ವಿಜಯಪುರ: ಮನಗೂಳಿ ಪೊಲೀಸ್ ಠಾಣೆ ಗುನ್ನೆ ನಂ೧೮/೨೦೧೫ ಹಾಗೂ ಜಿಲ್ಲಾ ಸತ್ರ ನ್ಯಾಯಾಲಯದ ಪ್ರಕರಣ ಸಂಖೆ ಎಸ್.ಸಿ ನಂ೭೦/೨೦೧೫ರ ಪ್ರಕರಣದಲ್ಲಿ ರಾಮನಗರ ಜಿಲ್ಲೆಯ ಕನಕಪೂರ ತಾಲೂಕಿನ ಕುಂಬಾರದೊಡ್ಡಿಯ ಗ್ರಾಮದ ನೊಂದ ಮಹಿಳೆಯಾದ ಶಕುಂತಲಾ ನೀಲಕಂಠ ಜೋಶಿ ಇವರಿಗೆ ಪರಿಹಾರ ಕೊಡುವ ಸಲುವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಮುಂದೆ ಹಾಜರಾಗಲು ತಿಳಿಸಿದ್ದು, ಅಲ್ಲದೇ ಪೊಲೀಸ್ ಸಿಬ್ಬಂದಿಗಳು ನೊಂದ ಮಹಿಳೆಯ ವಿಳಾಸಕ್ಕೆ ಹೋಗಿ ವಿಚಾರಿಸಲಾಗಿದ್ದರೂ ಮಹಿಳೆಯ ಹಾಜರಾತಿ ಸಿಕ್ಕಿರುವುದಿಲ್ಲ.
ಈ ಹಿನ್ನಲೆಯಲ್ಲಿ ಮಹಿಳೆಯ ಮಾಹಿತಿಯು ಸಾರ್ವಜನಿಕರಿಗೆ ಅಥವಾ ಯಾರಿಗಾದರೂ ಲಭ್ಯವಿದ್ದಲ್ಲಿ ಜಿಲ್ಲಾ ನಿಸ್ತಂತು ಕೇಂದ್ರ ವಿಜಯಪುರ(೦೮೩೫೨-೨೫೦೮೪೪), ಡಿಎಸ್‌ಪಿ ಕಚೇರಿ ವಿಜಯಪುರ ಗ್ರಾಮಾಂತರ(೯೪೮೦೮೦೪೨೨೩), ಸಿಪಿಐ ಕಚೇರಿ ವಿಜಯಪುರ ಗ್ರಾಮಾಂತರ(೯೪೮೦೮೦೪೨೩೧), ಮನಗೂಳಿ ಪಿಎಸ್‌ಐ ಕಚೇರಿ(೯೪೮೦೮೦೪೨೦೭) ಇವರಿಗೆ ಮಾಹಿತಿ ನೀಡಬೇಕು ಎಂದು ಮನಗೂಳಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
