ಬಸವನಬಾಗೇವಾಡಿ: ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸನಲ್ಲಿ ಸೇವೆ ಸಲ್ಲಿಸಿ ಮರಳಿ ತಾಯ್ನಾಡಿಗೆ ಆಗಮಿಸಿದ ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಅವರನ್ನ ಪಟ್ಟಣದಲ್ಲಿ ಅದ್ದೂರಿಯಾಗಿ ಸ್ವಾಗತಿಕೊಳ್ಳಲಾಯಿತು.
ಪಟ್ಟಣದ ವಿಜಯಪುರ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಗದಲ್ಲಿ ಅಪಾರ ಸಂಖ್ಯಯ ರೈತರು, ಹಾಗೂ ದೇಶ ಭಕ್ತರು ಜಮಾಯಿಸಿದ್ದು, ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಅವರನ್ನು ಸನ್ಮಾನಿಸಿ ಗೌರವಿಸಿ, ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿರುವುದು ವಿಶೇಷವಾಗಿತ್ತು.
ಯೋಧ ಶಿವಪ್ಪ, ಚನ್ನಪ್ಪ ಅಡಗಿಮನಿ ಇಂಡೋ ಟೆಬೇಟಿಯನ್ ಬಾರ್ಡರ್ ಪೊಲೀಸ್ ಪೋರ್ಸನಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಕಾಶ್ಮೀರ, ಅರುಣಾಚಲ ಪ್ರದೇಶ, ಉತ್ತರಕಾಂಡ, ಛತ್ತೀಸ್ಗಡ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳೆದ ಕರ್ತವ್ಯ ನಿರ್ವಹಿಸಿರುವ ಇವರು ಸೇವಾ ನಿವೃತ್ತಿ ಹೊಂದಿ ಬುಧವಾರ ತಾಯ್ನಾಡಿಗಾ ಆಗಿಸಿದ್ದಾರೆ.
ಮೆರವಣಿಗೆಯಲ್ಲಿ ಡೊಳ್ಳಿನ ಸಂಘ, ಕರಡಿ ಮಜಲು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದು, ಮೆರವಣಿಗೆಯಲ್ಲಿ ರೈತರು ಎತ್ತಿನ ಬಂಡಿಯೊಂದಿಗೆ ಭಾಗವಹಿಸಿರುವುದು ವಿಶೇಷವಾಗಿತ್ತು.
ಈ ಸಂಧರ್ಭದಲ್ಲಿ ಪರಶುರಾಮ ಅಡಗಿಮನಿ, ಹಣಮಂತ ಕಾಮನಕೇರಿ, ಸಂತೋಷ ಯರನಾಳ, ಈರಣ್ಣ ಅಂಗಡಿ, ಪ್ರಶಾಂತ ಮೇಟಿ, ಮಹೇಶ ಒಡೆಯರ್, ಅಪ್ಪು ಮಟ್ಯಾಳ, ಶಿವು ಬೇವನೂರ ಸೇರಿದಂತೆ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

