Author: editor.udayarashmi@gmail.com

ಕೊಳವೆಬಾವಿಯಲ್ಲಿ ಬಿದ್ದ ಮಗು ರಕ್ಷಣೆ | ಸತತ ೨೧ ಗಂಟೆಗಳ ರಕ್ಷಣಾ ಕಾರ್ಯಾಚರಣೆ | ಮುಗಿಲು ಮುಟ್ಟಿದ ಹರ್ಷೋದ್ಘಾರ ಇಂಡಿ: ಬುಧವಾರ ಸಂಜೆ ೫ ಗಂಟೆಯ ಸುಮಾರಿಗೆ ಅಪ್ಪ ಕೊರೆರಿಸಿದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದ ಸಾತ್ವಿಕ್ ಮುಜಗೊಂಡ ಇವನನ್ನು ರಕ್ಷಿಸುವಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಯಶಸ್ವಿಯಾಗಿದೆ.ಸತತ ೨೧ ಗಂಟೆಯ ಕಾರ್ಯಾಚರಣೆ ಬಳಿಕ ಸಾತ್ವಿಕ್ ಸಾವು ಗೆದ್ದು ಮೃತ್ಯುಂಜಯನಾಗಿ ಹೊರಬಂದಿದ್ದಾನೆ.ಕಾರ್ಯಾಚರಣೆಯಲ್ಲಿ ಹೈದ್ರಾಬಾದದ ೨೧ ಜನರ ಎನ್‌ಡಿಆರ್‌ಎಫ್ ತಂಡ, ಬೆಳಗಾಂವ ಮತ್ತು ಕಲಬುರಗಿಯಿಂದ ಬಂದ ೨೫ ಜನರ ಎಸ್‌ಡಿಆರ್‌ಎಫ್ ತಂಡ, ೫೦ ಜನ ಪೋಲಿಸರು, ೨೦ ಜನ ಗೃಹ ರಕ್ಷಕದಳದ ಸಿಬ್ಬಂದಿ ಮತ್ತು ಇಂಡಿ ಸರಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಪಾಲ್ಗೊಂಡು ಆಹೋರಾತ್ರಿ ನಡೆಸಿದ ಸತತ ಪ್ರಯತ್ನದ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿ ಗುರುವಾರ ಮಧ್ಯಾಹ್ನ ೧.೪೪ಕ್ಕೆ ಮಗುವನ್ನು ಜೀವಂತವಾಗಿ ಹೊರತೆಗೆಯಲಾಯಿತು.ಘಟನಾ ಸ್ಥಳಕ್ಕೆ ಲಚ್ಯಾಣದ ವೃಷಭಲಿಂಗೇಶ್ವರ ಶ್ರೀಗಳು, ಜನತಾದಳದ ಬಿ.ಡಿ.ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ ಸೇರಿದಂತೆ ಅನೇಕ…

Read More

ವಿಜಯಪುರ: ಕಳೆದ ಎರಡು-ಮೂರು ದಿನಗಳಿಂದ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ದ್ರಾಕ್ಷಿ ಹಣ್ಣು ಮಾರುಕಟ್ಟೆಗೆ ಬರುವ ಮುನ್ನ ಕೀಟನಾಶಕದಲ್ಲಿ ಮುಳಗಿಸಿ ಮಾರಾಟ ಮಾಡಲು ತರಲಾಗುತ್ತದೆ ಎಂಬ ಸುಳ್ಳು ಸುದ್ದಿ ಪ್ರಚಾರ ಮಾಡಿ ಹರಿಬಿಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಿಬಿಡುವುದರಿಂದ ರೈತರು ಮಾರಾಟಕ್ಕೆ ತರುವ ದ್ರಾಕ್ಷಿ ಹಣ್ಣಿನ ದರದಲ್ಲಿ ಪರಿಣಾಮ ಬಿರುತ್ತದೆ ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಆದರ ಕಾರಣ ಸಾರ್ವಜನಿಕರು ಇದರ ಬಗ್ಗೆ ತಿಳುವಳಿಕೆಯಿಂದ ಇರಬೇಕು ಎಂದು ವಿಜಯಪುರ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.ದ್ರಾಕ್ಷಿಯನ್ನು ಹಣ್ಣು ಹಾಗು ಮೆನುಕ ರೀತಿಯಲ್ಲಿ ಎರಡು ಬಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ತಾಜಾ ಹಣ್ಣು ಮಾರಾಟ ಮಾಡುವ ಸಮಯದಲ್ಲಿ ಯಾವುದೇ ರೀತಿಯ ಕೀಟನಾಶಕ/ದ್ರಾವಣದಲ್ಲಿ ಅದ್ದಿ ಮಾರಾಟ ಮಾಡುವುದಿಲ್ಲ. ಆದರೆ ಮನುಕ ಮಾಡಬೇಕಾದರೆ ದ್ರಾಕ್ಷಿಯ ಹಣ್ಣನ್ನು ಡಿಪಿಂಗ್ ಆಯಿಲ್‌ನಲ್ಲಿ ಅದ್ದಿದರೆ ಮಾತ್ರ ಒಳ್ಳೆಯ ಗುಣಮಟ್ಟದ ಮನುಕ ತಯಾರು ಮಾಡಬಹುದಾಗಿದೆ. ಇದು ಎನ್‌ಆರ್‌ಸಿ ಯಿಂದ ಪ್ರಮಾಣೀಕರಿಸಿದ ಔಷಧಗಳನ್ನು ಬಳಸಬೇಕು. ಆದರೆ ತಾಜಾಹಣ್ಣುಗಳ ಬಗ್ಗೆ ಹರಿದಾಡುತ್ತಿರುವ…

