಮಾಡಿ ವಶಪಡಿಸಿಕೊಂಡ ವಸ್ತುಗಳನ್ನು ಪ್ರದರ್ಶಿಸಿ ಮಾತನಾಡಿದ ಅವರು, ವಿಜಯಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಇಂಡಿ ಪೊಲೀಸ್ ಉಪಾಧೀಕ್ಷಕ ಎಚ್.ಎಸ್.ಜಗದೀಶ ರವರ ಮಾರ್ಗದರ್ಶನದಲ್ಲಿ ಸಿಂದಗಿ ವೃತ್ತದ ಸಿ.ಪಿ.ಐ…

Read More

ಸಿಂದಗಿ: ಪಟ್ಟಣದ ಆದಿಶೇಷ ಸಂಸ್ಥಾನ ಹಿರೇಮಠದ ೨೮ನೆಯ ಜಾತ್ರಾಮಹೋತ್ಸವದ ನಿಮಿತ್ತ ಜ.೧೪ರಿಂದ ಜ.೨೩ವರೆಗೆ ಎಡಿಯೂರ ಶ್ರೀ ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಪ್ರಾರಂಭೋತ್ಸವ ಹಾಗೂ ಜ.೨೩ರಂದು ಬೆಳಿಗ್ಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಹಾಗೂ ಧರ್ಮಸಭೆ ನಡೆಯಲಿದೆ ಎಂದು ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ತಿಳಿಸಿದರು.ಪಟ್ಟಣದ ಶ್ರೀಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀಗಳು, ಜ.೨೩ರ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ. ಪಾಟೀಲ ಅವರಿಗೂ ಆವ್ಹಾನ ನೀಡಲಾಗಿದೆ. ಅವರು ಸೇರಿದಂತೆ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರಾದಿಯಾಗಿ ಜನಪ್ರತಿನಿಧಿಗಳು ಅಂದಿನ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಜ.೧೪ರಿಂದ ಜ.೨೩ರವರೆಗೆ ಸಂಜೆ ೬.೩೦ ಗಂಟೆಗೆ ಶ್ರೀಮಠದ ಆವರಣದಲ್ಲಿ ಎಡಿಯೂರ ಸಿದ್ದಲಿಂಗೇಶ್ವರರ ಮಹಾಪುರಾಣ ಪ್ರವಚನ ಕಾರ್ಯಕ್ರಮ ನಡೆಯುವುದು. ಜ.೨೨ರಂದು ರಂದು ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಸ್ವಾಮಿಗಳು ಜಾಹಗೀರದಾರ ಅವರ ೫೩ನೆಯ ವರ್ಷದ ಅನುಷ್ಠಾನದ ಸುವರ್ಣ ಮಹೋತ್ಸವ, ಜಂಗಮವಟುಗಳಿಗೆ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ಜರುಗುವುದು ಎಂದು ತಿಳಿಸಿದರು.ಜ.೨೩ರ ಬೆಳಗಿನ…

