ಅಫಜಲಪುರ: ಲೋಕಸಭೆ ಚುನಾವಣೆ ಹಿನ್ನೆಲೆ ತಾಲೂಕಿನ ಎಲ್ಲಾ ಮತಗಟ್ಟೆಗಳನ್ನು ಸಜ್ಜುಗೊಳಿಸುವ ಕೆಲಸ ಮಾಡಿಕೊಳ್ಳಿ. ಮುಖ್ಯವಾಗಿ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಿ ಎಂದು ಪಿಡಿಒಗಳಿಗೆ ತಾ.ಪಂ ಇಒ ಚಂದ್ರಶೇಖರ ತಿಳಿಸಿದರು.
ಅವರು ತಾಲೂಕಿನ ಕರ್ಜಗಿ ಗ್ರಾ.ಪಂನ ಮತಗಟ್ಟೆಗೆ ಭೇಟಿ ನೀಡಿ ಮತಗಟ್ಟೆಗಳನ್ನು ಪರೀಶೀಲನೆ ನಡೆಸಿ ಮಾತನಾಡುತ್ತಾ ಮತಗಟ್ಟೆಗಳಲ್ಲಿ ಮೂಲಭೂತ ಸೌಯರ್ಕಗಳಾದ ಕುಡಿಯುವ ನೀರು, ರ‍್ಯಾಂಪ್, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಎಂದ ಅವರು ಹೆಚ್ಚಿನ ಮತದಾನವಾಗುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಮಹಾಂತೇಶ ಯಾಡಗಿ, ಶಿವಕುಮಾರ, ರಾಜಶೇಖರ ಕುಂಬಾರ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

