Author: editor.udayarashmi@gmail.com

ವಿಜಯಪುರ: ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನರಾಮ ರವರ ೧೧೭ನೇ ಜಯಂತಿಯನ್ನು ವಿಜಯಪುರ ನಗರದ ಗೋದಾವರಿ ಹೋಟೆಲ್ ಹತ್ತಿರ ಸರ್ಕಲ್‌ದಲ್ಲಿ ಎಸ್.ಬಿ.ಗ್ರೂಫ್ ವತಿಯಿಂದ ಆಚರಣೆ ಮಾಡಲಾಯಿತು.ಎಸ್.ಪಿ.ಗ್ರೂಫ್ ಅಧ್ಯಕ್ಷರಾದ ಶರಣು ಬ್ಯಾಳಿರವರು ಡಾ.ಬಾಬು ಜಗಜೀವನರಾಮ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತ ಡಾ. ಬಾಬು ಜಗಜೀವನ ರಾಮ್ ರವರು ಯಾವುದೇ ಕೆಲಸ ಮಾಡುವಾಗ ಅಲ್ಲಿ ಯಾವುದೇ ತರಹದ ದ್ವೇಷ ಅಸೂಹೆಗಳಿಗೆ ಎಡೆಮಾಡಿ ಕೊಡದೆ ಬುದ್ದಿವಂತಿಕೆಯಿAದ ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ಇವರು ತಾವು ಮಾಡಿದ ಕಾರ್ಯದ ಕುರಿತು ಎಂದಿಗೂ ಪ್ರಚಾರ ಪಡೆಯುತ್ತಿರಲಿಲ್ಲ. ಇದರೊಂದಿಗೆ ಅವರು ಮಾಡಿದ ಅನೇಕ “ಸಾಮಾಜಿಕ ಪರಿವರ್ತನೆ” ಯ ಕೆಲಸಗಳು ಇನ್ನುವರೆಗೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ. ಡಾ. ಬಾಬು ಜಗಜೀವನರಾಮ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲ ಜಾತಿ-ಮತ-ಪಂಥ ಎನ್ನದೇ ಜನರಿಗೆ ಹಲವಾರು ಜನಪರ ಯೋಜನೆಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಮಾದರ ಸಮುದಾಯದಲ್ಲಿ ಜನಿಸಿದರೂ ಸಹ ಎಂದಿಗೂ ಆ ಜಾತಿ ಈ ಜಾತಿ ಎಂಬ ಮೇಲು-ಕೀಳು ಎಂಬ…

Read More

ಢವಳಗಿ: ಸಮೀಪದ ಮಡಿಕೇಶ್ವರ ಗ್ರಾಮದಲ್ಲಿ ಶುಕ್ರವಾರದಂದು ಡಾ.ಬಾಬು ಜಗಜೀವನರಾಂ ರವರು ಜಯಂತಿಯನ್ನು ಸಮಾಜದ ಸಮುದಾಯ ಭವನದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಸಮಾಜದ ಯುವಕನಾದ ಹಾಗೂ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಕಾರ್ಯದರ್ಶಿಯಾದ ಪ್ರಭು ತಳಗೇರಿ ಅವರು ಮಾತನಾಡಿ, ಭಾರತೀಯ ಕೃಷಿಗೆ ಆಧುನಿಕ ಸ್ಪರ್ಶವನ್ನು ನೀಡಿದ, ಹಸಿರು ಕ್ರಾಂತಿಯ ಹರಿಕಾರ ಎಂದು ಖ್ಯಾತರಾದ ಮುತ್ಸದ್ಧಿ ಡಾ.ಬಾಬು ಜಗಜೀವನ್ ರಾಮ್.ಇವರು”ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ದೇಶದ ಆಹಾರ ಕೊರತೆ ನೀಗಿಸುವಲ್ಲಿ ರೈತರಿಗೆ ಹಸಿರು ಕ್ರಾಂತಿ ಮಂತ್ರ ಹೇಳಿಕೊಡುವ ಮೂಲಕ ಡಾ.ಬಾಬು ಜಗಜೀವನರಾಂ ದೇಶದ ಬಹುದೊಡ್ಡ ಶಕ್ತಿಯಾಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರುಶ್ಯತೆ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಪರಸಪ್ಪ ಪೂಜಾರಿ,ಮುತ್ತು ತಂಬೂರಿ, ಮುತ್ತುರಾಜ್ ತಂಬೂರಿ, ಪ್ರಕಾಶ್ ತಳಗೇರಿ, ರಾಹುಲ್,ಗಣೇಶ ಸೇರಿದಂತೆ ಗ್ರಾಮದ…

