Author: editor.udayarashmi@gmail.com

– ಪ್ರೊ. ರಹಮತ್ ತರೀಕೆರೆ 2023ನೇ ಇಸವಿಯ ಮುಖ್ಯ ಘಟನೆಯೆಂದರೆ, ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು ಮತ್ತು ರಾಜಕೀಯವಾಗಿ ದಕ್ಷಿಣ ಭಾರತವು ಅಡಳಿತದಲ್ಲಿ ಬಿಜೆಪಿ ಮುಕ್ತವಾಗಿದ್ದು. ಈ ಫಲಿತಾಂಶವು ಇಡೀ ಭಾರತದ ರಾಜಕಾರಣದ ದಿಕ್ಕನ್ನು ನಿರೂಪಿಸಬಹುದು ಎಂದು ಆಶಿಸಲಾಗಿತ್ತು. ಆದರೆ ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿಯ ಗೆಲುವು, ಕೌಬೆಲ್ಟ್ ಎನ್ನಲಾಗುವ ಉತ್ತರ ಭಾರತದ ಆಲೋಚನಾ ಕ್ರಮವು ಬೇರೆಯೇ ಇದೆ ಎಂಬುದನ್ನು ಸೂಚಿಸಿತು. ದಕ್ಷಿಣ ಭಾರತದಲ್ಲಿ ರಾಜಕೀಯವಾಗಿ ಬಿಜೆಪಿ ಸೋತರೂ, ಅದರ ಮತಗಳಿಕೆ ಕಡಿಮೆಯಾಗಿಲ್ಲ; ಸಮಾಜದಲ್ಲಿ ಸಂಘಪರಿವಾರವು ಬಿತ್ತಿದ ಆಲೋಚನೆಗಳು ಪ್ರಭಾವಶಾಲಿಯಾಗಿವೆ.ಈ ಮಿತಿಗಳಲ್ಲೂ 2023ನೇ ವರ್ಷದಲ್ಲಿ ನಡೆದ ಐದು ರಾಜ್ಯಗಳ ಚುನಾವಣೆಗಳು, ಉತ್ತರ-ದಕ್ಷಿಣಗಳಲ್ಲಿರುವ ಒಂದು ವ್ಯತ್ಯಾಸವನ್ನು ಸೂಚಿಸಿವೆ. ಅದೆಂದರೆ ಹಾರ್ದಿಕವಾದ ಸಾಮಾಜಿಕ ಸಂಬಂಧ ಮತ್ತು ಆರ್ಥಿಕ ಏಳಿಗೆಯ ಪ್ರಶ್ನೆಗಳಿಗಿಂತ ‘ಧಾರ್ಮಿಕ’ ಎನ್ನಲಾಗುವ ವಿಷಯಗಳಿಗೆ ಉತ್ತರದ ನೆಲದಲ್ಲಿ ಹೆಚ್ಚು ನೀರುಗೊಬ್ಬರಗಳಿವೆ ಎನ್ನುವುದು. ಈ ತರ್ಕದ ಮುಂದುವರಿಕೆ ಎಂಬಂತೆ, ಈಗ ಅಯೋಧ್ಯೆಯಲ್ಲಿ ರಾಮಮಂದಿರವು, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆಯಾಗುತ್ತಿದೆ. ಇದರ ಬೆನ್ನಲ್ಲೇ 2024ನೇ ಇಸವಿಯ…

Read More

ಅಯೋಧ್ಯೆ ರಾಮ ಮಂದಿರದಲ್ಲಿ ಜ.22ರಂದು ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಮೂರ್ತಿ ಪ್ರತಿಷ್ಠಾಪನೆ ಮೈಸೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಜ.22ರಂದು ನಡೆಯಲಿದೆ. ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀ ರಾಮನ ಪ್ರತಿಮೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದೆ.ಸಂಕ್ರಾಂತಿ ದಿನವಾದ ಸೋಮವಾರ ಈ ಕುರಿತು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಾಹಿತಿ ನೀಡಿದೆ. ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.ಅಯೋಧ್ಯೆಯ ಶ್ರೀ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಧ್ಯಾಹ್ನ 12.20ಕ್ಕೆ ಪ್ರಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮ ಲಲ್ಲಾ ಮೂರ್ತಿಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.…

