ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಡಂಬಳ ತಾಂಡಾದ ತೋಟದಲ್ಲಿ ವಿದ್ಶುತ್ ಅವಘಡದಿಂದ ೧೭ ಕುರಿಗಳು ಸುಟ್ಟು ಕರಕಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಂಡಾದ ನಿವಾಸಿ ಕಾಂತವ್ವ ರಾಠೋಡ ಎಂಬುವರಿಗೆ ಸೇರಿದ ಕುರಿಗಳು ಸಾವಿಗೀಡಾಗಿದ್ದು,ಸ್ಥಳಕ್ಕೆ ಸಿಂದಗಿಯ ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಡಾ.ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಕೇರಿ ಪೋಲಿಸ್ ಠಾಣೆ ವ್ಶಾಪ್ತಿಯಲ್ಲಿ ಘಟನೆ ನಡೆದಿದೆ. ತನ್ನ ಬದುಕಿಗೆ ಆಸರೆಯಾಗಿದ್ದ ಕುರಿಗಳ ಸಾವಿನಿಂದ ಕಂಗಾಲಾಗಿರುವ ಬಡ ಕುರಿಗಾಹಿ ಕಾಂತವ್ವ ರಾಠೋಡ ಅವರಿಗೆ ತಾಲೂಕು ಘಟಕದ ಬಿಜೆಪಿ ಮಂಡಲದ ಅಧ್ಶಕ್ಷ ಸಂತೋಷ ಪಾಟೀಲ ಡಂಬಳ ಸಾಂತ್ವನ ಹೇಳಿ, ವೈಯಕ್ತಿಕ ಸಹಾಯ ಮಾಡಿ ದೈಯ೯ ತುಂಬಿ ಸರಕಾರದಿಂದ ಸಿಗುವ ಸಹಾಯಧನ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನಿಸುವುದಾಗಿ ಹೇಳಿದರು.
ಈ ವೇಳೆ ಮಹೇಶಸಾಹು ಹುರಕಡ್ಲಿ, ಕಾಂಗ್ರೆಸ್ ಯುವ ಮುಖಂಡ ಎಂ.ಪಿ.ರಾಠೋಡ, ಶರಣಗೌಡ ಪಾಟೀಲ, ಪತ್ರಕತ೯ ಮಲ್ಲು ಕೆಂಭಾವಿ, ಮೈಬೂಬ ನಾಗಾವಿ ಮತ್ತಿತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

