Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸನಲ್ಲಿ ಸೇವೆ ಸಲ್ಲಿಸಿ ಮರಳಿ ತಾಯ್ನಾಡಿಗೆ ಆಗಮಿಸಿದ ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಅವರನ್ನ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಕೊಳ್ಳಲಾಯಿತು.ಪಟ್ಟಣದ ವಿಜಯಪುರ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಗದಲ್ಲಿ ಅಪಾರ ಸಂಖ್ಯಯ ರೈತರು, ಹಾಗೂ ದೇಶ ಭಕ್ತರು ಜಮಾಯಿಸಿದ್ದು, ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಅವರನ್ನು ಸನ್ಮಾನಿಸಿ ಗೌರವಿಸಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿರುವುದು ವಿಶೇಷವಾಗಿತ್ತು.ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸನಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಕಾಶ್ಮೀರ, ಅರುಣಾಚಲ ಪ್ರದೇಶ, ಉತ್ತರಕಾಂಡ, ಛತ್ತೀಸ್ಗಡ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳೆದ ಕರ್ತವ್ಯ ನಿರ್ವಹಿಸಿರುವ ಇವರು ಸೇವಾ ನಿವೃತ್ತಿ ಹೊಂದಿ ಬುಧವಾರ ತಾಯ್ನಾಡಿಗಾ ಆಗಿಸಿದ್ದಾರೆ.ಮೆರವಣಿಗೆಯಲ್ಲಿ ಡೊಳ್ಳಿನ ಸಂಘ, ಕರಡಿ ಮಜಲು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದು, ಮೆರವಣಿಗೆಯಲ್ಲಿ ರೈತರು ಎತ್ತಿನ ಬಂಡಿಯೊಂದಿಗೆ ಭಾಗವಹಿಸಿರುವುದು ವಿಶೇಷವಾಗಿತ್ತು.ಈ ಸಂಧರ್ಭದಲ್ಲಿ ಪರಶುರಾಮ ಅಡಗಿಮನಿ, ಹಣಮಂತ ಕಾಮನಕೇರಿ, ಸಂತೋಷ ಯರನಾಳ, ಈರಣ್ಣ ಅಂಗಡಿ, ಪ್ರಶಾಂತ ಮೇಟಿ,…
ಸಿಂದಗಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿ ಎದುರಾದ ಹಿನ್ನಲೆ ಬಿಜೆಪಿ ಅಭ್ಯರ್ಥಿ ಕುರಿತಾಗಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಸಿಂದಗಿ ತಾಲೂಕು ಎಸ್.ಟಿ ಮೋರ್ಚಾ ಅಧ್ಯಕ್ಷ ಪ್ರಶಾಂತ ಕದ್ದರಕಿ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಸಂಸದ ರಮೇಶ ಜಿಗಜಿಣಗಿ ಎಲ್ಲಾ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಸ್ಪರ್ಧಿಸಿದ್ದಾರೆ. ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಪಕ್ಷದ ಅಭ್ಯರ್ಥಿಯ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ದಲಿತರಿಗೆ ಹಿಂದುಳಿದ ವರ್ಗದ ಜನರಿಗೆ ಮಾಡಿದ ಮೋಸ ಮರೆಯುವಂತಿಲ್ಲ. ೨೫ ಸಾವಿರ ಕೋಟಿ ಎಸ್.ಸಿ ಮೀಸಲಾತಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಮೀಸಲಾತಿಗೆ ಒಳಪಡುವ ಸಮುದಾಯಗಳಿಗೆ ಅನ್ಯಾಯ ಮಾಡಿದ ನಿರ್ದಶನವಿದೆ. ಗ್ಯಾರಂಟಿ ಯೋಜನೆಯ ಹೆಸರಲ್ಲಿ ಮಾಡಿದ ಮೋಸ ಲೋಕಸಭೆ ಚುನಾವಣೆಯಲ್ಲಿ ನಡೆಯುವುದಿಲ್ಲ. ಸೋಲಿನ ಭೀತಿ ಎದುರಾದ ಹಿನ್ನಲೆ ಅಪಪ್ರಚಾರ ಸಲ್ಲದು ಎಂದು ಹೇಳಿದ್ದಾರೆ.
