ವಿಜಯಪುರ: ನಗರದಲ್ಲಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿ. ಮುಖ್ಯ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಅವರು, ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ೧೫೯ ಸಿದ್ಧಸಿರಿ ಸೌಹಾರ್ದ ಶಾಖೆಗಳ ಶೇರುದಾರರು ಹಾಗೂ ಗ್ರಾಹಕರಿಗಾಗಿ ಯುಗಾದಿ ಪ್ರಯುಕ್ತ ಹಿಂದೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಯುಗಾದಿ ಅಂಗವಾಗಿ ಬಿಡುಗಡೆಗೊಳಿಸಲಾದ ಹಿಂದೂ ಕ್ಯಾಲೆಂಡರ್ ದಲ್ಲಿ ಹಿಂದೂಗಳ ಹಬ್ಬ ಹರಿದಿನಗಳು, ಮುಹೂರ್ತ, ರಾಹು ಕಾಲ, ಗೂಳಿ ಕಾಲ, ಯಮಗಂಡ ಕಾಲ ಸೇರಿದಂತೆ ಪ್ರತಿ ದಿನದ ಮಹತ್ವ, ಪಂಚಾಂಗದಲ್ಲಿ ಬರುವ ಅನೇಕ ಮಾಹಿತಿಗಳನ್ನು ಕ್ಯಾಲೆಂಡರ್ ನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಜಂಟಿ ವ್ಯವಸ್ಥಾಪಕರಾದ ರಾಘವ ಅಣ್ಣಿಗೇರಿ ಮಾತನಾಡಿ, ಸಿದ್ಧಸಿರಿ ಸೌಹಾರ್ದ ಸಹಕಾರಿಯ ಅಧ್ಯಕ್ಷರು ಹಾಗೂ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಪೇಕ್ಷೆಯಂತೆ, ವಿಜಯಪುರ ನಗರದ ಗುರುರಾಜ ಆಚಾರ್ ಹೆರಕಲ್ ಇವರು, ಸಂಪೂರ್ಣ ಮುಹೂರ್ತಗಳನ್ನು ತೆಗೆದು, ಸಮಗ್ರ ಮಾಹಿತಿಗಳನ್ನೊಳಗೊಂಡ ಕ್ಯಾಲೆಂಡರ್ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಳೆದ ೧೦ ವರ್ಷಗಳಿಂದ ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಯುಗಾದಿವರೆಗೆ ಕ್ಯಾಲೆಂಡರನ್ನು ಮುದ್ರಣ ಮಾಡಿ, ಕರ್ನಾಟಕ ರಾಜ್ಯದಾದ್ಯಂತ ಸಿದ್ಧಸಿರಿಯ ಸಮಸ್ತ ಗ್ರಾಹಕರಿಗೆ ಯುಗಾದಿಯ ಕೊಡುಗೆಯಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಿದ್ಧಸಿರಿ ಸೌಹಾರ್ದದ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ವ್ಯವಸ್ಥಾಪಕ ನಿರ್ದೇಶಕರಾದ ಜೊತಿಬಾ ಖಂಡಗಾಳೆ, ಮಹಾಪ್ರಭಂಧಕರಾದ ಉಮೇಶ ಹಾರಿವಾಳ, ಮಾರುತಿ ಸಾಲಗುಂಡೆ, ಈರೇಶ ಕೋರೆ, ವಲಯ ಅಧಿಕಾರಿ ಮಹೇಶ ಹೊಡ್ಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಹಿಂದೂ ಕ್ಯಾಲೆಂಡರ್ ಬಿಡುಗಡೆ
Related Posts
Add A Comment

