ವಿಜಯಪುರ: ಕಳೆದ ಎರಡು-ಮೂರು ದಿನಗಳಿಂದ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ದ್ರಾಕ್ಷಿ ಹಣ್ಣು ಮಾರುಕಟ್ಟೆಗೆ ಬರುವ ಮುನ್ನ ಕೀಟನಾಶಕದಲ್ಲಿ ಮುಳಗಿಸಿ ಮಾರಾಟ ಮಾಡಲು ತರಲಾಗುತ್ತದೆ ಎಂಬ ಸುಳ್ಳು ಸುದ್ದಿ ಪ್ರಚಾರ ಮಾಡಿ ಹರಿಬಿಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿ ಹರಿಬಿಡುವುದರಿಂದ ರೈತರು ಮಾರಾಟಕ್ಕೆ ತರುವ ದ್ರಾಕ್ಷಿ ಹಣ್ಣಿನ ದರದಲ್ಲಿ ಪರಿಣಾಮ ಬಿರುತ್ತದೆ ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಆದರ ಕಾರಣ ಸಾರ್ವಜನಿಕರು ಇದರ ಬಗ್ಗೆ ತಿಳುವಳಿಕೆಯಿಂದ ಇರಬೇಕು ಎಂದು ವಿಜಯಪುರ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ದ್ರಾಕ್ಷಿಯನ್ನು ಹಣ್ಣು ಹಾಗು ಮೆನುಕ ರೀತಿಯಲ್ಲಿ ಎರಡು ಬಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ತಾಜಾ ಹಣ್ಣು ಮಾರಾಟ ಮಾಡುವ ಸಮಯದಲ್ಲಿ ಯಾವುದೇ ರೀತಿಯ ಕೀಟನಾಶಕ/ದ್ರಾವಣದಲ್ಲಿ ಅದ್ದಿ ಮಾರಾಟ ಮಾಡುವುದಿಲ್ಲ. ಆದರೆ ಮನುಕ ಮಾಡಬೇಕಾದರೆ ದ್ರಾಕ್ಷಿಯ ಹಣ್ಣನ್ನು ಡಿಪಿಂಗ್ ಆಯಿಲ್‌ನಲ್ಲಿ ಅದ್ದಿದರೆ ಮಾತ್ರ ಒಳ್ಳೆಯ ಗುಣಮಟ್ಟದ ಮನುಕ ತಯಾರು ಮಾಡಬಹುದಾಗಿದೆ. ಇದು ಎನ್‌ಆರ್‌ಸಿ ಯಿಂದ ಪ್ರಮಾಣೀಕರಿಸಿದ ಔಷಧಗಳನ್ನು ಬಳಸಬೇಕು. ಆದರೆ ತಾಜಾಹಣ್ಣುಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಆಗಿದೆ. ಇದನ್ನು ನಂಬಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ
Subscribe to Updates
Get the latest creative news from FooBar about art, design and business.
Related Posts
Add A Comment