ಜನರ ಜೀವದ ಜೊತೆ ಚಲ್ಲಾಟ | ಅಧಿಕಾರಿಗಳ ನಿಷ್ಕಾಳಜಿ | ನೀರು ಕುಡಿದ ಹಲವರ ಆರೋಗ್ಯದಲ್ಲಿ ಏರುಪೇರು *ಚೇತನ ಶಿವಶಿಂಪಿ*ಮುದ್ದೇಬಿಹಾಳ: ಪ್ರತಿ ದಿನ ಮನುಷ್ಯನ ದೇಹಕ್ಕೆ ಸೇರೋ ನೀರು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತೆ. ಊಟ ಇಲ್ದೆ ಮನುಷ್ಯ ಸುಮಾರು ದಿನಗಳ ಕಾಲ ಬದುಕಬಲ್ಲ. ಆದರೆ ನೀರು ಸೇವಿಸದೇ ಬದುಕಲಾರ ಎಂದು ವೈಜ್ಞಾನಿಕವಾಗಿಯೂ ಖಚಿತಗೊಂಡಿದೆ.ಕುಡಿಯುವ ನೀರು ಕಲುಷಿತವಾಗಿರಬಾರದು, ಪರಿಶುದ್ಧವಾಗಿರಬೇಕು ಅಂತಾ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶುದ್ಧವಾದ ಕುಡಿಯುವ ನೀರು ಪೂರೈಸಲು ಅನುದಾನ ನೀಡಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಆದೇಶಿಸುತ್ತೆ. ಸರ್ಕಾರದ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತಯಾರಾಗಿದೆ ಅಂದರೆ ಸಾರ್ವಜನಿಕರು ಹಿಂದೂ ಮುಂದೂ ನೋಡದೇ ಕುಡಿಯೋಕೆ ಪ್ರಾರಂಭಿಸುತ್ತಾರೆ. ಆದರೆ ಇನ್ಮುಂದೆ ಆರ್‌ಓ ಪ್ಲಾಂಟ್ ನ ನೀರು ಕುಡಿಯೋಕೆ ಯೋಗ್ಯ ಇದೆನಾ ಅಂತ ಟೆಸ್ಟ ಮಾಡಿಸಿ ಕುಡಿಯಲು ಮುಂದಾಗಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಇಲ್ಲೊಂದು ಶುದ್ಧ…
ವಿಜಯಪುರ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 133 ನೇ ಜಯಂತಿ ಆಚರಣೆಯನ್ನು, ಲೋಕಸಭೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ, ಜಿಲ್ಲಾಡಳಿತ ವತಿಯಿಂದಏಪ್ರಿಲ್ 14 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಗುವುದು.ಅಂದು ಬೆಳಿಗ್ಗೆ 8 ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಗುವುದು. ಸಾರ್ವಜನಿಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿಗಳು ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಮ್ ರವರ 117 ನೇ ಜಯಂತಿ ಆಚರಣೆಯನ್ನು, ಲೋಕಸಭೆ ಸಾರ್ವತ್ರಿಕ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ, ಜಿಲ್ಲಾಡಳಿತದಿಂದಏಪ್ರೀಲ್ 05 ರಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸರಳವಾಗಿ ಆಚರಿಸಲಾಗುವುದು.ಅದಕ್ಕೂ ಮುಂಚೆ ಬೆಳಿಗ್ಗೆ 8 ಗಂಟೆಗೆ ನಗರದ ಗೋದಾವರಿ ಹೋಟೆಲ್ ಹತ್ತಿರವಿರುವ ಡಾ.ಬಾಬು ಜಗಜೀವನರಾಮ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಾಗುವುದು. ಸಾರ್ವಜನಿಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಸಿಬ್ಬಂದಿ ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯಪುರ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕಾರ್ಯಗಳನ್ನು ಚಾಚುತಪ್ಪದೇ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯೂ ಆಗಿರುವ ಟಿ.ಭೂಬಾಲ್ ಸೂಚಿಸಿದರು.ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಸ್ಟರ್ ಟ್ರೇರ‍್ಸ್ ಹಾಗೂ ಎಲ್ಲಾ ಸೆಕ್ಟರ್ ಅಧಿಕಾರಿಗಳ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2085 ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಯ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಪಿಆರ್‌ಒಗಳು, ಪೋಲಿಂಗ್ ಅಧಿಕಾರಿಗಳು ಭಾರತೀಯ ಚುನಾವಣಾ ಆಯೋಗ ನೀಡಿರುವ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ಯಾವುದೇ ಕಾರಣಕ್ಕೂ ಮತದಾನದ ದಿನ ಇ ವಿ ಎಂ ಪ್ಯಾಟ್ ಮತಯಂತ್ರದಲ್ಲಿ ಯಾವುದೇ ತಾಂತ್ರಿಕ ಲೋಪದೋಷ ಉಂಟಾಗದಂತೆ ಮತ್ತು ಅದು ಚಾಲ್ತಿಯಲ್ಲಿ ಇರುವಂತೆ ನಿಗಾವಹಿಸಬೇಕು. ಮತಗಟ್ಟೆ ಕೇಂದ್ರದಲ್ಲಿ ಯಾವುದೆ ಗೊಂದಲ ಸಮಸ್ಯೆ ಕಂಡು ಬಂದರೆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.ತರಬೇತಿಯಲ್ಲಿ ಮತದಾನದ ಹಿಂದಿನ ದಿನ ಹಾಗೂ ಮತದಾನ ದಿನದಂದು ನಿರ್ವಹಿಸಬೇಕಾದ ಕರ್ತ್ಯವ್ಯಗಳು ಮತ್ತು ಮತ ಯಂತ್ರಗಳ ನಿರ್ವಹಣೆ ಕುರಿತು ಪ್ರಾಯೋಗಿಕವಾಗಿ…
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ೩ ಲಕ್ಷ ಮತಗಳ ಅಂತರದಿಂದ ಜಯಗೊಳಿಸಿಸಲು ಬಿಜೆಪಿ-ಜೆಡಿಎಸ್‌ನ ಕಾರ್ಯಕರ್ತರು ಶ್ರಮಿಸಬೇಕೆಂದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಬುಧವಾರ ನಗರದಲ್ಲಿ ಲೋಕಸಭಾ ಚುನಾವಣಾ ನಿಮಿತ್ಯ ಕಾರ್ಯಾಲಯ ಉದ್ಘಾಟನೆ ಸಂಬರ್ಧದಲ್ಲಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಕಳೆದ ೧೦ ವರ್ಷಗಳಲ್ಲಿ ರಾಜ್ಯದ ೧೦ ಕಡೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳು ಅಭಿವೃದ್ಧಿಯಾಗಿವೆ. ಜಪಾನ್ ದೇಶದಲ್ಲಿ ಇದ್ದಂತ ಹೈಸ್ಪೀಡ್ ರೈಲ್ವೆ ಯೋಜನೆ ಭಾರತದಲ್ಲಿ ವಂದೇ ಭಾರತ ಎಕ್ಸ್ಪ್ರೆಸ್ ಹೆಸರಿನಲ್ಲಿ ಪ್ರಧಾನಿ ಮೋದಿ ಅವರ ಕಾಲದಲ್ಲಿ ದೇಶದ ವಿವಿಧ ನಗರಗಳಲ್ಲಿ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಜಿಗಜಿಣಗಿ ಅವರು ಸಂಸದರಾಗಿ ವಿಜಯಪುರಕ್ಕೆ ವಂದೇ ಭಾರತ ರೈಲ್ವೆ ವಿಸ್ತರಿಸುವ ಕೆಲಸ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಧಾನಿ ಮೋದಿ ಅವಧಿಯಲ್ಲಿ ಕೋವಿಡ್ ಸ್ವಂತ ವ್ಯಾಕ್ಸಿನ್, ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ ೩೭೦ ಹಿಂತೆಗೆದ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಹೊಸ ಸಂಸತ್ ಭವನ ನಿರ್ಮಾಣ, ತ್ರಿವಳಿ ತಲಾಕ್…
ಆಲಮಟ್ಟಿ: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.ಆಲಮಟ್ಟಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಹಾಗೂ ವಿಜಯಪುರ ಜಿಲ್ಲೆಯ ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೋಲಿಸರು ಜಾಲ ಬಿಸಿ ಇಲ್ಲಿ ಬಂಧಿಸಿದ್ದಾರೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ರಾಮನಗೌಡ ಹಟ್ಟಿ ಆಲಮಟ್ಟಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.ಇಲ್ಲಿನ ಪೋಲಿಸ್ ಠಾಣೆಯಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ಆರೋಪಿಗಳಿಂದ ಸುಮಾರು ಎಂಟು ಲಕ್ಷ ನಲವತ್ತು ಸಾವಿರ ರೂ,ಮೌಲ್ಯದ ಒಟ್ಟು 19 ಮೋಟಾರ ಸೈಕಲ್ ಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.ತಿಕೋಟಾದ ಕುಂಬಾರ ವಸ್ತಿಯ ಶಶಿಕಾಂತ ರಾಜು ಕುಂಬಾರ(22), ಅದೇ ಊರಿನ ಭಾವಿಕಟ್ಟಿ ಓಣಿಯ ಸಂಜಯ ಸದಾಶಿವ ಕುಂಬಾರ (28) ಹಾಗೂ ಆಲಮೇಲ ಹಾವಚಟ್ಟರಕ್ಕಿ ಓಣಿಯ ಸತೀಶ ಮಲ್ಲಿಕಾರ್ಜುನ ಕುಂಬಾರ(27) ಇವರನ್ನು ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿಸಿ ತಮ್ಮ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದರು.ಕಳೆದ ಮಾರ್ಚ್ ತಿಂಗಳಲ್ಲಿ ಆಲಮಟ್ಟಿ ಮೊಗಲ್ ಗಾಡ್೯ನ್ ಬಳಿ ಟಿಕೆಟ್ ಕೌಂಟರ್…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ. ಜೆ.ಅಬ್ಬಿಗೇರಿ (ಬೆಳಗಾವಿ),ಸ ಪ ಪೂ ಕಾಲೇಜು, ಹಿರೇಬಾಗೇವಾಡಿ ಜಿ: ಬೆಳಗಾವಿ ಮೊ.