ವಿಜಯಪುರ: ಆಂದ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ವಾಹನದ ಮೂಲಕ ಹಾಗೂ ಪಾದಯಾತ್ರೆ ಮೂಲಕ ಮಲ್ಲಯ್ಯನ ದರ್ಶನಕ್ಕೆ ಸಾಗುತ್ತಾರೆ. ಕೆಲವರು ಭೀಮನಕೊಳ್ಳದಿಂದ ಮಾತ್ರ ಬೆಟ್ಟಗುಡ್ಡದಲ್ಲಿ ಪಾದಯತ್ರೆ ಕೈಗೊಳ್ಳುತ್ತಾರೆ.
ಭೀಮನಕೊಳ್ಳದಿಂದ ಪಾದಯಾತ್ರೆ ಹೊರಟ ಭಕ್ತಾದಿಗಳಲ್ಲಿ ಎಂಬತ್ತರ ವಯಸ್ಸಿನ ಅಥಣಿ ತಾಲ್ಲೂಕಿನ ನಂದೇಶ್ವರ ಗ್ರಾಮದ ದೇವಕಿ ಮಹಾದೇವ ಮೆಲಗಡೆ ಎಂಬುವವಳು ಪಾದಯಾತ್ರೆ ಸಂದರ್ಭದಲ್ಲಿ ಸುಸ್ತಾಗಿ ನಡೆಯದೇ ಕುಳಿತಿದ್ದಳು. ಹಲವು ಭಕ್ತರ ಹಾಗೂ ಯುವಕರ ದಂಡು ಪಾದಯಾತ್ರೆ ಮೂಲಕ ಸಾಗುತ್ತಿದ್ದರು. ಅಜ್ಜಿಯನ್ನು ನೋಡಿದ ಸಿಂದಗಿ ಮೂಲದ ಯುವಕ ಸಂದೀಪ ವಡಗೋಗಿ ಅವಳನ್ನು ಬೆನ್ನು ಮೇಲೆ ಎತ್ತಿಕೊಂಡು ನಾಲ್ಕೈದು ಕೀ.ಮೀ ಸಾಗಿದನು ಎಂದು ಜೊತೆಯಲ್ಲಿದ್ದ ಅರಣ್ಯ ಅಧಿಕಾರಿ ಪ್ರವೀಣ ಹುನ್ನೂರ ಮಾಹಿತಿ ನೀಡಿದರು.
ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ಕಾಡಿನಲ್ಲಿ ಸಾಲು ಸಾಲಾಗಿ ಯುವಕರಿಂದ ಹಿಡಿದು ವಯಸ್ಸಾದವರು ಕೂಡಾ ಈ ಯುಗಾದಿ ಹಬ್ಬದ ಸಂದರ್ಭದಲ್ಲಿ ಪಾದಯಾತ್ರೆ ಮೂಲಕ ಸಾಗುವ ದೃಶ್ಯ ಕಾಣುತ್ತದೆ.
Subscribe to Updates
Get the latest creative news from FooBar about art, design and business.
Related Posts
Add A Comment

