ವಿಜಯಪುರ: ಕಳೆದ ೪೦ ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಪಾಪಿಷ್ಟ ಸರಕಾರ ಎಂದಿಗೂ ಕಂಡಿಲ್ಲ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಗುರುವಾರ ಕನ್ನೂರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಗತ್ತು ಕಂಡ ಶ್ರೇಷ್ಠ ನಾಯಕ ನರೇಂದ್ರ ಮೊದಿ ಸ್ವತಃ ತನ್ನ ಸಂಬಂಧಿಕರನ್ನು ಸರ್ಕಾರದ ಸಮೀಪಕ್ಕೆ ಸೇರಿಸದೇ ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ತಾಯಿ ತೀರಿಕೊಂಡಾಗಲೂ ಕಡಿಮೆ ಸಮಯ ಕೊಟ್ಟು ಮತ್ತೆ ಕರ್ತವ್ಯಕ್ಕೆ ಹಾಜರಾಗಿ ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದ್ದಾರೆಂದು ಹೇಳಿದರು.
ಮೇ ೭ ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕೆಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಅರುಣ ಶಹಾಪೂರ, ಅಪ್ಪು ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ಸಂಜೀವ ಐಹೊಳೆ, ಈರಣ್ಣ ರಾವರೂರ, ಮುಳುನಗೌಡ ಪಾಟೀಲ, ಚಿದಾನಂದ ಚಲವಾದಿ, ಸಿದ್ಧನಗೌಡ ಪಾಟೀಲ, ಎಸ್.ಎ.ಪಾಟೀಲ, ಶಂಕರಗೌಡ ಪಾಟೀಲ, ಭೀಮು ಸಾಹುಕಾರ ಬಿರಾದಾರ, ಮಹೇಂದ್ರ ನಾಯಕ, ಶರತ ರಜಪೂತ, ಸಿದ್ದು ದಸ್ತರೆಡ್ಡಿ, ಸ್ವಪ್ನಾ ಕಣಮುಚನಾಳ ಸೇರಿದಂತೆ ಬಿಜೆಪಿ -ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