Read More

ವಿಜಯಪುರ: ವಿಜಯಪುರ ನಗರದ ಬೆಂಗಳೂರು ರೆಸ್ಟೋರೆಂಟ್ ಹಾಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಏಪ್ರಿಲ್ ೦೭ರಂದು ದೇಶ ಉಳಿಸಿ ಸಂಕಲ್ಪ ಯಾತ್ರೆ ನಡೆಯುತ್ತದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ ಪೂಜಾರ್ ಅವರು ಹೇಳಿದರು. ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಅಂಬೇಡ್ಕರ ಸರ್ಕಲ ವರೆಗೊ ರ‍್ಯಾಲಿ ನಡೆಯುವುದು. ಬರಲಿರುವ ಲೋಕಸಭಾ ಚುನಾವಣೆಗಳು ಮುಂದಿನ ೫ ವರ್ಷಗಳ ಕಾಲ ನಮ್ಮನ್ನು ಯಾರು ಆಳಬೇಕು ಎಂಬುದನ್ನು ತೀರ್ಮಾನಿಸುವ ಚುನಾವಣೆ ಮಾತ್ರವಾಗಿರದೆ, ಈ ದೇಶ ಪ್ರಜಾತಂತ್ರ ವ್ಯವಸ್ಥೆಯಡಿ ಇರಬೇಕಾ, ಸರ್ವಾಧಿಕಾರಕ್ಕೆ ಒಳಗಾಗಬೇಕಾ ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಡಿ ವಿ ಪಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಾಥ ಪೂಜಾರಿ ಹೇಳಿದರು. ದೇಶ ಅವನತಿಯ ಅಂಚಿಗೆ ಬಂದು ನಿಂತಿದೆ. ಈ ಅವನತಿಯಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು ಸಂಕಲ್ಪ ಜಾಥ ಪ್ರಾರಂಭವಾಗಿದೆ, ಈ ಯಾತ್ರೆಯ ವಿವರ, ಗುರಿ, ಉದ್ದೇಶಗಳ ಬಗ್ಗೆ ಅತಿ ಹೆಚ್ಚಿನ ಪ್ರಚಾರ ನೀಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.ಯಾತ್ರೆಯ ವಿವರ: ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ ೧ರಿಂದ ಚಾಲನೆ…

Read More

ವಿಜಯಪುರ: ನಗರದ ಪ್ರಗತಿ ಸಾಹಿತ್ಯ ವೇದಿಕೆಯ ಸಂಸ್ಥಾಪಕರು ಮತ್ತು ಸಾಹಿತಿಗಳಾದ ಪ್ರಕಾಶ ಜಹಾಗೀರದಾರ ಇವರ ಸಾಹಿತ್ಯ ಮತ್ತು ಸಂಘಟನೆಯನ್ನು ಗುರ್ತಿಸಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಸುವರ್ಣ ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ಈ ಪ್ರಶಸ್ತಿಯನ್ನು ಮುಂದಿನ ತಿಂಗಳು ದಾವಣಗೆರೆ ಯಲ್ಲಿ ಜರುಗುವ ಸಂಸ್ಥೆಯ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಲಾಕುಂಚ ಸಂಸ್ಥೆಯ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕೊಳವೆ ಬಾವಿಗೆ ಸಿಲುಕಿದ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಕಂದ ಸಾತ್ವಿಕ್ ಬದುಕುಳಿಯಲು ಶ್ರಮಿಸಿದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಗೂ ಹಾಗೂ ಜಿಲ್ಲಾಆಡಳಿತ ಮತ್ತು ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾಣಿ ಅವರಿಗೆ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಶ್ರಮವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಿಬ್ಬಂದಿ ನೌಕರರಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.ಕೃತಜ್ಞತೆ ಸಲ್ಲಿಸಿ ಮಾತನಾಡಿದ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಸತತ ಇಪ್ಪತ್ತು ಗಂಟೆಗಳ ಕಾಲ ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ಮಾಡಿ ಕಂದಮ್ಮನನ್ನು ಸುರಕ್ಷೀತವಾಗಿ ಬದುಕಿಸಿ ಹೆತ್ತವರಿಗೆ ಮಡಿಲಿಗೆ ಸೇರಿಸಿ ನಾಡಿತ ಕೊಟ್ಟಂತರ ಜನರ ಸಂತಸಕ್ಕೆ ಕಾರಣರಾಗಿದ್ದಿರಿ ಶ್ರಮಿಸಿದ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆಗಳು ಎಂದರು.ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೆರೂರ, ವಿಜಯಕುಮಾರ ಹತ್ತಿ,…

Read More

ತಿಕೋಟಾ: ಕಬ್ಬಿನ ತೋಟದಲ್ಲಿ ವಿದ್ಯುತ ತಂತಿ ಕಟ್ಟಾಗಿ ಬಿದ್ದು ಸ್ಪಾರ್ಕ ಸಂಭವಿಸಿ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಅಕ್ಕಪಕ್ಕದ ಸುಮಾರು ೩ ಎಕರೆ ಕಬ್ಬು ಸೇರಿದಂತೆ ವಿವಿಧ ಹಣ್ಣಿನ ಗಿಡ-ಮರಗಳು ಸಂಪೂರ್ಣ ಸುಟ್ಟು ಅಪಾರ ಪ್ರಮಾಣದ ನಷ್ಟವಾದ ಘಟನೆ ಶುಕ್ರವಾರದಂದು ತಿಕೊಟಾ ತಾಲೂಕಿನಲ್ಲಿ ನಡೆದಿದೆ. ತಿಕೋಟಾ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಿಕೋಟಾ ಹೋಬಳಿ ಸಿದ್ದಾಪೂರ (ಕೆ) ಭಾಗದಲ್ಲಿ ಬರುವ ಆನಂದ ಸಣ್ಣತಮ್ಮಪ್ಪ ವಿಜಾಪೂರ ಸರ್ವೆ ನಂಬರ ೩೬೫/೩ ಸುಮಾರು ೩ ಎಕರೆ ಕಬ್ಬು ಮತ್ತು ಅವಿನಾಶ ಈರಪ್ಪ ತೇಲಿ ೩೬೫/೧ ಇವರ ವಿವಿಧ ಹಣ್ಣಿನ ಮರಗಳು ಬೆಂಕಿಗೆ ಆಹುತಿಯಾಗಿವೆ. ತೋಟದಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಅಕ್ಕಪಕ್ಕದಲ್ಲಿದ ರೈತರು ನೋಡಿ ಮಾಲಿಕರಿಗೆ ಪೋನ ಮಾಡಿ ತಿಳಿಸಿದರು.ತೋಟಕ್ಕೆ ಮಾಲೀಕರಾದ ಆನಂದ ಹಾಗೂ ಅವಿನಾಶ ಅವರು ಬಂದು ನೋಡುವಷ್ಟರಲ್ಲಿ ಬೆಂಕಿ ಸಾಕಷ್ಟು ಕಡೆ ಹರಡಿ ಮುಗಿಲೆತ್ತರಕ್ಕೆ ಬೆಂಕಿ ಕಾಣುತ್ತಿತ್ತು ನೇರೆದಿರುವ ರೈತರು ಹಾಗೂ ಅಗ್ನಿ ಶಾಮಕ ದಳ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಹಾಗೂ ತಲಾಟಿಯವರು ಕೂಡಿ ಬೆಂಕಿಯನ್ನು…

Read More

ಅಫಜಲಪುರ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾವ್ ಅವರ 117ನೇ ಜನ್ಮದಿನದ ನಿಮಿತ್ಯವಾಗಿ ತಹಶೀಲ್ದಾರ್ ಸಂಜೀವ್ ಕುಮಾರ್ ದಾಸರ್ ಅವರು ಡಾ. ಬಾಬು ಜಗಜೀವನ್ ರಾವ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾಜದ ಮುಖಂಡರಾದ ಶ್ರೀಕಾಂತ ಮಾಶ್ಯಾಳಕರ್, ಸುನಿಲ ಕಟ್ಟಿಮನಿ, ಮಹಾಂತೇಶ್ ಬಡದಾಳ, ರವಿ ಗೌರ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Read More

ಸಿಂದಗಿ: ೧೫ವರ್ಷಗಳಿಂದ ಅಧಿಕಾರದಲ್ಲಿದ್ದ ಮಾಜಿ ಲೋಕಸಭಾ ಸದಸ್ಯ ಹಾಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿರವರ ಸಾಧನೆ ಜಿಲ್ಲೆಗೆ ಸೊನ್ನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರದೇಶ ಸಮಿತಿಯ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಪಟೇಲ್ ಬಿರಾದಾರ ಹೇಳಿದರು.ಪತ್ರಿಕಾ ಹೇಳಿಕೆ ನೀಡಿದ ಅವರು, ತಮ್ಮ ಪ್ರಚಾರದ ವೇದಿಕೆಗಳಲ್ಲಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ನಗರದಲ್ಲಿ ಪತ್ರಿಕ ವರದಿ ನೀಡಿರುವವರು ೨೫ಸಾವಿರ ಕೋಟಿ ಅನುದಾನ ದುರ್ಬಳಕೆಯಾಗಿದೆ. ಎಂಬ ಹೇಳಿಕೆ ಮತ್ತು ಗೋಲಗೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳರವರು ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಾಖಲೆ ಬಿಡುಗಡೆಗೊಳಿಸದೇ ಸುಖ ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಿಮಗೆ ದಲಿತರು, ಹಿಂದುಳಿದವರು, ಲಂಬಾಣ , ಜನಾಂಗದವರು ಅಲ್ಪಸಂಖ್ಯಾತರು, ನೆನಪಿಗೆ ಬರುವವರು ಅವರ ಮೀಸಲಾತಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದಾಗ ನಿಮ್ಮ ಬಾಯಿಗೆ ಏನಾಗಿತ್ತು? ರಸ್ತೆ ಡಾಂಬರೀಕರಣ, ಚಕ್ಕಡಿ ರಸ್ತೆಗಳ, ಹೆಸರಿನಲ್ಲಿ ಕೋಟ್ಯಾನು ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಇದ್ದಾಗ ಲೂಟಿ ಹೊಡೆದಿರುವ ನಿಮ್ಮ…

