Author: editor.udayarashmi@gmail.com

ಬಾಗಲಕೋಟೆ: ಬಾಗಲಕೋಟೆಯ ಸಿದ್ದನಕೊಳ್ಳದಲ್ಲಿ ಜನೆವರಿ 15 ಸೋಮವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜರುಗಿದ 2024 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ “ತುಷಾರ್” ಚಲನಚಿತ್ರ ನೋಡಿದ ಹಿರಿಯ ನಿರ್ದೇಶಕರು, ಕಲಾವಿದರು ಮತ್ತು ಆಯ್ಕೆ ಸಮಿತಿ “ತುಷಾರ್” ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಚಲನಚಿತ್ರೋತ್ಸವದಲ್ಲಿ ಆಯ್ಕೆಯಾದ ತುಷಾರ್ ಚಲನಚಿತ್ರದ ನಟ ನಿರ್ದೇಶಕ ನಿರ್ಮಾಪಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಸಮಾರಂಭದಲ್ಲಿ ಅವಾರ್ಡ್ ನೀಡುವುದರ ಮುಖಾಂತರ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಿದ್ದನಕೊಳ್ಳ ಮಠದ ಡಾ.ಶಿವಕುಮಾರ ಸ್ವಾಮಿಗಳು, ಚಿತ್ರನಟ ಶೋಭರಾಜ್, ಕೆಜಿಎಫ್ ಸಿನಿಮಾ ಖ್ಯಾತಿಯ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ಕಿನ್ನಾಳ ರಾಜ್, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೆಪಿಸಿಸಿ ಸದಸ್ಯೆ ರಕ್ಷಿತಾ ಇಟಿ, ಗೋವಾದ ಉದ್ಯಮಿ ಸಿದ್ದಣ್ಣ ಮೇಟಿ, ನಟ ನಿರ್ದೇಶಕ ನಿರ್ಮಾಪಕ ಡಾ.ಪ್ರಭು ಗಂಜಿಹಾಳ, ಟಿವಿ ಧಾರಾವಾಹಿ ನಟ ನಟಿಯರು, ಸಿನಿಮಾ ನಿರ್ದೇಶಕರು, ಕಲಾವಿದರು ಪಾಲ್ಗೊಂಡಿದ್ದರು.

Read More

ಮುದ್ದೇಬಿಹಾಳ: ಶಾಲಾ ಹಂತದಲ್ಲಿ ಅಭಿವೃದ್ಧಿ ಹಾಗೂ ನಿರ್ವಹಣೆಯ ಹೊಣೆ ಹೊತ್ತು ಮೂಲ ಸೌಕರ್ಯಗಳನ್ನು ಖಾತರಿಗೊಳಿಸುವುದರ ಜೊತೆ ಕಲಿಕೆಗೆ ಪೂರಕ ವಾತಾವರಣ ಕಟ್ಟಿ ಕೊಡಲು ಶ್ರಮಿಸುತ್ತಿರುವ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯವು ನಾಡಿಗೆ ಮಾದರಿಯಾಗಿದೆ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ ಶಂಕರಗೌಡ ಸೋಮನಾಳ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಲ್ಕೋ ಸೋಲಾರ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟ್ ಎಜ್ಯೂಕೇಷನ್ ಬೆಂಗಳೂರು ಇವರ ತಾಂತ್ರಿಕ ಜ್ಞಾನ ಹಾಗೂ ಮೆಂಡಾ ಫೌಂಡೇಷನ್ ಬೆಂಗಳೂರು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜಬುನ್ನೀಸಾ ಬೀಳಗಿ ಇವರ ಆರ್ಥಿಕ ನೆರವಿನೊಂದಿಗೆ ಸ್ಥಾಪಿತವಾದ ಸ್ಮಾರ್ಟ್ (ಡಿಜಿಟಲ್) ಕ್ಲಾಸ ಉದ್ಘಾಟಿಸಿ ಅವರು ಮಾತನಾಡಿದರು.ಆಂಗ್ಲ ವ್ಯಾಮೋಹ ಹಾಗೂ ಖಾಸಗಿ ಶಾಲೆಗಳ ಹಾವಳಿಯಿಂದ ಮುಚ್ಚುವ ಹಂತ ತಲುಪಿರುವ ಸರ್ಕಾರಿ ಶಾಲೆ ಉಳಿಸಲು ನಡೆದ ಕ್ರಿಯಾತ್ಮಕ ನಡಿಗೆ ಸರ್ವ ಮಾನ್ಯವಾಗಲಿ. ದೇಶದ ಭವಿಷ್ಯವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಸರ್ಕಾರಿ ಶಾಲೆಗಳ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ನಿರೂಪಿಸಲು ಅತ್ಯಾಧುನಿಕ ಸೌಲಭ್ಯಗಳ ಜೊತೆ ಗುಣಾತ್ಮಕ…