Read More

ವಿಜಯಪುರ: ಮನಗೂಳಿ ಪೊಲೀಸ್ ಠಾಣೆ ಗುನ್ನೆ ನಂ೧೮/೨೦೧೫ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಕರಣ ಸಂಖೆ ಎಸ್.ಸಿ ನಂ೭೦/೨೦೧೫ರ ಪ್ರಕರಣದಲ್ಲಿ ರಾಮನಗರ ಜಿಲ್ಲೆಯ ಕನಕಪೂರ ತಾಲೂಕಿನ ಕುಂಬಾರದೊಡ್ಡಿಯ ಗ್ರಾಮದ ನೊಂದ ಮಹಿಳೆಯಾದ ಶಕುಂತಲಾ ನೀಲಕಂಠ ಜೋಶಿ ಇವರಿಗೆ ಪರಿಹಾರ ಕೊಡುವ ಸಲುವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಮುಂದೆ ಹಾಜರಾಗಲು ತಿಳಿಸಿದ್ದು, ಅಲ್ಲದೇ ಪೊಲೀಸ್ ಸಿಬ್ಬಂದಿಗಳು ನೊಂದ ಮಹಿಳೆಯ ವಿಳಾಸಕ್ಕೆ ಹೋಗಿ ವಿಚಾರಿಸಲಾಗಿದ್ದರೂ ಮಹಿಳೆಯ ಹಾಜರಾತಿ ಸಿಕ್ಕಿರುವುದಿಲ್ಲ.ಈ ಹಿನ್ನಲೆಯಲ್ಲಿ ಮಹಿಳೆಯ ಮಾಹಿತಿಯು ಸಾರ್ವಜನಿಕರಿಗೆ ಅಥವಾ ಯಾರಿಗಾದರೂ ಲಭ್ಯವಿದ್ದಲ್ಲಿ ಜಿಲ್ಲಾ ನಿಸ್ತಂತು ಕೇಂದ್ರ ವಿಜಯಪುರ(೦೮೩೫೨-೨೫೦೮೪೪), ಡಿಎಸ್‌ಪಿ ಕಚೇರಿ ವಿಜಯಪುರ ಗ್ರಾಮಾಂತರ(೯೪೮೦೮೦೪೨೨೩), ಸಿಪಿಐ ಕಚೇರಿ ವಿಜಯಪುರ ಗ್ರಾಮಾಂತರ(೯೪೮೦೮೦೪೨೩೧), ಮನಗೂಳಿ ಪಿಎಸ್‌ಐ ಕಚೇರಿ(೯೪೮೦೮೦೪೨೦೭) ಇವರಿಗೆ ಮಾಹಿತಿ ನೀಡಬೇಕು ಎಂದು ಮನಗೂಳಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಗುರುವಾರ ನಡೆದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಪತ್ರಿಕೆಗೆ ಜಿಲ್ಲೆಯ ೧೨೭ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿದ್ದು, ಪರೀಕ್ಷೆಗೆ ನೋಂದಣಿಯಾದ ಒಟ್ಟು ೪೦,೫೪೨ ವಿದ್ಯಾರ್ಥಿಗಳಲ್ಲಿ ೩೯,೫೯೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ೯೫೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ವಿಶೇಷವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಮತದಾನವು ಶೇ.೧೦೦ ರಷ್ಟು ಆಗಬೇಕು. ಅದಕ್ಕಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಸಿ.ಆರ್. ಮುಂಡರಗಿ ಹೇಳಿದರು.ಅವರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕಾರ್ಮಿಕ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ನಗರದ ಹೊಸ ಬಸ್ ನಿಲ್ದಾಣ(ಸ್ಯಾಟ್ ಲೈಟ್)ದ ಹತ್ತಿರ ನೆರೆದಿರುವ ದಿನಗೂಲಿ ಕಾರ್ಮಿಕರು, ಪಾಟೀಲ ಪ್ಲಾನೆಟ್ ಶೋರೂಮ್ ಹಾಗೂ ಬಿಜ್ಜರಗಿ ಟಾಟಾ ಮೋಟರ್ಸ್ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರೊಂದಿಗೆ ಮತದಾರರ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.ಮತದಾನ ಎಂಬುದು ನಮ್ಮ ಜವಾಬ್ದಾರಿಯಷ್ಟೇ ಅಲ್ಲ, ಹಕ್ಕು. ಸದೃಡ ಸಮಾಜ ನಿರ್ಮಾಣ ಮಾಡಲು ಮತದಾನ ಸಹಕಾರಿಯಾಗುತ್ತದೆ. ಕುಟುಂಬ, ನೆರೆಹೊರೆಯ ಜನರಿಗೆ ಮತದಾನದ ಮಹತ್ವವನ್ನು ಸಾರಿ ಜಾಗೃತಿ ಮೂಡಿಸಬೇಕಾಗಿದೆ. ಮತದಾನ ದಿನದಂದು ಎಲ್ಲ ಕಾರ್ಮಿಕರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಇದರ ಸದುಪಯೋಗ ಪಡೆದುಕೊಂಡು ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ನಾವೆಲ್ಲರೂ ಮತದಾನ…