Read More

ಆಲಮಟ್ಟಿ: ಇದೇ ಪ್ರದೇಶದಲ್ಲಿ ಜನಿಸಿರುವ ಮಹಾನ್ ಮಾನವತಾವಾದಿ ಬಸವಣ್ಣನವರ ಚರಿತ್ರೆಯನ್ನು ಸಾರುವ ಒಂದು ಉದ್ಯಾನ ನಿರ್ಮಿಸುವುದು ಅಗತ್ಯವಾಗಿದೆ ಎಂದು ನಾದಬ್ರಹ್ಮ ಹಂಸಲೇಖ ಅಭಿಪ್ರಾಯಪಟ್ಟರು.ಶುಕ್ರವಾರ ಆಲಮಟ್ಟಿ ಮಯೂರಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೂರು ರಾಜ್ಯಗಳ ಜನತೆಯ ದಾಹ ನೀಗಿಸುವ ಕೃಷ್ಣಾ ನದಿಯು ರಾಜ್ಯದಲ್ಲಿ ಉದ್ದವಾಗಿ ಹರಿದು ಆಲಮಟ್ಟಿ ಅಣೆಕಟ್ಟು ಒಂದರಲ್ಲಿಯೇ ೧೨೩ಟಿಎಮ್‌ಸಿ ನೀರು ಸಂಗ್ರಹಿಸಿ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುತ್ತಿದೆ. ನಾವು ಕಾವೇರಿ ನದಿಯಲ್ಲಿ ಸಂಗ್ರಹವಾಗುವ ನೀರಿನಲ್ಲಿ ಒಂದು ಟಿಎಮ್‌ಸಿ ಅಡಿ ನೀರಿಗೂ ಹೋರಾಟ ಮಾಡುತ್ತೇವೆ, ಆದರೆ ಆಲಮಟ್ಟಿಯಲ್ಲಿ ೧೨೩ಟಿಎಮ್‌ಸಿ ಅಡಿ ನೀರು ಸಂಗ್ರಹಿಸುತ್ತಿದ್ದರೂ ಇದರ ಬಗ್ಗೆ ವ್ಯಾಪಕವಾಗಿ ಪ್ರಚಾರದಲ್ಲಿ ಮತ್ತು ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗಲು ಈ ಭಾಗದ ಜನರು ಗಟ್ಟಿ ಧ್ವನಿ ಎತ್ತದೇ ಇರುವುದು ಕಾರಣವಾಗಿದೆ ಎಂದರು.ಕೃಷ್ಣಾ ನದಿಯ ಬಗ್ಗೆ ಕಿಸಾನರ ಕೃಷಿಕರ ರೈತರ ಲಾಲಬಹಾದ್ದೂರ್ ಆಲಮಟ್ಟಿ ಎಂದು ಇಂದು ನಾಲ್ಕು ಹಾಡುಗಳನ್ನು ರಚಿಸುತ್ತಿದ್ದೇನೆ ಬೆಂಗಳೂರಿಗೆ ಹೋದ ನಂತರ ಈ ಭಾಗದ ಚಿತ್ರೀಕರಣಕ್ಕೆ ತಂಡವನ್ನು ಕಳಿಸಿ, ಈ ಭಾಗದ ಮಹತ್ವದ ಬಗ್ಗೆ…

Read More

ವಿಜಯಪುರ: ಯುವಕರು ದೇಶದ ಪ್ರಗತಿಗೆ ಸಹಾಯವಾಗುವ ಸಾಧನೆಗಳನ್ನು ಮಾಡಬೇಕು ಎಂದು ಎಸ್. ಎಸ್. ಪಿಯು ಕಾಲೇಜಿನ ಉಪನ್ಯಾಸಕ ಅಮರೇಶ ಸಾಲಕ್ಕಿ ಹೇಳಿದ್ದಾರೆ.ತಿಕೋಟಾದಲ್ಲಿ ಬಿ.ಎಲ್.ಡಿ.ಇ, ಸಂಸ್ಥೆಯ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಇಂದು ಶುಕ್ರವಾರ ಸ್ವಾಮಿ ವಿವೇಕಾನಂದರ 160ನೇ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚಾರಣೆಯಲ್ಲಿ ಅವರು ಉಪನ್ಯಾಸ ನೀಡಿದರು.ಸ್ವಾಮಿ ವಿವೇಕಾನಂದರ ಜೀವನ, ಆದರ್ಶ ಮತ್ತು ತತ್ವಗಳ ಕುರಿತು ಮಾತನಾಡಿದ ಅವರು, ದೇಶದ ಪ್ರಗತಿಗೆ ಸ್ವಾಮಿ ವಿವೇಕಾನಂದರ ನೀಡಿರುವ ಸಲೆಹಗಳು ಇಂದಿಗೂ ಪ್ರಸ್ತುತವಾಗಿವೆ. ಕ್ರಿಯಾಶಕ್ತಿ, ಇಚ್ಛಾಶಕ್ತಿ, ಮತ್ತು ಜ್ಞಾನಶಕ್ತಿ ಈ ಮೂರನ್ನು ಯಾರು ಸಮರ್ಥವಾಗಿ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದುವರೆಯಬೇಕು ಎಂದು ಹೇಳಿದರು.ಸ್ವಾಮಿ ವಿವೇಕಾನಂದ ಕುರಿತು ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಪ್ರಕಾಶ ಸಿದ್ದಾಪುರ, ಕಾರ್ಯಕ್ರಮದ ಸಂಯೋಜಕ ಆಕಾಶ ಜಾಧವ, ಸಂತೋಷ ಇಂಡಿ, ಸಿದ್ದು ತಡಲಗಿ, ಬಸಲಿಂಗಮ್ಮ ಹಯ್ಯಾಳ, ಸಿದ್ದಮ್ಮ…

