ಕೊಲ್ಹಾರ: ಪಟ್ಟಣದ ಮುಳುಗಡೆ ಸಂತ್ರಸ್ತರ ವಿರುದ್ದ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು ಸಂತ್ರಸ್ತರಿಗೆ ಆಗಿರುವ ಅನ್ಯಾಯವನ್ನು ಅಧಿಕಾರಿಗಳು ಸರಿಪಡಿಸಬೇಕು ಇಲ್ಲದಿದ್ದರೆ ಅನಿವಾರ್ಯವಾಗಿ ಅನ್ಯಾಯದ ವಿರುದ್ದ ತಹಶೀಲ್ದಾರ ಕಚೇರಿಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಆಗ್ರಹಿಸಿರುವ ಅವರು ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೊಲ್ಹಾರ ಪುನರ್ವಸತಿ ಕೆಂದ್ರದಲ್ಲಿ ನಿವೇಷನಗಳ ಹಂಚಿಕೆಯ ಮಾಲಿಕತ್ವ ಬದಲಾವಣೆ ಹಾಗೂ ಖಾಲಿ ಇರುವ ಜಾಗದಲ್ಲಿ ನಕ್ಷೆಯನ್ನು ತಯಾರಿಸಿ ನಿವೇಶನಗಳ ಹಂಚಿಕೆ ಮಾಡಿರುವ ಕುರಿತು ಹತ್ತು ವರ್ಷಗಳ ಹಿಂದೆ ಸಚಿವ ಶಿವಾನಂದ ಪಾಟೀಲ ವಿಧಾನಸಭೆಯಲ್ಲಿ ಪ್ರಶ್ನೆ ಮಾಡಿದ ಪ್ರಯುಕ್ತ ವಿಚಾರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದಾಗ ಅಧಿಕಾರಿಗಳು ವಿಚಾರಣೆ ಮಾಡುವ ನೆಪದಲ್ಲಿ ವಿನಾಕಾರಣ ತೊಂದರೆ ಕೊಡುತ್ತಿರುವದನ್ನು ನಾನು ಸಹಿಸುವದಿಲ್ಲ ಎಂದರು.
ಕೊಲ್ಹಾರ ಪುನರ್ವಸತಿ ಕೇಂದ್ರವು ೫೦೦ ಎಕರೆ ವಿಶಾಲವಾದ ಜಾಗೆಯನ್ನು ಹೊಂದಿದ್ದು ಹಳೆ ಗ್ರಾಮದ ೧೪೯೮ ಆಸ್ತಿಗಳನ್ನು ಮೂಲಾಧಾರವಾಗಿಟ್ಟುಕೊಂಡು ಪುನರ್ವಸತಿ ಕೆಂದ್ರದಲ್ಲಿ ನಿವೇಷನಗಳನ್ನು ಹಂಚಿಕೆ ಮಾಡುವಾಗ ಪುನರ್ವಸತಿ ಅಧಿಕಾರಿಗಳ ಸಮಕ್ಷಮದಲ್ಲಿ ನ್ಯಾಯಯುತವಾಗಿ ೧೪೯೮ ನಿವೇಷನಗಳನ್ನು ಹಂಚಿಕೆ ಮಾಡಲಾಗಿದೆ ತದನಂತರ ೨೦-೨೨ ವರ್ಷದ ಅವಧಿಯಲ್ಲಿ ಅಧಿಕಾರಿಗಳು ಮಾಡಿದ ತಪ್ಪಿನಿಂದ ಕೊಲ್ಹಾರ ಪಟ್ಟಣದ ಮೂಲ ರಜಿಸ್ಟರ ಸಿಗದೇ ಸಂತ್ರಸ್ತರಿಗೆ ಅನ್ಯಾಯವಾಗಿರುವದಲ್ಲದೇ ಸಂತ್ರಸ್ತರ ಮೇಲೆಯೇ ಸಿಓಡಿ ಅಧಿಕಾರಿಗಳು ಎಫ್‌ಐಆರ್ ಧಾಖಲಿಸಿ ವಿಚಾರಣೆ ಮಾಡುತ್ತಿರುವದು ಮುಳಗಡೆ ಸಂತ್ರಸ್ತರಿಗೆ ನ್ಯಾಯ ದೊರಕುವ ಬದಲು ಹಿಂಸೆಯಾಗುತ್ತಿರುವದನ್ನು ನಾನು ಸಹಿಸುವದಿಲ್ಲ ಎಂದು ಹೇಳಿದರು.
ಈಗಾಗಲೇ ೧೧೧೭ ಮಂದಿ ಮೇಲೆ ಧಾಖಲಾಗಿರುವ ಎಫ್‌ಐಆರ್ ವರದಿಯ ವಿಚಾರಣೆಯನ್ನು ಕೊಲ್ಹಾರ ಪಟ್ಟಣದ ಮೂಲ ರಜಿಸ್ಟರನ್ನು ಪಡೆದುಕೊಂಡು ಬೆಂಗಳೂರಿಗೆ ಸಂತ್ರಸ್ತರನ್ನು ಕರೆಯಿಸಿಕೊಂಡು ವಿಚಾರಣೆ ಮಾಡುವ ಬದಲು ಪಟ್ಟಣದಲ್ಲಿ ಅಥವಾ ಸಮೀಪದ ಯಾವುದಾದರೂ ಪ್ರಮುಖ ಸ್ಥಳದಲ್ಲಿ ಸಂತ್ರಸ್ತರನ್ನು ಕರೆಯಿಸಿ ವಿಚಾರಣೆ ಮಾಡಬೇಕು ಎಂದು ಸಿಓಡಿ ಡಿವಾಯ್‌ಎಸ್‌ಪಿ ಅಧಿಕಾರಿಗಳಾದ ಲಕ್ಷö್ಮಣಕುಮಾರ ಅವರಿಗೆ ದೂರವಾಣಿ ಮೂಲಕ ಮಾತನಾಡಿ ತಿಳಿಸಲಾಗಿದೆ ಎಂದ ಅವರು ೨೦೧೩ ರಿಂದ ಇಲ್ಲಿಯವರೆಗೂ ಅಧಿಕಾರದಲ್ಲಿರುವ ಶಿವಾನಂದ ಪಾಟೀಲರು ತಮಗೆ ಮತಹಾಕಿದ ಮತದಾರರ ಮೇಲೆಯೇ ಬ್ರಹ್ಮಾಸ್ತçವನ್ನು ಬಿಡುವ ಬದಲು ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು ಸಚಿವರು ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದರೆ ಜನತೆ ಬಹಿಷ್ಕಾರ ಹಾಕುವ ದಿನಗಳು ದೂರವಿಲ್ಲ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
Subscribe to Updates
Get the latest creative news from FooBar about art, design and business.
ಸಂತ್ರಸ್ತರಿಗಾದ ಅನ್ಯಾಯ ಸರಿಪಡಿಸದಿದ್ದರೆ ಸತ್ಯಾಗ್ರಹ :ಬೆಳ್ಳುಬ್ಬಿ
Related Posts
Add A Comment