Read More

ವಿಜಯಪುರ: ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಏ.04ರಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ ರವರು ಭೇಟಿ ನೀಡಿ ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಅವರು, ಬರಗಾಲ ಇರುವ ಕಾರಣ ಎಲ್ಲ ಕೂಲಿಕಾರರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿ, ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಮತ್ತು ಬೇರೆ ಕಡೆ ಕೆಲಸಕ್ಕೆ ಹೋದರೆ, ಅಲ್ಲಿ ಕೊಡುವ ಕೂಲಿ ಮೊತ್ತಕ್ಕಿಂತ, ನರೇಗಾ ಯೋಜನೆಯ ಕೂಲಿ ಮೊತ್ತ ಹೆಚ್ಚು ಅಂದರೆ ರೂ.349/- ಇರುತ್ತದೆ, ಆದ ಕಾರಣ ಇನ್ನೂ ಹೆಚ್ಚು ಜನರಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಬನ್ನಿರಿ ಎಂದು ಕೂಲಿಕಾರರಿಗೆ ಕರೆ ನೀಡಿದರು.ಬಳಿಕ ತಾಲೂಕಾ ಸ್ವೀಪ್ ಸಮೀತಿ ವತಿಯಿಂದ ಮತದಾರರ ಜಾಗೃತಿ ಅಭಿಯಾನ ಮಾಡಲಾಯಿತು. ಮತದಾರರ ಪ್ರತಿಜ್ಞಾ ವಿಧಿ ಹೇಳಲಾಯಿತು. ಲೋಕಸಭಾ 2024ರ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸ್ವೀಪ್ ನೋಡಲ್ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ ರವರು ಅಲ್ಲಿರುವ ಕೂಲಿಕಾರರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪರಶುರಾಮ ಶಾಹಪೂರ, ತಾಂತ್ರಿಕ ಸಂಯೋಜಕರು,…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ. ಎಚ್. ಕೆ. ಬೆಂಗಳೂರು ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ ಬಿಸಿ ಈಗ ಭಾರತದೊಳಗೆ, ಕರ್ನಾಟಕವನ್ನು ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ..ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು ಸಮಾಜ ಭಾವಿಸಿತ್ತು. ಆದರೆ ಅದು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಅತ್ಯಂತ ತೀವ್ರವಾಗಿ ನಮ್ಮನ್ನು ಕಾಡಲು ಪ್ರಾರಂಭಿಸಿದೆ..ಹಣ ಕೇಂದ್ರಿತ ಅಭಿವೃದ್ಧಿಯ ಹಿಂದೆ ಬಿದ್ದ ಮಾನವ ಸಮಾಜ ಪರಿಸರವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ನಾಶಪಡಿಸುವುದನ್ನು ನಿರಂತರವಾಗಿ ಮಾಡುತ್ತಾ ಸಾಗಿದ್ದರ ಫಲಿತಾಂಶ ಈಗ ನಾವು ಅನುಭವಿಸಬೇಕಾಗಿದೆ..ಗಾಳಿ ನೀರು ಆಹಾರ ಕಲುಷಿತವಾಗುತ್ತಿರುವುದಕ್ಕಿಂತ ಅಪಾಯಕಾರಿಯಾಗಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚಾಗುತ್ತಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ..ಮೊದಲು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ತೀವ್ರ ತಾಪಮಾನ ಈಗ ರಾಜ್ಯದ ಎಲ್ಲಾ ಕಡೆ ಏಕಪ್ರಕಾರವಾಗಿ ವರದಿಯಾಗುತ್ತಿದೆ. ಬಹುತೇಕ 40 ಡಿಗ್ರಿ ಸೆಲ್ಸಿಯಸ್ ನ ಆಸು ಪಾಸಿನಲ್ಲಿ ಕರ್ನಾಟಕ ರಾಜ್ಯ ಕುದಿಯುತ್ತಿದೆ..ಪ್ರಾಕೃತಿಕವಾಗಿ, ಸ್ವಾಭಾವಿಕವಾಗಿ ಸಂಭವಿಸುವ ವೈಪರೀತ್ಯ ಗಳಿಗೆ…

