ಅಫಜಲಪುರ: ೧೦ನೇ ತರಗತಿ ಪರೀಕ್ಷೆಗಳು ಆರಂಭಗೊಂಡಿದ್ದು ಕರ್ತವ್ಯ ಲೋಪದ ಅಡಿಯಲ್ಲಿ ಇಬ್ಬರು ಮುಖ್ಯ ಪರೀಕ್ಷಾ ಅಧಿಕ್ಷಕರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಬಿಇಒ ಹಾಜಿಮಲಂಗ ಇಂಡಿಕರ ತಿಳಿಸಿದ್ದಾರೆ.
ತಾಲೂಕಿನ ಕರ್ಜಗಿ ಹಾಗೂ ಮಣೂರ ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿ ಕ್ಯಾಮರಾಗಳು ಕಳ್ಳತನವಾಗಿದ್ದು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿ ಮಣೂರ ಪರೀಕ್ಷಾ ಮುಖ್ಯ ಅಧೀಕ್ಷಕ ಸುರೇಶ ಕೊರಚಗಾಂವ ಹಾಗೂ ಕರ್ಜಗಿ ಪರೀಕ್ಷಾ ಕೇಂದ್ರದ ಮುಖ್ಯ ಪರೀಕ್ಷಾ ಅಧೀಕ್ಷಕಿ ಸುನಂದಾ ಭಿಂಗೆ ಅವರನ್ನು ಅಮಾನತ್ತು ಮಾಡಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಕರ್ಜಗಿ ಹಾಗೂ ಮಣೂರ ಪರೀಕ್ಷಾ ಕೇಂದ್ರಗಳಲ್ಲಿ ತಲಾ ೧೦ ರಿಂದ ೧೨ ಸಿಸಿ ಕ್ಯಾಮರಾಗಳಿದ್ದವು ಅವುಗಳನ್ನೆಲ್ಲಾ ಒಡೆದು ಹಾಕಿದ್ದಲ್ಲದೆ ಸರ್ವಿಸ್ ವೈರ್, ಕೇಬಲ್ ವೈರ್ ಸಹಿತ ಕಿತ್ತು ಹಾಕಲಾಗಿದೆ. ಈ ಘಟನೆ ೨ ದಿನದ ಪರೀಕ್ಷೆಯ ಬಳಿಕ ನಡೆದಿದೆ ಎಂದ ಅವರು ಏ.೨ ರಂದು ಶಿರವಾಳ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ಅನಧಿಕೃತ ಪ್ರವೇಶ ಮಾಡಿದ ಆರೋಪದಡಿ ಪ್ರೌಢಶಾಲೆ ಶಿಕ್ಷಕ ಭೀಮಾಶಂಕರ ಅವರನ್ನು ಸಹ ಅಮಾನತ್ತು ಮಾಡಲಾಗಿದೆ. ಒಟ್ಟಾರೆ ಮೂರು ಜನ ಶಿಕ್ಷಕರನ್ನು ಅಮಾನತ್ತು ಮಾಡಲಾಗಿದ್ದು ಮುಂದಿನ ಪರೀಕ್ಷೆಗಳನ್ನು ನಾವು ಬಹಳ ಅಚ್ಚುಕಟ್ಟಾಗಿ ನಡೆಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment
