ಮುದ್ದೇಬಿಹಾಳ: ಸಾವು ಗೆದ್ದು ಬಂದ ಸಾತ್ವಿಕ್ ನ ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ ಎಲ್ಲರಿಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಪ್ರಾರ್ಥನೆ ಫಲಿಸಿದೆ. ಕೊಳವೆ ಬಾವಿಗೆ ಬಿದ್ದಿದ್ದ ೧೪ ತಿಂಗಳ ಮಗು ಸಾತ್ವಿಕ್ ಹೊರ ಜಗತ್ತನ್ನು ನೋಡುವಂತಾಗಿದ್ದಾನೆ. ಸತತ ೨೦ ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ನಮ್ಮ ಹೆಮ್ಮೆಯ ಎಸ್ ಡಿ ಆರ್ ಎಫ್, ವಿಜಯಪುರ ಜಿಲ್ಲಾ ಆಡಳಿತಕ್ಕೆ, ಪೊಲೀಸ್ ತಂಡಕ್ಕೆ ಹಾಗೂ ಶ್ರಮಿಸಿದ ಮತ್ತು ಸಹಕರಿಸಿದ ಸರ್ವರಿಗೂ ಆಯೋಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವದಾಗಿ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಫೋನ್ ಮುಖಾಂತರ ಮಾತನಾಡಿ, ಬಾಲಕ ಸಾತ್ವಿಕ ಆರೋಗ್ಯದ ಬಗ್ಗೆ ವಿಚಾರಿಸಿದಾಗ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾತನಾಡಿ, ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯದ ಬಗ್ಗೆ ಸೇರಿದಂತೆ ವಿವರಣೆ ಪಡೆದುಕೊಂಡು ಆಯೋಗಕ್ಕೆ ವರದಿ ನೀಡಲು ಸೂಚನೆ ನೀಡಿದ್ದಾಗಿ ತಿಳಿಸಿದ್ದಾಗಿ ಮತ್ತು ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಕೊಳವೆ ಬಾವಿಗಳಲ್ಲಿ ಮಕ್ಕಳು ಬಿದ್ದು ಸಾವು ಬದುಕಿನ ಮಧ್ಯೆ ಹೊರಾಡಿದ ಘಟನೆಗಳು ನಡೆದಿವೆ. ಸರ್ಕಾರದ ಮತ್ತು ಖಾಸಗಿ ಕೊಳವೆ ಬಾವಿಗಳು ಮುಚ್ಚಿಡುವಂತೆ ಆದೇಶ, ಸುತ್ತೋಲೆಗಳು ಬಂದಿವೆ. ಆದರೂ ಸಹ ಈ ತರಹದ ಘಟನೆಗಳು ಜರುಗುತ್ತಿರುವುದು ಆಯೋಗ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ದುರ್ಘಟನೆ ನಡೆಯದಂತೆ ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದು ಜಿಲ್ಲೆಯಾದ್ಯಂತ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