Read More

ಸಂತೋಷ್ ರಾವ್ ಪೆರ್ಮುಡ (ವ್ಯಕ್ತಿತ್ವ ವಿಕಸನ ತರಬೇತುದಾರರು)ಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಇಡೀ ವಿಶ್ವವೇ ಕೊರೋನಾ ಮಹಾಮಾರಿಗೆ ತತ್ತರಿಸಿ ಈಗಷ್ಟೇ ಈ ಜಾಡ್ಯದಿಂದ ನಿಧಾನವಾಗಿ ಹೊರಗೆ ಬರುತ್ತಿದೆ. ಇಂದು ಜನರ ಜೀವನ ಶೈಲಿಯಲ್ಲಿ ಬಹಳಷ್ಟು ಕೊರೋನಾ ಕಾರಣದಿಂದ ಬದಲಾವಣೆಗಳಾಗಿದ್ದು, ಇದುವರೆಗೂ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಾಜಾರೋಷವಾಗಿ ಅಲೆದಾಡುತ್ತಿದ್ದ ಮಂದಿ ಇಂದು ಮನೆಯಿಂದ ಹೊರಗೆ ಕಾಲಿಡುವ ಮೊದಲು ಹಲವು ಬಾರಿ ಯೋಚಿಸುವಂತೆ ಆಗಿದೆ. ಮನೆಯೊಳಗೆ ಕುಳಿತು ಉಂಟಾಗುವ ಏಕತಾನತೆಯನ್ನು ಕಳೆಯಲು ಈ ಎಲ್ಲಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು.ವಿವಿಧ ಜರ್ನಲ್ ಹಾಗೂ ಬ್ಲಾಗ್‌ಗಳನ್ನು ಪ್ರಾರಂಭಿಸಬಹುದು:ನಿಮಗೆ ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ನಿಮ್ಮ ಜೀವನದ ಸವಿನೆನಪುಗಳು, ಅಜ್ಜಿ ಹೇಳಿದ ಹಳೆಯ ಕಥೆಗಳು ಮತ್ತು ವಿಶೇಷ ಸನ್ನಿವೇಶಗಳು, ವಿಶೇಷ ಸಾಧನೆಗಳು, ಬಾಲ್ಯದ ಅನುಭವಗಳು ಮತ್ತು ರೋಚಕ ಸಂದರ್ಭಗಳನ್ನು ಬರೆದು ಅವುಗಳನ್ನು ನಿಮ್ಮದೇ ಆದ ಜರ್ನಲ್ ಯಾ ಬ್ಲಾಗ್‌ಗಳಲ್ಲಿ ಆನ್‌ಲೈನ್ ಮೂಲಕ ಮತ್ತು ಕೂ ಅಪ್ಲಿಕೇಶನ್ ಮೂಲಕ ಸಂಚಿಕೆಗಳಂತೆ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು.ಗೊತ್ತಿರುವ…

Read More

ತಾಂಬಾ: ‘ದೇಶಕ್ಕೆ ಕಾಂಗ್ರೆಸ್ ಮಾತ್ರ ಪರ‍್ಯಾಯ’ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.ಸಿಂದಗಿ ಮತಕ್ಷೇತ್ರದ ತಾಂಬಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ತಮಗೆ ಮತ ನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸುವೆ. ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿದರು.ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನ ಹಿತ ಸಾಧ್ಯ. ಇಷ್ಟು ವರ‍್ಷ ನೀವು ಕೇಂದ್ರ ಸರಕಾರದಿಂದ ಬರುವ ನಿಮ್ಮ ಹಕ್ಕಿನಿಂದ ವಂಚಿತರಾಗಿದ್ದೀರಿ. ನಿಮ್ಮ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಮೋದಿಯವರು ಭಾವನಾತ್ಮಕ ವಿಷಯ ಕೆದಕಿ ಜನರನ್ನು ಪ್ರಚೋದಿಸುತ್ತಾರೆ. ಫುಲ್ವಾಮಾ, ರಾಮ ಮಂದಿರ ಎನ್ನುತ್ತಾರೆ. ಕಾಂಗ್ರೆಸ್‌ನ ಕೆಲಸಗಳನ್ನು ನೋಡಿ ನೀವು ಮತ ಹಾಕಿ ಎಂದು ಮನವಿ ಮಾಡಿದರು.ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಜಿ.ಪಂ. ಸದಸ್ಯ ಗುರಣ್ಣಗೌಡ ಪಾಟೀಲ ಚಾಂದಕವಟೆ, ರವಿ ಚವ್ಹಾಣ,…

Read More