Read More

ಮುದ್ದೇಬಿಹಾಳ: ವಿಶೇಷ ಭಕ್ತರ ಆಮಂತ್ರದ ಮೇರೆಗೆ ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಗೆ ಏ.೭ ರಂದು ಸಂಜೆ ೬ಗಂಟೆಗೆ ರಾಮ ಜನ್ಮ ಭೂಮಿಯ ಅಯೋಧ್ಯೆ ಟ್ರಸ್ಟ್ ನ ಸದಸ್ಯರೂ ಆಗಿರುವ, ಉಡುಪಿಯ ಪೇಜಾವರ ಮಠದ ಶ್ರೀ ೧೦೦೮ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಗಮಿಸುತ್ತಿದ್ದು ಎರಡು ದಿನ ವಿಶೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಎ.೭ ರಂದು ಸಂಜೆ ೬ಕ್ಕೆ ಪುರ ಪ್ರಶೇಶಿಸುವ ಶ್ರೀಗಳಿಗೆ ಅದ್ಧೂರಿ ಸ್ವಾಗತ ನಂತರ ಅಮೃತೋಪದೇಶ, ಎ.೮ ರಂದು ಬೆಳಿಗ್ಗೆ ೮ ಕ್ಕೆ ಶ್ರೀ ರಾಘವೇಂದ್ರ ರಾಯರ ಕಲ್ಯಾಣ ಮಂಟಪದಲ್ಲಿ ಪಾದಪೂಜೆ, ೧೦:೩೦ ಕ್ಕೆ ಶ್ರೀಗಳಿಂದ ಶ್ರೀ ಚಿದಂಬರೇಶ್ವರ ದೇವಸ್ಥಾನ ವೀಕ್ಷಣೆ, ೧೧:೩೦ ಕ್ಕೆ ಸಂಸ್ಥಾನ ಪೂಜೆ, ೧:೩೦ ಕ್ಕೆ ತೀರ್ಥ ಪ್ರಸಾದ ಕಾರ್ಯಕ್ರಮಗಳು ಜರುಗಲಿವೆ. ಸದ್ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ಮತ್ತು ಶ್ರೀಗಳ ಪಾದಪೂಜೆ ಹಾಗೂ ಇತರೆ ಸೇವೆಯಲ್ಲಿ ಭಾಗವಹಿಸುವ ಆಸಕ್ತ ಭಕ್ತಾದಿಗಳು ಮೊದಲೇ ತಮ್ಮ ಹೆಸರನ್ನು ಶ್ರೀ ಮಠದ ಮ್ಯಾನೇಜರ ಬಳಿ ನೊಂದಾಯಿಸಿಕೊಳ್ಳುವಂತೆ ಸಮಸ್ತ…

Read More

ಅಂದು ಬೆಳಗಿನ ಸಮಯ 11 ಗಂಟೆಗೆ ಭಾರತದ ರಕ್ಷಣಾಮಂತ್ರಿಯ ಕಾರ್ಯಾಲಯದ ವಾರ ರೂಮಿನಲ್ಲಿ ವಿಶೇಷ ತುರ್ತು ಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿ ಭಾರತದ ರಕ್ಷಣಾ ಮಂತ್ರಿ ಡಾ ಬಾಬು ಜಗಜೀವನ್ ರಾಮ್ ಹಣಕಾಸು ಮಂತ್ರಿ ಚೌಹಾನ್ ಭಾರತದ ಸೇನಾ ದಂಡಾಧಿಕಾರಿಗಳಾದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಭಾಗವಹಿಸಿದರು ಗಂಭೀರವಾಗಿದ್ದ ಸಭೆಯಲ್ಲಿ ರಕ್ಷಣಾ ಮಂತ್ರಿಯವರು ಪ್ರಧಾನಿಯವರಿಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ಕಲಹ, ಅಲ್ಲಿ ಪಶ್ಚಿಮ ಪಾಕಿಸ್ತಾನದವರು ನಡುಸುತ್ತಿರುವ ಜನರ ನರಮೇಧ ಅದರಿಂದಾಗಿ ಪ್ರತಿದಿನ ಸಾವಿರಾರು ಸಂಖ್ಯೆ ಯ ನಿರಾಶ್ರಿತರು ಭಾರತಕ್ಕೆ ವಲಸೆ ಬರುತ್ತಿರುವುದು ಆ ನಿರಾಶ್ರೀತರಿಗೆ ವಸತಿ ಸೌಲಭ್ಯ ಕಲ್ಪಿಸಲು ಭಾರತ ಸರ್ಕಾರ 300 ಕೋಟಿ ಖರ್ಚು ಮಾಡಲಾಗಿದ್ದು ಪಾಕಿಸ್ತಾನದ ಪ್ರಾಯೋಜಿತ ಮೂಲಭೂತ ವಾದಿಗಳಾದ ರಜಾಕರು, ಆಲ್ ಬ್ರದರ್ಸ್ ಆಲ್ ಶಿಪ್ಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಕಂಡ ಕಂಡಲ್ಲಿ ಕಡಿದು ಹಾಕುತ್ತಿರುವುದು ಮತ್ತು ಹೆಣ್ಣು ಮಕ್ಕಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತಿದೆ. ಪೂರ್ವ ಪಾಕಿಸ್ತಾನದಲ್ಲಿದ್ದ…

Read More