Read More

ತಿಕೋಟಾ: ಭಾರತವು ಉನ್ನತ ಆದರ್ಶವಾದವನ್ನು ಹೊಂದಿತ್ತು, ಅದನ್ನು ಸ್ವಾಮೀಜಿ ಪಾಲಿಸಬೇಕೆಂದು ಬಯಸಿದ್ದರು, ಆದರೆ ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿರುವ ಆದರ್ಶವಾದವು ಅರ್ಥಹೀನವಾಗಿತ್ತು. ಹೀಗಾಗಿ, ಮನೆಗೆ ಹಿಂತಿರುಗಿ, ಅವರು ಉನ್ನತ ತತ್ವಶಾಸ್ತ್ರಕ್ಕಿಂತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಿದರು ಎಂದು ತೆಲಸಂಗದ ವಿರೇಶ್ವರ ದೇವರು ಮಾತನಾಡಿದರು.ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಹೋರಾಟ ದೊಡ್ಡದಾದಷ್ಟೂ ಗೆಲುವು ಅಮೋಘ. ಒಂದು ಸಮಯದಲ್ಲಿ ಒಂದು ಕೆಲಸವನ್ನು ಮಾಡಿ, ಮತ್ತು ಹಾಗೆ ಮಾಡುವಾಗ ನಿಮ್ಮ ಸಂಪೂರ್ಣ ಆತ್ಮವನ್ನು ಅದರಲ್ಲಿ ಇರಿಸಿ ಎಂದು ಅಧ್ಯಕ್ಷತೆ ವಹಿಸಿದ ಎಸ್ ಜಿ ಲಕ್ಕುಂಡಿಮಠ ಹೇಳಿದರು.ಅಧ್ಯಯನಕ್ಕೆ ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಧ್ಯಾನ ಅಗತ್ಯ ಎಂದ ಸ್ವಾಮಿಯವರು ಧಾರ್ಮಿಕ ಬೆಳವಣಿಗೆಯನ್ನು ಶಿಕ್ಷಣದ ಮುಖ್ಯ ಗುರಿಯಾಗಿ ಪರಿಗಣಿಸಿದ್ದರು ಎಂದು ರೇ ಸಿ ಪಾಟೀಲ ಹೇಳಿದರು.ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆಯಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಾಲ ಪ್ರತಿಭಾ ಪುರಸ್ಕೃತರಾದ ಕು.ಅದ್ವಿತಾ ಬಡಿಗೇರ,…

Read More

ಕೊಲ್ಹಾರ: ಭಾರತ ದೇಶದ ವಿಶ್ವದ ಎಲ್ಲ ದೇಶಗಳಲ್ಲಿ ವಾಸಿಸುವ ಹಿಂದೂಗಳ ಬಹುದಿನದ ಕನಸು ಇಂದು ನನಸಾಗುತ್ತಿರುವದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದ್ದು ಅಂದಿನ ದಿವಸ ಪ್ರತಿಯೊಂದು ಊರಿನ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಣೆ ಮಾಡುವದರ ಮೂಲಕ ರಾಮಲಲ್ಲಾ ದೇವರ ಪ್ರಾರ್ಥನೆ ಮಾಡೋಣ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ದೇವಸ್ಥಾನಗಳ ಸ್ವಚ್ಚತಾ ಕಾರ್ಯಕ್ರಮದ ಭಾಗವಾಗಿ ರವಿವಾರ ಪಟ್ಟಣದ ದ್ಯಾಮವ್ವದೇವಿ ದೇವಸ್ಥಾನದ ಹಾಗೂ ಆವರಣದ ಸ್ವಚ್ಚತೆಯನ್ನು ಮಾಡುವುದರ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೂಗಳ ಭಾವನೆಯ ಆರಾಧ್ಯದೈವ ರಾಮದೇವನು ಜನ್ಮತಾಳಿದ ಪುಣ್ಯಭೂಮಿಯಲ್ಲಿಯೇ ಐದುನೂರು ವರ್ಷಗಳ ನಂತರ ಭವ್ಯವಾದ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವುದು ಹಲವಾರು ಮಹನೀಯರ ಸತತ ಪರಿಶ್ರಮದ ತ್ಯಾಗ, ನಿಸ್ವಾರ್ಥ ಮನೋಭಾವನೆಯಿಂದ ಸಾಧ್ಯವಾಗುತ್ತಿರುವುದು ಸಂತಸದಾಯಕ ವಿಷಯವಾಗಿದೆ ಎಂದರು.ವಿಶಾಲವಾದ ದ್ಯಾಮವ್ವದೇವಿ ದೇವಸ್ಥಾನದ ಗರ್ಭಗುಡಿ, ಪ್ರಾಂಗಣ, ಅಂಗಳವನ್ನು ಕಾರ್ಯಕರ್ತರೊಂದಿಗೆ ಸೇರಿ ಬೆಳ್ಳುಬ್ಬಿಯವರು ಕಸ ಕಡ್ಡಿ ಸ್ವಚ್ಚ ಮಾಡಿ ಜಲಾಭಿಷೇಕದಿಂದ ದೇವರ ಗುಡಿಯನ್ನು ಸ್ವಚ್ಚಂದಗೊಳಿಸಿ, ಇಂತಹ ಮಹತ್ಕಾರ್ಯದ ನೆನಪಿಗಾಗಿ ಪಟ್ಟಣದಲ್ಲಿರುವ ಮತ್ತು ಬಸವನ ಬಾಗೇವಾಡಿ…

