ಸಿಂದಗಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ೨ವರ್ಷದ ಬಾಲಕ ಸಾತ್ವಿಕನನ್ನು ರಕ್ಷಣೆ ಮಾಡಲು ಮುಂದಾಳತ್ವವನ್ನು ವಹಿಸಿದ ವಿಜಯಪುರ ಜಿಲ್ಲಾಧಿಕಾರಿಗಳಿಗೆ, ಸಹಕರಿಸಿದ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ, ವಿಜಯಪುರ ಎಸ್ಪಿ, ಡಿವಾಯ್‌ಎಸ್‌ಪಿ, ಇಂಡಿ ಉಪವಿಭಾಗಾಧಿಕಾರಿ, ಒಳಗೊಂಡಂತೆ ಎಲ್ಲ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಸತತ ೨೧ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದ ಎಲ್ಲರಿಗೂ ಕೋಟಿ ಕೋಟಿ ಸಲಾಂ ಎಂದು ಸಿಂದಗಿ ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಸಾಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ತಿಳಿಸಿದ್ದಾರೆ.
ಇನ್ನಾದರೂ ಸಾರ್ವಜನಿಕರು ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚಿ. ಇಲ್ಲವಾದರೆ ಅಮಾಯಕ ಕಂದಮ್ಮಗಳು ಬಲಿಯಾಗುತ್ತವೆ. ಇಂತಹ ಘಟನೆಗಳು ಮೇಲಿಂದ ಮೇಲೆ ಸಂಬವಿಸುತ್ತಿದ್ದರೂ ಸಾರ್ವಜನಿಕರು ಜಾಗೃತರಾಗದೇ ಇರುವುದು ಬೇಸರದ ಸಂಗತಿ. ಸಮಾಜ ಮತ್ತು ಜನರು ಇದರ ಬಗ್ಗೆ ಇನ್ನೂ ಮುಂದಾದರೂ ಜಾಗೃತಿ ವಹಿಸಿ ಎಚ್ಚೆತ್ತುಕೊಳ್ಳಬೇಕು ಎಂದು ರಶ್ಮಿ ನೂಲಾನವರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