೯೪೪೯೨೩೪೧೪೨ ಬಹುತೇಕರು ದೈಹಿಕವಾಗಿ ಬಲಿಷ್ಟವಾಗಿದ್ದರೂ ಮಾನಸಿಕವಾಗಿ ಶಕ್ತಿಶಾಲಿಯಾಗಿರುವದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವದನ್ನು ಬಲವಾಗಿ ನಂಬಿ ತನ್ನ ಸಾಮರ್ಥ್ಯ ಬಗೆಗೆ ಅಪನಂಬಿಕೆ ಹೊಂದಿರುವದು ಕೀಳರಿಮೆಗೆ ಕಾರಣ. ತನ್ನನ್ನು ತಾನರಿಯದೆ ಅಜ್ಞಾನದ ಕೂಪದಲ್ಲಿ ಬಿದ್ದು ನರಳುತ್ತಾರೆ.ನನ್ನಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಅಡಗಿದೆ ಕಠಿಣತಮವಾದುದುನ್ನು ನಾನು ಸಾಧಿಸಬಲ್ಲೆ ಎಂಬ ದೃಡನಂಬಿಕೆ ಬೆಳೆಸಿಕೊಳ್ಳಬೇಕು. ಇದನ್ನೇ ಅಲ್ಲವೇ ವಿವೇಕಾನಂದರು ತಮ್ಮ ವಿದ್ಯುತ್ ವಾಣಿಯಲ್ಲಿ ಹೇಳಿದ್ದು. ಆತ್ಮವಿಶ್ವಾಸದ ಮಟ್ಟವನ್ನು ಬೆಳೆಸಿಕೊಳ್ಳಬೇಕೆ ವಿನಃ ನಾನು ಎಂಬ ಅಹಂಕಾರವನ್ನಲ್ಲ. ಅಹಂಭಾವವು ಅಧೋಗತಿಗೆ ಮುನ್ನುಡಿ ಬರೆಯುತ್ತದೆ. ಹೀಗಾಗಿ ಅಹಂಭಾವವನ್ನು ತೊರೆಯಬೇಕು. ಪ್ರಾರಂಭದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಅದರಲ್ಲಿ ಯಶ ಪಡೆದ ಮೇಲೆ ನಾನು ದುರ್ಬಲನಲ್ಲ’ ಎನ್ನುವ ನಕಾರಾತ್ಮಕ ಭಾವನೆಯನ್ನು ಮನಸ್ಸಿನಿಂದ ತೊಡೆದು ಹಾಕಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತಾನೇನಾಗಬೇಕೆಂದು ಬಯಸುವನೋ ಅದೇ…
ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಡಂಬಳ ತಾಂಡಾದ ತೋಟದಲ್ಲಿ ವಿದ್ಶುತ್ ಅವಘಡದಿಂದ ೧೭ ಕುರಿಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ತಾಂಡಾದ ನಿವಾಸಿ ಕಾಂತವ್ವ ರಾಠೋಡ ಎಂಬುವರಿಗೆ ಸೇರಿದ ಕುರಿಗಳು ಸಾವಿಗೀಡಾಗಿದ್ದು,ಸ್ಥಳಕ್ಕೆ ಸಿಂದಗಿಯ ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಡಾ.ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಕೇರಿ ಪೋಲಿಸ್ ಠಾಣೆ ವ್ಶಾಪ್ತಿಯಲ್ಲಿ ಘಟನೆ ನಡೆದಿದೆ. ತನ್ನ ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದ ಕಂಗಾಲಾಗಿರುವ ಬಡ ಕುರಿಗಾಹಿ ಕಾಂತವ್ವ ರಾಠೋಡ ಅವರಿಗೆ ತಾಲೂಕು ಘಟಕದ ಬಿಜೆಪಿ ಮಂಡಲದ ಅಧ್ಶಕ್ಷ ಸಂತೋಷ ಪಾಟೀಲ ಡಂಬಳ ಸಾಂತ್ವನ ಹೇಳಿ, ವೈಯಕ್ತಿಕ ಸಹಾಯ ಮಾಡಿ ದೈಯ೯ ತುಂಬಿ ಸರಕಾರದಿಂದ ಸಿಗುವ ಸಹಾಯಧನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ಹೇಳಿದರು.ಈ ವೇಳೆ ಮಹೇಶಸಾಹು ಹುರಕಡ್ಲಿ, ಕಾಂಗ್ರೆಸ್ ಯುವ ಮುಖಂಡ ಎಂ.ಪಿ.ರಾಠೋಡ, ಶರಣಗೌಡ ಪಾಟೀಲ, ಪತ್ರಕತ೯ ಮಲ್ಲು ಕೆಂಭಾವಿ, ಮೈಬೂಬ ನಾಗಾವಿ ಮತ್ತಿತರರಿದ್ದರು.