Read More

ವಿಜಯಪುರ : ಕೆಪಿಸಿಸಿ ಮಹಿಳಾ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಸ್ನೇಹಲತಾ ಶೆಟ್ಟಿ ನೇಮಕಗೊಂಡಿದ್ದಾರೆಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಸ್ನೇಹಲತಾ ಶೆಟ್ಟಿ ಇವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನೆಟ್ಟ ಡಿಸೋಜ ಅವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀಮತಿ ಡಾ. ಬಿ. ಪುಷ್ಪ ಅಮರ್ನಾಥ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆಇದಕ್ಕೆ ಸಹಕರಿಸಿದ ಅಖಿಲ ಭಾರತ ಕೆಪಿಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದಂತಹ ಡಿ ಕೆ ಶಿವಕುಮಾರ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ, ಮತ್ತು ಸಚಿವರಾದ ಶಿವಾನಂದ ಪಾಟೀಲ, ಜಿಲ್ಲಾ ಎಲ್ಲಾ ಶಾಸಕರು ಮತ್ತು ಕಾರ್ಯಕರ್ತರು ಮತ್ತು ಗೀತಾಂಜಲಿ ಆರ್ ಪಾಟೀಲ, ರಾಜ್ಯ ಕೆಪಿಸಿಸಿ ಮಹಿಳಾ ಉಪಾಧ್ಯಕ್ಷರು, ಕಾಂಗ್ರೆಸ್ ಮುಖಂಡರು ಶುಭಾಶಯ ಕೋರಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದಲ್ಲಿರುವ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ.) ದಲ್ಲಿ ೨೦೨೪-೨೫ನೇ ಸಾಲಿನ ೬ನೇ ತರಗತಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪಾಲಕರು ತಮ್ಮ ಮಕ್ಕಳ ಅರ್ಜಿಯನ್ನು www.schooleducation.kar.nic.in ಅಥವಾ www.vidyavahini.karnataka.gov.in ವೆಬ್‌ಸೈಟ್ ಬಳಸಿ ದಿನಾಂಕ ೧೭/೦೧/೨೦೨೪ ರಿಂದ ೦೬/೦೨/೨೦೨೪ ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ.ತಮ್ಮ ಮಕ್ಕಳ ಅರ್ಜಿಗೆ ಸಂಬಂಧಿಸಿದ ಸಂದೇಶಗಳನ್ನು ಅರ್ಜಿಯಲ್ಲಿ ನೀಡಲಾದ ಮೋಬೈಲ್ ಸಂಖ್ಯೆಗೆ ಕಳುಹಿಸಲಾಗುವುದರಿಂದ ಪಾಲಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ನೀಡುವದು ಕಡ್ಡಾಯವಾಗಿದೆ.ದಿನಾಂಕ ೦೩/೦೩/೨೦೨೪ ರಂದು ಬೆಳಿಗ್ಗೆ ೧೦.೩೦ ರಿಂದ ೧.೦೦ ಗಂಟೆಯವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ೫ನೇ ತರಗತಿಗೆ ಸಂಬಂಧಿಸಿದ ಪಠ್ಯಾಧರಿಸಿ ಕನ್ನಡ-೧೬, ಇಂಗ್ಲಿಷ್-೧೬, ಗಣಿತ-೧೬, ವಿಜ್ಞಾನ-೧೬, ಸಮಾಜ ವಿಜ್ಞಾನ-೧೬, ಸಾಮಾನ್ಯ ಜ್ಞಾನ-೧೦ ಮತ್ತು ಬೌದ್ಧಿಕ ಸಾಮರ್ಥ್ಯ-೧೦ ಒಟ್ಟು ೧೦೦ ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಮುಖ್ಯಗುರುಮಾತೆ ಶ್ರೀಮತಿ ಎನ್. ಬಿ. ತೆಗ್ಗಿನಮಠ ಮೋ. ಸಂಖ್ಯೆ ೯೬೩೨೩೭೮೦೫೮ ಅಥವಾ…

Read More

ವಿಜಯಪುರ: 2024-25 ನೇ ಸಾಲಿಗೆ ಸರಕಾರಿ ಆದರ್ಶ ವಿದ್ಯಾಲಯ ಇಂಡಿ ಶಾಲೆಗೆ ಆರನೇ ತರಗತಿ ದಾಖಲಾತಿಗಾಗಿ ನಡೆಸುವ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.2023-24 ನೇ ಸಾಲಿನಲ್ಲಿ ಇಂಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾಗೂ ಇದೇ ತಾಲೂಕಿನ ಖಾಯಂ ನಿವಾಸಿಗಳ ಮಕ್ಕಳು, ಬೇರೆ ತಾಲೂಕು, ಜಿಲ್ಲೆ , ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿಗಳನ್ನು ಜನೇವರಿ 17 ರಿಂದ ಪೇಬ್ರುವರಿ 6 ರವರೆಗೆ ಸಲ್ಲಿಸಬಹುದು. ಪ್ರವೇಶ ಪರೀಕ್ಷೆ ಮಾರ್ಚ 3ರಂದು ನಡೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ ಹಾಗೂ ಮುಖ್ಯೋಪಾಧ್ಯಾಯ ಎಸ್.ಜಿ.ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆನ್‌ಲೈನ್‌ನಲ್ಲಿ ಅರ್ಜಿಗಳನ್ನು www.schooleducation.kar.nic.in, www.vidyavahini.karnataka.gov.in ವೆಬ್ ಸೈಟ್ ನಲ್ಲಿ ಸಲ್ಲಿಸಬೇಕು.ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಎಸ್ಎಟಿಎಸ್ ನಂಬರ, ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ ಸೈಜಿನ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಯ ಆಧಾರಕಾರ್ಡ, ವಿದ್ಯಾರ್ಥಿಯ ವ್ಯಾಸಂಗ ಪ್ರಮಾಣ ಪತ್ರ…

Read More

ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಅಯೋಧ್ಯಾ ನಗರಿಯಿಂದ ಶ್ರೀರಾಮದೇವಳದ ಉದ್ಘಾಟನೆಯ ಆಹ್ವಾನಾರ್ಥವಾಗಿ ಬಂದಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಕರೆಯೋಲೆಯನ್ನು ೫೦೦ಕ್ಕೂ ಹೆಚ್ಚು ಮನೆಗಳಿಗೆ ವಿತರಿಸಿ, ಆಮಂತ್ರಿಸಿದರು.

Read More

ವಿಜಯಪುರ: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಆರ್. ಎಸ್. ಪಾಟೀಲ (ಕೂಚಬಾಳ) ೨ನೇ ಬಾರಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಯುವ ಮೋರ್ಚಾದಿಂದ ಸನ್ಮಾನಿಸಲಾಯಿತು.ಈ ವೇಳೆಯಲ್ಲಿ ಬಸವರಾಜ್ ಹೂಗಾರ, ಶ್ರೀಕಾಂತ್ ಸಿಂಧಿ, ಪರಶುರಾಮ ಹೊಸಪೇಟೆ, ಶ್ರೀಧರ ಬಿಜ್ಜರಗಿ ಇನ್ನಿತರರು ಇದ್ದರು.

Read More

ರೇವತಗಾಂವದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಸಂಪನ್ನ ಚಡಚಣ: ಶರಣರ ಆಚರಣೆಗಳು ಯಾವುದೇ ಒಂದು ಜಾತಿ, ಜನಾಂಗ, ವರ್ಗಕ್ಕೆ ಸೀಮಿತವಾಗಿಲ್ಲ. ಮನುಕುಲದ ಸಂತರಾಗಿರುವ ಸಿಂಹಗಢ ಮಹಾರಾಜರಂತಹ ಮಹಾತ್ಮರ ಸಂದೇಶಗಳು, ಪವಾಡಗಳು ಮನುಕುಲ ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ದಾರಿ ದೀಪವಾಗುತ್ತವೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ಹೇಳಿದರು.ಬುಧವಾರ ರೇವತಗಾಂವ ಗ್ರಾಮದ ಶ್ರೀ ಸಿಂಹಗಢ ಮಹಾರಾಜರ ೫೪ನೇ ಪುಣ್ಯಾರಾಧನೆ ಕಾರ್ಯಕ್ರಮದ ‘ಧರ್ಮ ಸಭೆ’ ಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಿಂಹಗಢ ಮಹಾರಾಜರಂತಹ ಶರಣರು ಅಂದು ನುಡಿದ ವಿಚಾರಗಳು ಇಂದಿಗೂ ಪ್ರಸ್ತುತ. ಅವರ ವಚನಗಳು, ನಾಣ್ನುಡಿಗಳು ಇಂದಿಗೂ ಅಜರಾಮರವಾಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅಪಾರ. ಅವರ ಅರ್ಥಪೂರ್ಣವಾದ ತತ್ವಾದರ್ಶ ವಿಚಾರ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡರವರು ಮಾತನಾಡುತ್ತ. ಸಮಾಜದಲ್ಲಿ ನಾವು ಏನಾದರೂ ಬದಲಾವಣೆ ಮಾಡಬೇಕು ಎಂಬ ಇಚ್ಛಾಶಕ್ತಿ ಇದ್ದರೆ ಶಿಕ್ಷಣದಿಂದ ಮಾತ್ರ ಸಾಧ್ಯ.…

