ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ೩ ಲಕ್ಷ ಮತಗಳ ಅಂತರದಿಂದ ಜಯಗೊಳಿಸಿಸಲು ಬಿಜೆಪಿ-ಜೆಡಿಎಸ್‌ನ ಕಾರ್ಯಕರ್ತರು ಶ್ರಮಿಸಬೇಕೆಂದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬುಧವಾರ ನಗರದಲ್ಲಿ ಲೋಕಸಭಾ ಚುನಾವಣಾ ನಿಮಿತ್ಯ ಕಾರ್ಯಾಲಯ ಉದ್ಘಾಟನೆ ಸಂಬರ್ಧದಲ್ಲಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಕಳೆದ ೧೦ ವರ್ಷಗಳಲ್ಲಿ ರಾಜ್ಯದ ೧೦ ಕಡೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳು ಅಭಿವೃದ್ಧಿಯಾಗಿವೆ. ಜಪಾನ್ ದೇಶದಲ್ಲಿ ಇದ್ದಂತ ಹೈಸ್ಪೀಡ್ ರೈಲ್ವೆ ಯೋಜನೆ ಭಾರತದಲ್ಲಿ ವಂದೇ ಭಾರತ ಎಕ್ಸ್ಪ್ರೆಸ್ ಹೆಸರಿನಲ್ಲಿ ಪ್ರಧಾನಿ ಮೋದಿ ಅವರ ಕಾಲದಲ್ಲಿ ದೇಶದ ವಿವಿಧ ನಗರಗಳಲ್ಲಿ ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಜಿಗಜಿಣಗಿ ಅವರು ಸಂಸದರಾಗಿ ವಿಜಯಪುರಕ್ಕೆ ವಂದೇ ಭಾರತ ರೈಲ್ವೆ ವಿಸ್ತರಿಸುವ ಕೆಲಸ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವಧಿಯಲ್ಲಿ ಕೋವಿಡ್ ಸ್ವಂತ ವ್ಯಾಕ್ಸಿನ್, ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ ೩೭೦ ಹಿಂತೆಗೆದ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಹೊಸ ಸಂಸತ್ ಭವನ ನಿರ್ಮಾಣ, ತ್ರಿವಳಿ ತಲಾಕ್ ನಿಷೇಧ ವಿಧಾನಸಭೆ-ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ಹೆಚ್ಚಳ ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ನೀಡಿ ದೇಶದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಈ ಲೋಕಸಭೆ ಚುನಾವಣೆಯಲ್ಲಿಯೂ ಪ್ರಧಾನಿ ಮೊದಿ ಕೈ ಬಲಪಡಿಸಲು ರಮೇಶ ಜಿಗಜಿಣಗಿ ಅವರನ್ನು ಮತ್ತೆ ಸಂಸದರನ್ನಾಗಿ ಕಳಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಜೆಡಿಎಸ್‌ನವರು ಕಳೆದ ಸಲ ನನ್ನ ವಿರುದ್ಧ ಚುನಾವಣೆ ಮಾಡಿದ್ದರು, ಆದರೆ ಈಗ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರಿದ್ದರಿಂದ ಜೆಡಿಎಸ್ ಪಕ್ಷದವರು ಅವರ ಎಲ್ಲ ಮತಗಳನ್ನು ಬಿಜೆಪಿಗೆ ಮತಗಳಾಗಿ ಪರಿವರ್ತನೆ ಮಾಡಲು ಮನವಿ ಮಾಡಿದರು.
ಹೆಗಡೆ, ಜೆ.ಎಚ್.ಪಟೇಲ ಅವರುಗಳ ಸಂಪುಟದಲ್ಲಿ ೧೮ ವರ್ಷಗಳ ಕಾಲ ಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದೇನೆ. ಜಿಲ್ಲೆಯ ಎಲ್ಲ ಹಳ್ಳಿಗಳಲ್ಲೂ ನನಗೆ ಪರಿಚಯವಿದೆ ಎಂದು ತಿಳಿಸಿದರು.
ಏ.೧೬ ರಂದು ನಾಮಪತ್ರ ಸಲ್ಲಿಕೆ: ಇದೇ ಏ.೧೬ ರಂದು ಅದ್ದೂರಿಯಾಗಿ ಎರಡು ಪಕ್ಷಗಳ ಜತೆಗೂಡಿ ಎನ್‌ಡಿಎ ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು ಎಂದು ರಮೇಶ ಜಿಗಜಿಣಗಿ ತಿಳಿಸಿದರು.
ಬಿಜೆಪಿ ಜಿಲ್ಲಾದ್ಯಕ್ಷ ಆರ್.ಎಸ್.ಪಾಟಿಲ ಕೂಚಬಾಳ ಮಾತನಾಡಿ, ಸದ್ದುಗದ್ದಲವಿಲ್ಲದೇ ಕಳೆದ ೧೦ ವರ್ಷಗಳಲ್ಲಿ ಸಂಸದರಾಗಿ ರಮೇಶ ಜಿಗಜಿಣಗಿ ಸುಮಾರು ೧ ಲಕ್ಷ ಕೋಟಿ ಅನುದಾನ ಜಿಲ್ಲೆಗೆ ತಂದಿದ್ದಾರೆ. ಇಂದು ವಿಜಯಪುರ ಜಿಲ್ಲೆಯ ಸಂಪೂರ್ಣ ಧೂಳು ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ ಇದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿದರು.
ಬಿಜೆಪಿಗೆ ಮರಳಿ ಸೇರ್ಪಡೆ: ಕಳೆದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರನಡೆದ ರವಿಕಾಂತ ಬಗಲಿ, ರಾಜು ಬಿರಾದಾರ, ಬಾಬು ಏಳಗಂಟಿ, ಚಿನ್ನು ಚಿನಗುಂಡಿ, ಬಸವರಾಜ ಹಳ್ಳಿ, ಬಾಬು ಚವ್ಹಾಣ, ಅಭಿಷೇಕ ಸಾವಂತ ಸೇರಿದಂತೆ ಹಲವರು ಸಂಸದ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಪಾಟೀಲ ನೇತೃತ್ವದಲ್ಲಿ ಮರು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಮಾಜಿ ಶಾಸಕರಾದ ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಮಾಜಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ವಿಜುಗೌಡ ಪಾಟೀಲ್, ರಾಜಶೇಖರ ಶೀಲವಂತರ, ಕಾಸುಗೌಡ ಬಿರಾದಾರ, ಬಸವರಾಜ ಹೊನವಾಡ, ಶ್ರೀಮತಿ ಸ್ವಪ್ನಾ, ಸಂಜೀವ ಐಹೊಳೆ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

