ಆಲಮಟ್ಟಿ: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಆಲಮಟ್ಟಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಹಾಗೂ ವಿಜಯಪುರ ಜಿಲ್ಲೆಯ ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಪೋಲಿಸರು ಜಾಲ ಬಿಸಿ ಇಲ್ಲಿ ಬಂಧಿಸಿದ್ದಾರೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ರಾಮನಗೌಡ ಹಟ್ಟಿ ಆಲಮಟ್ಟಿಯಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಇಲ್ಲಿನ ಪೋಲಿಸ್ ಠಾಣೆಯಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿದ ಅವರು, ಈ ಆರೋಪಿಗಳಿಂದ ಸುಮಾರು ಎಂಟು ಲಕ್ಷ ನಲವತ್ತು ಸಾವಿರ ರೂ,ಮೌಲ್ಯದ ಒಟ್ಟು 19 ಮೋಟಾರ ಸೈಕಲ್ ಗಳನ್ನು ಪೋಲಿಸರು ಜಪ್ತಿ ಮಾಡಿದ್ದಾರೆ.
ತಿಕೋಟಾದ ಕುಂಬಾರ ವಸ್ತಿಯ ಶಶಿಕಾಂತ ರಾಜು ಕುಂಬಾರ(22), ಅದೇ ಊರಿನ ಭಾವಿಕಟ್ಟಿ ಓಣಿಯ ಸಂಜಯ ಸದಾಶಿವ ಕುಂಬಾರ (28) ಹಾಗೂ ಆಲಮೇಲ ಹಾವಚಟ್ಟರಕ್ಕಿ ಓಣಿಯ ಸತೀಶ ಮಲ್ಲಿಕಾರ್ಜುನ ಕುಂಬಾರ(27) ಇವರನ್ನು ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿಸಿ ತಮ್ಮ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದರು.
ಕಳೆದ ಮಾರ್ಚ್ ತಿಂಗಳಲ್ಲಿ ಆಲಮಟ್ಟಿ ಮೊಗಲ್ ಗಾಡ್೯ನ್ ಬಳಿ ಟಿಕೆಟ್ ಕೌಂಟರ್ ಹತ್ತಿರ ಹೆಚ್ಚಿದ ಎರಡು ಮೋಟಾರು ಸೈಕಲ್ ವಾಹನಗಳನ್ನು ಆರೋಪಿಗಳು ಕದ್ದಿದ್ದರು. ಈ ಪ್ರಕರಣದ ಪತ್ತೆಗಾಗಿ ಪೋಲಿಸರು ತೀವ್ರ ಬೆನ್ನು ಹತ್ತಿ ಆರೋಪಿಗಳನ್ನು ಬಂಧಿಸಲಾಗಿದ್ದು ಇದರಿಂದ ಜಿಲ್ಲೆಯ ಇತರ ಕಡೆಗಳಲ್ಲಿಯೂ ಈ ಚಾಲಾಕಿ ಬೈಕ್ ಖದೀಮರು ಒಟ್ಟು 19 ಕ್ಕೂ ಹೆಚ್ಚು ಹಲವಾರು ಮೋಟಾರು ಸೈಕಲ್ ಕದ್ದಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲಾ ಪೋಲಿಸ್ ಅಧೀಕ್ಷಕ ಖುಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕ ಶಂಕರ ಮಾರಿಹಾಳ, ಅಪರಾಧ ವಿಭಾಗದ ಅಧೀಕ್ಷಕ ರಾಮನಗೌಡ ಹಟ್ಟಿ,ಬ.ಬಾಗೇವಾಡಿ ಪೋಲಿಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾವಿ ಇವರ ಮಾರ್ಗದರ್ಶನದಲ್ಲಿ ನಿಡಗುಂದಿ ಸಿ.ಪಿ.ಐ. ಶರಣಗೌಡ ಗೌಡರ,ಆಲಮಟ್ಟಿ ಪೋಲಿಸ್ ಠಾಣೆಯ ಪಿ.ಎಸ್.ಐ. ಸೀತಾರಾಮ ರಾಠೋಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಈ ಬೈಕ್ ಕಳ್ಳರನ್ನು ಪೋಲಿಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಈ ಮೋಟಾರು ಬೈಕ್ ಖದೀಮರನ್ನು ಪತ್ತೆ ಹಚ್ಚುವಲ್ಲಿ ಯಶಸ್ಸಿಯಾದ ಬ.ಬಾಗೇವಾಡಿ ಡಿ.ಎಸ್.ಪಿ.ಬಲ್ಲಪ್ಪ ನಂದಗಾಂವಿ, ನಿಡಗುಂದಿ ಸಿ.ಪಿ.ಐ.ಶರಣಗೌಡ ಗೌಡರ,ಆಲಮಟ್ಟಿ ಪಿ.ಎಸ್.ಐ. ಸೀತಾರಾಮ ರಾಠೋಡ, ನಿಡಗುಂದಿ ಪಿ.ಎಸ್.ಐ.ಶಿವರಾಜ ಧರಿಗೋಣ, ಕೊಲ್ಹಾರ ಪಿ.ಎಸ್.ಐ. ಪ್ರವೀಣಕುಮಾರ ಗರೇಬಾಳ, ಸಿಬ್ಬಂದಿಗಳಾದ ಎಮ್.ವಾಯ್.ನಾಟೀಕಾರ, ವಿ.ಎಸ್.ಹಿಪ್ಪರಗಿ, ಎಮ್.ಬಿ.ಜಯಗೊಂಡರ, ಗಿರೀಶ್ ಚಲವಾದಿ, ಅನೀಲ ವಾಯ್, ರೂಗಿ, ಎಸ್.ವಾಯ್.ಭೈರವಾಡಿ, ಆರ್.ಎಸ್.ಚವ್ಹಾಣ, ಎಸ್.ಎ.ಗಿನ್ನಿ, ಬಿ.ಸಿ.ಪಾಟೀಲ, ಎಸ್.ಸಿ.ರೆಡ್ಡಿ, ಸುಭಾಸ ಆಲಮಟ್ಟಿ, ಶ್ರೀಶೈಲ ಕೆರೂರ, ಎಸ್.ಎನ್.ಪಾಟೀಲ ಹಾಗೂ ಜಿಲ್ಲಾ ಗಣಕಯಂತ್ರ ಘಟಕದ ಸಿಬ್ಬಂದಿ ಸುನೀಲ ಗೌಳಿ, ಗುಂಡು ಗಿರಣಿ ವಡ್ಡರ, ಎಮ್.ಎ.ಭಗವಾನ, ಅಬ್ಬರ ಇಲಕಲ್ ಇವರುಗಳು ಚಾಕಚಕ್ಕಂತೆಯಿಂದ ಕೈಗೊಂಡ ಕಾರ್ಯವನ್ನು ಶ್ಲಾಘಿಸಿ ಹಿರಿಯ ಪೋಲಿಸ್ ಅಧಿಕಾರಿಗಳು ಬಹುಮಾನವನ್ನು ಘೋಷಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