Read More

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಎಬಿವಿಪಿ ವಿಜಯಪುರ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಥ್ರೊಬಾಲ್ ವಿವೇಕ್ ಟ್ರೊಫಿ-2024 ಪಂದ್ಯಾವಳಿಯನ್ನು ಗೆದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.ಜ್ಞಾನ-ಶೀಲ-ಏಕತೆ ಸಾರಿದ ಸ್ವಾಮಿ ವಿವೇಕಾನಂದರ ಜಯಂತಿ ಸಾಕ್ಷೀಕರಿಸಲು ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಪೀಳಿಗೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಎಬಿವಿಪಿ ವಿಜಯಪುರ ಘಟಕ ಖೇಲೋ ಭಾರತ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.ಜನೇವರಿ 10 ರಂದು ಬುಧವಾರ ನಗರದ ಡಾ. ಬಿ.ಆರ್.ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿ.ಎಲ್.ಡಿ.ಇ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಬಿ.ಎಲ್.ಡಿ.ಇ ಸಂಸ್ಥೆಯ ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟದ್ದ ಪಂದ್ಯಾವಳಿಗೆ ಪ್ರವೇಶ ಪಡೆಯಿತು.ಪಂದ್ಯಾವಳಿಯ ನಂತರ ನಡೆದ ಕಾರ್ಯಕ್ರಮದಲ್ಲಿ ವಿಜಯಪುರದ ಬೆನಕಟ್ಟಿ ಪಿಯು ಕಾಲೇಜಿನ ಕಾರ್ಯಾಧ್ಯಕ್ಷೆ ಹೇಮಲತಾ ಬೆನಕಟ್ಟಿ ಮತ್ತು ಪಿಡಿಜೆ ಹೈಸ್ಕೂಲಿನ ನಿವೃತ್ತ ದೈಹಿಕ ಶಿಕ್ಷಕ ಎಸ್. ಎಸ್. ಹಿರೇಮಠ ಪ್ರಶಸ್ತಿ ಪಶಸ್ತಿ ಪ್ರಧಾನ ಮಾಡಿದರು. ವಿಜೇತ ತಂಡದ ನಾಯಕಿ…

