ವಿಜಯಪುರ : ಕಾಂಗ್ರೆಸ್ ಸರಕಾರ ಯಾವಾಗಲೂ ಶೋಷಿತ, ಬಡವ, ನಿರ್ಗತಿಕ ಹಾಗೂ ಸಮಾಜದ ಕಟ್ಟಕಡೆಯ ಕೆಳವರ್ಗದ ಎಲ್ಲರ ಹಿತ ಕಾಪಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ, ಅದೇ ತರಹ ಬಂಜಾರ ಸಮುದಾಯದ ಪರ ಕೂಡಾ ಸದಾ ಜೊತೆಗಿದ್ದು ಬೆಂಬಲಿಸಿ ಸಮಾಜವನ್ನು ಮುನ್ನಡೆಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ ಆದ್ದರಿಂದ ಬಂಜಾರ ಸಮುದಾಯದ ಎಲ್ಲ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರನ್ನು ಬಹುಮತದಿಂದ ಆರಿಸಿ ತರುವಂತೆ ಯುವ ಕಾಂಗ್ರೆಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ವಿನಂತಿಸಿಕೊಂಡಿದಾರೆ.
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಮಾಜಿ ಶಾಸಕರು ಮತ್ತು ಸಚಿವರಾದ ಕೆ.ಟಿ.ರಾಠೋಡ ಅವರ ಪುತ್ರ ಪ್ರಕಾಶ ರಾಠೋಡ ಅವರಿಗೆ ಒಂದು ಅವಧಿಯ ಹಿಂದೆ ಕಾಂಗ್ರೆಸ್‌ನಿಂದ ಟಿಕೇಟ್ ನೀಡಿ ಸಮುದಾಯದ ಪರ ಕಾಂಗ್ರೆಸ್ ಇದೆ ಎನ್ನುವುದನ್ನು ಸಾಬೀತುಪಡಿಸಿದೆ.ಅದೇ ತರಹ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಸಮಿಶ್ರ ಸರರ್ಕಾರವಿದ್ದಾಗ ಶ್ರೀಮತಿ ಸುನಿತಾ ಚವ್ಹಾಣ ಅವರನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಲು ಕಾಂಗ್ರೆಸ್ ಬೆಂಬಲಿಸಿದರ ನಿಮಿತ್ಯವಾಗಿ ಜೆ.ಡಿ.ಎಸ್‌ನಿಂದ ಅವರಿಗೆ ಅವಕಾಶ ದೊರಕಿತ್ತು. ಇದು ಸಹ ಬಂಜಾರ ಸಮುದಾಯದ ಬಾಂಧವರು ಅರ್ಥೈಸಿಕೊಳ್ಳಬೇಕು. ಈಗಾಗಲೇ ನಿಗಮ ಮಂಡಳಿಯಲ್ಲಿ ಸಹ ಕಾಂಗ್ರೆಸ್ ಪಕ್ಷ ಬಂಜಾರ ಸಮುದಾಯಕ್ಕೆ ಆಧ್ಯತೆ ನೀಡಿ ಶ್ರೀಮತಿ ಕಾಂತಾ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ, ಕಳೆದ ಭಾರಿ ಬಂಜಾರ ಸಮುದಾಯವನ್ನು ಮಿಸಲಾತಿಯಿಂದ ಹೊರಗಿಡಲು ಬಿ.ಜೆ.ಪಿ. ಪ್ರಯತ್ನಿಸಿತ್ತು, ಅದರ ಪ್ರತಿಫಲ ಎಲ್ಲರೂ ಒಗ್ಗಟಾಗ್ಗಿ ಬಾರತೀಯ ಜನತಾ ಪಕ್ಷವನ್ನು ಬೆಂಬಲ ನೀಡದೇ ಇರುವಾಗ ಪಕ್ಷ ಮಕಾಡೆ ಮಲಗಿರುವುದು ನಿಮ್ಮಲ್ಲಿಯ ಒಗ್ಗಟ್ಟು ತೋರಿಸುತ್ತದೆ.
ಆದ್ದರಿಂದ ಈ ಭಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯವರಿಗೆ ಜಿಲ್ಲೆಯ ಎಲ್ಲಾ ಬಂಜಾರ ಸಮುದಾಯ ಒಗ್ಗಟ್ಟಾಗಿ ಬೆಂಬಲಿಸಿ ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಪೂಜಾರಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