Read More

ವಿಜಯಪುರ: ಜಿಲ್ಲಾ ಪಂಚಾಯತಿಯ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಋಷಿ ಆನಂದ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಹುಲ್ ಶಿಂಧೆ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿರುವುದರಿಂದ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಗೆ ಋಷಿ ಆನಂದ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದೆ.ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹುದ್ದೆಗೆ ವರ್ಗಾವಣೆಗೊಂಡು ಆಗಮಿಸಿದ ಋಷಿ ಆನಂದ ಅವರನ್ನು ನಿರ್ಗಮಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸೇರಿದಂತೆ ಜಿಲ್ಲಾ ಪಂಚಾಯತಿಯ ವಿವಿಧ ಅಧಿಕಾರಿಗಳು, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.ಪ

Read More

ಚಿಮ್ಮಡ: ವಿದ್ಯುತ್ ಉಪಯೋಗದ ಹಾಗೂ ಅದರಿಂದಾಗುವ ಅನಾಹುತಗಳ ಕುರಿತ ಸಂಪೂರ್ಣ ಮಾಹಿತಿ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಅವಶ್ಯಕತೆ ಇದೆ ಎಂದು ಹೆಸ್ಕಾಂ ರಬಕವಿ ವಿಭಾಗೀಯ ಅಧಿಕಾರಿ ಸುನೀಲ ಮುಧೋಳ ಹೇಳಿದರು.ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೋಳ್ಳಲಾಗಿದ್ದ ವಿದ್ಯುತ್ ಸುರಕ್ಷತಾ ಮಾಶಾಚರಣೆ ಹಾಗೂ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಪ್ರಸರಣದಿಂದ ಪ್ರತಿಯೊಬ್ಬರು ಸುರಕ್ಷತೆಯ ಅಂತರ ಕಾಯ್ದುಕೊಳ್ಳಬೇಕು, ವಿದ್ಯುತ್ ಉಳಿತಾಯಕ್ಕಾಗಿ ಐಎಸ್‌ಐ ಮಾರ್ಕ ಹೊಂದಿರುವ ಗುಣಮಟ್ಟದ ಸುರಕ್ಷತೆ ಹೊಂದಿರುವ ವಿದ್ಯುತ್ ಸಲಕರಣೆಗಳನ್ನು ಮಾತ್ರ ಖರೀದಿಸಬೇಕು. ಅನವಶ್ಯಕ ವಿದ್ಯುತ್ ಬಳಕೆ ನಿಲ್ಲಿಸಬೇಕು, ವಿದ್ಯುತ್ ಕಂಬ, ತಂತಿಗಳ ಮೇಲೆ ಬಟ್ಟೆ ಒನಹಾಕುವುದು, ಅದಕ್ಕೆ ದನ ಕರುಗಳನ್ನು ಕಟ್ಟುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು, ಮಕ್ಕಳು ವಿದ್ಯುತ್ ಪ್ರಸರಣವಿರುವ ಸ್ಥಳಗಳಲ್ಲಿ ಗಾಳಿಪಟ ಹಾರಿಸುವುದು ಅದರ ಹತ್ತಿರ ಆಟ ಆಡಬಾರದು ಎಂದರು.ಶಾಲೆಯ ಮುಖ್ಯ ಗುರು ಬಿ.ಎಸ್.ಹಲಗಿ ಮಾತನಾಡಿ, ವಿದ್ಯುತ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿ ಬೆಳಕು ಕೊಡುವ ದೇವರಿದ್ದಂತೆ…