Read More

ವಿಜಯಪುರ: ೨೦೨೨-೨೩ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಕ್ರಮ ನಡೆಯದಂತೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಮಾತನಾಡಿ, ಸನ್ ೨೦೨೨-೨೩ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸುವ ಉತ್ತಮ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ ಸರ್ಕಾರಿ ಅಧಿಕಾರಿಗಳ ಮತ್ತು ಶಾಸಕರ ದಿವ್ಯ ನಿರ್ಲಕ್ಷದಿಂದಾಗಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಇನ್ನು ಕೆಲವೊಂದು ಹಳ್ಳಿಗಳಲ್ಲಿ ಚಾಲನೆಗೊಳ್ಳುತ್ತಿದೆ. ಈ ಯೋಜನೆ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗುತ್ತಿದೆ. ಆದ್ದರಿಂದಾಗಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ದೇವರಹಿಪ್ಪರಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಬರಗಾಲದ ನಾಡಿಗೆ ಜೀವ ಜಲ ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿ…

Read More

ಕಲಕೇರಿ: ಸುಮಾರು ೫೦೦ ವರ್ಷಗಳ ಹೋರಾಟದಲ್ಲಿ ವಿಶ್ವಹಿಂದೂ ಪರಿಷತ್‌ನ ಕಾರ್ಯಕರ್ತರು, ಸಾಧುಸಂತರು ಸೇರಿದಂತೆ ಸುಮಾರು ೨ ಲಕ್ಷ ಸ್ವಯಂ ಸೇವಕರ ತ್ಯಾಗದ ಪ್ರತಿಫಲವಾಗಿ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನ ಆಗಮನಕ್ಕೆ ಶಬರಿಯಂತೆ ಕಾದಿದೆ ಈ ಧರೆ, ಮನೆ ಮನೆಗೂ ಮರ್ಯಾದಾ ಪುರುಷೋತ್ತಮನ ಆಗಮನದ ಆಮಂತ್ರಣ ತಲುಪುತ್ತಿದೆ, ಅದರ ನಿಮಿತ್ಯ ರಾಮಜನ್ಮಭೂಮಿ ಟ್ರಸ್ಟ್ ಕಳಿಸಿರುವ ಆರ್ಶಿವಾದದ ಮಂತ್ರಾಕ್ಷತೆಯನ್ನು ತಲುಪಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಳಿಕೋಟಿ ತಾಲೂಕಾ ಕಾರ್ಯಕಾರಣಿ ಸಂಗಮೇಶ ಪಾಲಕಿ ಅವರು ಮಾತನಾಡಿದರು.ಕಲಕೇರಿ ಗ್ರಾಮದ ಯಲ್ಲಾಲಿಂಗ ಮಹಾರಾಜ ಮಠದಿಂದ ವಿವಿಧ ವಾಧ್ಯಗಳೊಂದಿಗೆ ಕೇಸರಿ ಶಾಲುಗಳೊಂದಿಗೆ ನೂರಾರು ಸ್ವಯಂ ಸೇವಕರೊಂದಿಗೆ ಶ್ರೀರಾಮನ ರಥದ ಭವ್ಯ ಮೆರವಣಿಗೆ ಮುಖ್ಯ ಭಜಾರದ ಮೂಲಕ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಮನೆ ಮನೆಗೆ ಮಂತ್ರಾಕ್ಷತೆ ತಲುಪಿಸಲಾಯಿತು, ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮನ ವೇಷಭೂಷಣದಲ್ಲಿ ಮಕ್ಕಳು ಕಂಡರು,ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಪೀಠಾದಿಪತಿಗಳಾದ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆ ಮಠದ ಪೀಠಾದಿಪತಿ ಮಡಿವಾಳೇಶ್ವರ ಶಿವಾಚಾರ್ಯರು, ಮುಖಂಡರಾದ ಸಿದ್ದು…

Read More