Read More

ಬಿ.ಎಲ್.ಡಿ.ಇ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ವಿಜಯಪುರ:‌ ಇಂದಿನ ಯುವಕರು ಅನ್ಯ ಚಟಕ್ಕೆ ದಾಸರಾಗದೆ ನಿರ್ದಿಷ್ಟ ಗುರಿಯತ್ತ ಸಾಗಬೇಕು. ಜೀವನದಲ್ಲಿ ಸಾಧನೆ ಮಾಡಬೇಕಾದರೆ ತ್ಯಾಗ ಮತ್ತು ನಿಸ್ವಾರ್ಥಸೇವೆಯನ್ನು ಮಾಡಬೇಕು. ಅದಕ್ಕೆ ಉತ್ತಮ ನಿದರ್ಶನವೇ ಸ್ವಾಮಿ ವಿವೇಕಾನಂದರು ಎಂದು ಜಿಲ್ಲಾ ನೆಹರು ಯುವ ಕೇಂದ್ರ ನಿವೃತ್ತಾಧಿಕಾರಿ ಎಸ್.ಯು ಜಮಾದಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸಪ್ತಾಹ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ವಿಜಯಪುರ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಸಂಶೋಧನಾ ಪರಿಷತ್ತು ವಿಜಯಪುರ, ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕಗಳು, ಯೂತ್ ರೆಡ್ ಕ್ರಾಸ್ ರೆಡ್ ರಿಬ್ಬನ್ ಕ್ಲಬ್, ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯೋಜನಡಿಯಲ್ಲಿ ಜರುಗಿದ ರಾಷ್ರೀಯ ಯುವ…

Read More

ದೇವರಹಿಪ್ಪರಗಿ: ರೈತ ಸಮುದಾಯದ ಹಬ್ಬವಾದ ಎಳ್ಳು ಅಮವಾಸ್ಯೆಯಂದು ಪಟ್ಟಣ ಸೇರಿದಂತೆ ತಾಲ್ಲೂಕಿನದಾದ್ಯಂತ ರೈತರು ತಮ್ಮ ಆಪ್ತರು, ಮಿತ್ರರೊಂದಿಗೆ ಹೊಲ, ತೋಟಗಳಿಗೆ ತೆರಳಿ ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿ, ಚರಗ ಚಲ್ಲಿ ಭೋಜನ ಸವಿದರು.ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಮವಾಸ್ಯೆಯ ಸಂಭ್ರಮ ಬೆಳಗಿನಿಂದಲೇ ಕಂಡು ಬಂತು. ಹಿಂದೆ ಎತ್ತಿನಗಾಡಿಗಳ ಮೂಲಕ ಹೊಲಗಳಿಗೆ ತೆರಳುತ್ತಿದ್ದ ರೈತಕುಟುಂಬಗಳು ಈಗ ವಿರಳವಾಗಿ ಬಹುತೇಕರು ಕಾರು, ಜೀಪ, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳ ಮೂಲಕ ತಮ್ಮ ತೋಟಗಳಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂತು. ಮಧ್ಯಾನ್ಹದ ಸಮಯಕ್ಕೆ ಹೊಲದ ಬನ್ನಿಮರಗಳಿಗೆ ಪೂಜೆ ಸಲ್ಲಿಸಿ ನಂತರ ಚರಗ ಚಲ್ಲಿದ ಮೇಲೆ ಸಜ್ಜೆ ರೋಟ್ಟಿ, ಮೋಸರು, ಸಜ್ಜೆ ಕಡಬು, ಶೇಂಗಾ ಹೋಳಿಗೆ ಸಹಿತ ಮೃಷ್ಟಾನ್ನ ಭೋಜನ ಸವಿದರು.ಈ ಬಾರಿ ಮಳೆಗಾಲ ಉತ್ತಮವಾಗಿಲ್ಲದ ಕಾರಣ ಎರೆ ಹೊಲಗಳಲ್ಲಿ ಹಸಿಕಡಲೆ, ಜೋಳ ಬಹುತೇಕ ಕಾಣದಂತಾಗಿದೆ. ಅದಾಗ್ಯೂ ಸಂಪ್ರದಾಯದಂತೆ ರೈತ ಸಮುದಾಯ ಮಾತ್ರ ಮಕ್ಕಳು ಕುಟುಂಬ ಸಹಿತ ಎಳ್ಳು ಅಮವಾಸ್ಯೆಯಂದು ಭೂತಾಯಿಗೆ ಪೂಜೆ ಸಲ್ಲಿಸಿ, ನೈವಿಧ್ಯ ಅರ್ಪಿಸಿದರು.

