ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಬಸಪ್ಪ ಶರಣ (ಮೌನ ಯೋಗಿ)ರ ೨೭ನೇ ಆರಾಧನಾ ಮಹೋತ್ಸವದ ಪ್ರಯುಕ್ತ ಏಪ್ರೀಲ್ ೫ ರಂದು ಬೆಳಿಗ್ಗೆ ೧೦.೩೦ಕ್ಕೆ ಶರಣರ ಗದ್ದುಗೆಗೆ ಅಭಿಷೇಕ, ಪೂಜೆ, ಭಜನಾ ಸಮಾಪ್ತಿ, ಮಹಾನೈವೇದ್ಯ, ಮಂಗಳಾರತಿ, ಹಾಗೂ ಮಧ್ಯಾಹ್ನ ೧ ಕ್ಕೆ ಮಹಾಪ್ರಸಾದ ಇರಲಿದೆ.
ಚನ್ನಮ್ಮಲ್ಲಪ್ಪ ಶರಣರ ದಿವ್ಯ ನೇತೃತ್ವದಲ್ಲಿ ವಿವಿಧ ಮಠಾಧೀಶರ, ಸಂತರ ಸಮ್ಮುಖದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಸದ್ಭಕ್ತರು ಆಗಮಿಸಿ ಗುರುದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