Read More

ಜೆಜೆಎಂ ಕಾಮಗಾರಿಗೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಭೂಮಿಪೂಜೆ ಕಲಕೇರಿ: ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಪ್ರತಿ ಹಳ್ಳಿಗಳ ಪ್ರತಿಯೊಂದು ಮನೆಮನೆಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಸದುದ್ದೇಶದಿಂದ ಜಲಜೀವನ ಮಿಷನ್ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಯಡಿ ಕಲಕೇರಿ ಗ್ರಾಮಕ್ಕೆ ಅಂದಾಜು ೩ ಕೋಟಿ ೫೨ ಲಕ್ಷ ರೂ.ಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ಗ್ರಾಮಸ್ಥರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೊಡಗಿ ಹೇಳಿದರು.ರವಿವಾರ ಸಂಜೆ ನಡೆದ ಭಾರತ ಸರಕಾರ, ಕರ್ನಾಟಕ ಸರಕಾರ, ಜಿಪಂ ವಿಜಯಪುರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಿಂದಗಿ ಇವರ ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಗ್ರಾಮದ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದ ಹತ್ತಿರ ಭೂಮಿಪೂಜೆ ನೆರವೇರಿಸಿ ನಂತರ ಮುಖ್ಯಬಜಾರದಲ್ಲಿ ನಡೆದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಇದೇ…

Read More

ಕೊಲ್ಹಾರ: ಸಿಂದಗಿ ಬಸ್ ಘಟಕದಿಂದ ದೇವರಹಿಪ್ಪರಗಿ ಮೂಲಕ ಕೊಲ್ಹಾರ ಪಟ್ಟಣಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಸೌಕರ್ಯವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೊಲ್ಹಾರದ ನಾಗರಿಕರು ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ ಅವರಿಗೆ ಮನವಿ ಅರ್ಪಿಸಿದರು.ಕೊಲ್ಹಾರದ ರಾಜುಗೌಡರ ಸ್ನೇಹಿತರ ಬಳಗದವರು ಶಾಸಕರ ಸ್ವಗ್ರಾಮವಾದ ಕುದರಿಸಾಲೋಡಗಿಗೆ ತೆರಳಿ ಫಲಪುಷ್ಪ ನೀಡಿ ಗೌರವಿಸಿ ಮನವಿ ಅರ್ಪಿಸಿದ ತಕ್ಷಣ ರಾಜುಗೌಡರು ವಿಜಯಪೂರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಡಿ.ಟಿ.ಓ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಎರಡು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರ ಸಾರಿಗೆ ವಾಹನವಾದ ಬಸ್ ಸೇವೆಯನ್ನು ತಕ್ಷಣವೇ ಒದಗಿಸಿಕೊಡಬೇಕೆಂದು ಸೂಚನೆ ಕೊಟ್ಟರು.ನನ್ನ ಸ್ವಕ್ಷೇತ್ರದ ಕೇಂದ್ರಸ್ಥಳವಾದ ದೇವರಹಿಪ್ಪರಗಿ ಪಟ್ಟಣದಿಂದ ಮಾರ್ಕಬ್ಬನಹಳ್ಳಿ-ಡೋಣೂರ-ಮಸಬಿನಾಳ-ಉಕ್ಕಲಿ-ಮನಗೂಳಿ-ಕಲಗುರ್ಕಿ-ಮುಳವಾಡ-ಮಲಘಾನ-ಹಿರೇಆಸಂಗಿ-ರೋಣಿಹಾಳ-ಹಿರೇ ಗರಸಂಗಿ ಮೂಲಕ ನೂತನ ತಾಲೂಕು ಕೇಂದ್ರ ಕೊಲ್ಹಾರ ಪಟ್ಟಣಕ್ಕೆ ಒಳಮಾರ್ಗದ ರಸ್ತೆ ಸಂಪರ್ಕವಾದ ನನ್ನ ಮತಕ್ಷೇತ್ರದ ಜನರಿಗೆ ಹಾಗೂ ಬಸವನ ಬಾಗೇವಾಡಿ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗುವ ಬಸ್ ಸೇವೆ ಇದಾಗಿದ್ದು ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗುವದು ಆದ್ದರಿಂದ…