Read More

‘ಸಕಾಲ’ ಪ್ರಗತಿ ಪರಿಶೀಲನಾ ಸಭೆ | ಸಕಾಲ ಸೇವೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲು ಸೂಚನೆ ಬೆಂಗಳೂರು: ‘ಸಕಾಲ’ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ವಿಳಂಬವಿಲ್ಲದೆ ಜನರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.ವಿಧಾನಸೌಧದಲ್ಲಿ ಗುರುವಾರ ನಡೆದ “ಸಕಾಲ ಪ್ರಗತಿ ಪರಿಶೀಲನಾ ಸಭೆ”ಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, “ಸರ್ಕಾರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಲು ಇರುವ ಏಕೈಕ ಮಾರ್ಗ ಸಕಾಲ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು, ಜನರಿಗೆ ವಿಳಂಬವಿಲ್ಲದೆ ಎಲ್ಲಾ ಸೇವೆಗಳೂ ಲಭ್ಯವಾಗುವಂತಿರಬೇಕು ಎಂಬುದೇ ಸರ್ಕಾರ ಉದ್ದೇಶ. ಆದರೆ, ಕೆಲವು ಸೇವೆಗಳು ವಿಳಂಬವಾಗುತ್ತಿರುವುದು ಸರಿಯಲ್ಲ” ಎಂದು ಎಚ್ಚರಿಕೆ ನೀಡಿದರು.ಮುಂದುವರೆದು, “ಸಕಾಲ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ಸುಧಾರಣೆಯಾಗಬೇಕಾದ್ದು ಇನ್ನೂ ಬಹಳಷ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಕಾಲ ಸೇವೆ ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನಮಗೆ ವರ ಕೊಟ್ಟು ಇಲ್ಲಿ ಕೂರಿಸಿದವರನ್ನೇ ಮನೆಯ…

Read More

ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ರೈತರು ಚರಗ ಚೆಲ್ಲುವ ಮೂಲಕ ಎಳ್ಳು ಅಮಾವಾಸ್ಯ ಆಚರಿಸಿದರು.ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಎಳ್ಳು ಅಮವಾಸ್ಯೆ ದಿನ ರೈತರು, ರೈತ ಮಹಿಳೆಯರು ಮಕ್ಕಳು ಸೇರಿದಂತೆ ಮನೆ ಮಂದಿ ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ.ಎಳ್ಳು ಹಚ್ಚಿದ ರೊಟ್ಟಿ, ಎಳ್ಳು ಕಡುಬು, ಕಡಲೆಗಡುಬು, ಬದನೆಕಾಯಿ ಪಲ್ಲೆ, ಚಟ್ನಿಯಂತಹ ವಿವಿಧ ಖಾದ್ಯಗಳನ್ನು ಕಟ್ಟಿಕೊಂಡು ಹೊಲಕ್ಕೆ ಹೋಗಿ, ಬೆಳೆದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಂಡರು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ’ ಎಂದು ಹೇಳುತ್ತಾ ಖಾದ್ಯಗಳನ್ನು ಹೊಲದ ತುಂಬೆಲ್ಲಾ ಚೆಲ್ಲುವುದೇ ಚರಗ. ಮನೆ ಮಂದಿ ಜೊತೆಗೆ ಹೊಲ ಇಲ್ಲದವರನ್ನು ಕರೆದುಕೊಂಡು ಚರಗ ಚೆಲ್ಲಲು ಹೋಗುವುದು ಇನ್ನೊಂದು ವಿಶೇಷ. ಮುತ್ತು ಹಿರೇಮಠ್ ಕುಟುಂಬದವರು ಎಲ್ಲ ಸ್ನೇಹಿತರೊಂದಿಗೆ ಅವರ ಹೊಲದಲ್ಲಿ ಚರಗ ಚೆಲ್ಲಿದ ಬಳಿಕ ಹೊಲದಲ್ಲಿ ಎಲ್ಲರೂ ಸೇರಿ ಸಹಭೋಜನ ಮಾಡಿಸಿದರು.

Read More