Read More

ಮೋರಟಗಿ: ಹಿಂದೂಗಳ ಆರಾಧ್ಯದೇವ ಶ್ರೀರಾಮಚಂದ್ರನ ಮೂರ್ತಿ ಪ್ರತಿಷ್ಠಾಪನೆ ದಿನವನ್ನು ದೀಪಾವಳಿಯಂತೆ ಆಚರಿಸೋಣ. ಪ್ರತಿ ಹಿಂದೂ ಮನೆಯಲ್ಲಿ ದೀಪ ಬೆಳಗಿಸಿ ಶ್ರೀರಾಮನನ್ನು ಆರಾಧಿಸೋಣ ಎಂದು ಸಿದ್ದನಗೌಡ ಪಾಟೀಲ್ ಹೇಳಿದರು.ಜ.೬ ರಂದು ಅಯೋಧ್ಯ ನಗರದಲ್ಲಿ ನೂತನವಾಗಿ ನಿರ‍್ಮಾಣಗೊಂಡ ರಾಮಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಕುಳೇಕುಮಟಗಿ ಗ್ರಾಮದಲ್ಲಿ ಎಲ್ಲ ಹಿಂದೂ ಕಾರ‍್ಯಕರ‍್ತರನ್ನೊಳಗೊಂಡು ಮನೆ ಮನೆಗೆ ಪತ್ರಗಳು ವಿತರಿಸಿ ಅವರು ಮಾತನಾಡಿದರು.ನೂರಾರು ವರ್ಷಗಳ ಬಳಿಕ ರಾಮ ಮೂರ‍್ತಿ ಪ್ರತಿಷ್ಠಾಪನೆ ಆಗುವ ಕಾಲ ಕೂಡಿಬಂದಿದೆ. ಈ ಭಕ್ತಿಯ ಸಂಭ್ರಮ ದೇಶಾದ್ಯಂತ ಕಾಣಲಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಎಲ್ಲ ಹಿಂದೂ ಸಮುದಾಯದ ಹಿರಿಯರು ತಾಯಂದ್ರು ಮನೆಗಳಲ್ಲಿ ಬಡಾವಣೆಯ ದೇವಸ್ಥಾನಗಳ ಆವರಣವನ್ನು ಸ್ವಚ್ಛತೆಗೊಳಿಸಿ ಜ.೧೪ರಿಂದ ಪ್ರಾರ್ಥನೆ ವಿವಿಧ ರೀತಿಯ ಪೂಜಾ ಕಾರ‍್ಯಕ್ರಮ ಏರ‍್ಪಡಿಸುವಂತಾಗಬೇಕು ಎಂದು ಮನವಿ ಮಾಡಿ, ಮನೆ ಮನೆಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಮಂತ್ರಾಕ್ಷತೆ ವಿತರಿಸಿದರು.ಈ ಸಂದರ್ಭದಲ್ಲಿ ಚೆನ್ನಪ್ಪ ಹೂಗಾರ್, ಬಸವರಾಜ್ ಮುರಟಗಿ, ಸಿದ್ದು ಬಡಿಗೇರ್, ಮಂಜುನಾಥ್ ದೇವಣ್ಗಾವ್, ಮಹಾಂತೇಶ್ ಮಾಗಣಗೇರಿ, ಅಗಸರ್ ಸೇರಿದಂತೆ ಅನೇಕ ಹಿಂದೂ ಕಾರ‍್ಯಕರ‍್ತರು…

Read More