Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಾಂಗ್ಲಾದೇಶ ನಿರ್ಮಾತೃ ಡಾ ಬಾಬು ಜಗಜೀವನ್ ರಾಮ್ ಸಾಯಬಣ್ಣ ಮಾದರ (ಸಲಾದಳ್ಳಿ)
(ರಾಜ್ಯ ) ಜಿಲ್ಲೆ

ಬಾಂಗ್ಲಾದೇಶ ನಿರ್ಮಾತೃ ಡಾ ಬಾಬು ಜಗಜೀವನ್ ರಾಮ್ ಸಾಯಬಣ್ಣ ಮಾದರ (ಸಲಾದಳ್ಳಿ)

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅಂದು ಬೆಳಗಿನ ಸಮಯ 11 ಗಂಟೆಗೆ ಭಾರತದ ರಕ್ಷಣಾಮಂತ್ರಿಯ ಕಾರ್ಯಾಲಯದ ವಾರ ರೂಮಿನಲ್ಲಿ ವಿಶೇಷ ತುರ್ತು ಸಭೆಯನ್ನು ಕರೆಯಲಾಗಿತ್ತು. ಆ ಸಭೆಯಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿ ಭಾರತದ ರಕ್ಷಣಾ ಮಂತ್ರಿ ಡಾ ಬಾಬು ಜಗಜೀವನ್ ರಾಮ್ ಹಣಕಾಸು ಮಂತ್ರಿ ಚೌಹಾನ್ ಭಾರತದ ಸೇನಾ ದಂಡಾಧಿಕಾರಿಗಳಾದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಭಾಗವಹಿಸಿದರು ಗಂಭೀರವಾಗಿದ್ದ ಸಭೆಯಲ್ಲಿ ರಕ್ಷಣಾ ಮಂತ್ರಿಯವರು ಪ್ರಧಾನಿಯವರಿಗೆ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ಕಲಹ, ಅಲ್ಲಿ ಪಶ್ಚಿಮ ಪಾಕಿಸ್ತಾನದವರು ನಡುಸುತ್ತಿರುವ ಜನರ ನರಮೇಧ ಅದರಿಂದಾಗಿ ಪ್ರತಿದಿನ ಸಾವಿರಾರು ಸಂಖ್ಯೆ ಯ ನಿರಾಶ್ರಿತರು ಭಾರತಕ್ಕೆ ವಲಸೆ ಬರುತ್ತಿರುವುದು ಆ ನಿರಾಶ್ರೀತರಿಗೆ ವಸತಿ ಸೌಲಭ್ಯ ಕಲ್ಪಿಸಲು ಭಾರತ ಸರ್ಕಾರ 300 ಕೋಟಿ ಖರ್ಚು ಮಾಡಲಾಗಿದ್ದು ಪಾಕಿಸ್ತಾನದ ಪ್ರಾಯೋಜಿತ ಮೂಲಭೂತ ವಾದಿಗಳಾದ ರಜಾಕರು, ಆಲ್ ಬ್ರದರ್ಸ್ ಆಲ್ ಶಿಪ್ಸ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಪೂರ್ವ ಪಾಕಿಸ್ತಾನದಲ್ಲಿ ಹಿಂದೂಗಳನ್ನು ಕಂಡ ಕಂಡಲ್ಲಿ ಕಡಿದು ಹಾಕುತ್ತಿರುವುದು ಮತ್ತು ಹೆಣ್ಣು ಮಕ್ಕಳನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗುತ್ತಿದೆ. ಪೂರ್ವ ಪಾಕಿಸ್ತಾನದಲ್ಲಿದ್ದ ಏಕೈಕ ಸಭಾಮಂದಿರವಾದ ಜಗನ್ನಾಥ್ ಹಾಲನ್ನು ಮೂಲಭೂತವಾದಿಗಳು ಆಕ್ರಮಣ ಮಾಡಿ ಅಲ್ಲಿದ್ದ ಹಿಂದೂಗಳನ್ನು ಶಿರಚೇದನ ಮಾಡುತ್ತಿರುವುದನ್ನು ವಿವರಿಸಿದರು. ಮತ್ತು ಪಾಕಿಸ್ತಾನ ಸೇನೆಯು ಭಾರತದ ಗಡಿ ಯುದ್ದಕ್ಕೂ ತನ್ನ ಸೈನ್ಯವನ್ನು ನಿಯೋಜನೆ ಮಾಡಿರುವುದನ್ನು ಅದರಿಂದ ಭಾರತಕ್ಕೆ ಬೆದರಿಕೆ ಇರುವುದನ್ನು ಸಭೆಗೆ ವಿವರಿಸಿ ಹೇಳಿದರು. ಆಗ ಪ್ರಧಾನಮಂತ್ರಿಯವರು ನಾವು ಈಗ ಮಧ್ಯಪ್ರವೇಶ ಮಾಡಿದರೆ ಬೇರೆ ದೇಶದ ಸಮಸ್ಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ವಿಶ್ವಸಂಸ್ಥೆಯು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತದೆ ಮತ್ತು ಪಾಕಿಸ್ತಾನಕ್ಕೆ ಅದರ ಮಿತ್ರ ರಾಷ್ಟ್ರ ಅಮೇರಿಕಾ ಬೆಂಬಲವಿದೆ ಇದರಿಂದ ನಮಗೇನು ಮಾಡಲಾಗದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಆಗ ಡಾ ಬಾಬು ಜಗಜೀವನ್ ರಾಮ ಅವರು ನಾವು ಏನು ಮಾಡದೆ ಸುಮ್ಮನೆ ಕುಳಿತರೆ ದೇಶದ ಭದ್ರತೆಗೆ ಅಪಾಯ ಉಂಟಾಗುತ್ತದೆ ಅದಕ್ಕಾಗಿ ನಾವು ಈಗಿನಿಂದಲೇ ಸಿದ್ದರಾಗಬೇಕು ಎಂದರು. ಇದಕ್ಕೆ ಮಾಣಿಕ್ಯ ಅವರು ಯುದ್ಧ ಮಾಡಲು ಈಗ ನಮಗೆ ಸಾಧ್ಯವಿಲ್ಲ ಯುದ್ಧ ಗೆಲ್ಲಬೇಕಾದರೆ ಸಮಯ ಬೇಕಾಗುತ್ತದೆ ಎಂದು ನೇರವಾಗಿ ಸಭೆಗೆ ತಿಳಿಸಿದರು. ಆಗ ಪ್ರಧಾನಮಂತ್ರಿಯವರು ಈಗ ಸಮಯಕ್ಕೆ ಕಾಯುತ್ತಾ ಕುಳಿತರೆ ದೇಶದ ಕ್ಕೆ ಆತಂಕವಾದಿಗಳ ಬೆದರಿಕೆ ಇದೆ ಅದಕ್ಕಾಗಿ ಏನಾದರೂ ಒಂದು ವ್ಯವಸ್ಥೆ ಮಾಡಬೇಕು ಎಂದರು ಆಗ ರಕ್ಷಣಾ ಮಂತ್ರಿಗಳಾದ ಬಾಬೂಜಿಯವರು ಆ ಸಭೆಗೆ ಒಂದು ವಿಶೇಷವಾದ ಕಾರ್ಯತಂತ್ರವನ್ನು ವಿವರಿಸಿದ್ದರು. ಅದನ್ನು ಕೇಳಿದ ಸಭೆಯಲ್ಲಿದ್ದ ಪ್ರಧಾನಿಯವರಿಂದ ಹಿಡಿದು ಇತರ ಎಲ್ಲರೂ ಮಂತ್ರಮುಗ್ಧರಾಧರು ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಅವರ ಮುಖದಲ್ಲಿ ಗೆಲುವಿನ ಕಳೆ ಮೂಡಿತು.
ಆ ಕಾರ್ಯತಂತ್ರವೂ ಏನೆಂದರೆ ಪಾಕಿಸ್ತಾನ ದೇಶದ ದಬ್ಬಾಳಿಕೆ ವಿರುದ್ಧ ಬಾಂಗ್ಲಾದೇಶದ ಜನರು ತಮ್ಮದೇ ಆದ ಮುಕ್ತಿ ಬಾಹಿನಿ ಎಂಬ ಪ್ರತಿರೋಧ ಪಡೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಆದರೆ, ಅವರಿಗೆ ಸೂಕ್ತವಾದ ತರಬೇತಿ ಮತ್ತು ಶಸ್ತ್ರಾಸ್ತ್ರಗಳು ಹಾಗೂ ಮಾರ್ಗದರ್ಶನವಿಲ್ಲ ಪಾಕಿಸ್ತಾನ ಸೈನ್ಯವು ಅವರನ್ನು ಕಂಡ ಕಂಡಲ್ಲಿ ಗುಂಡಿಟ್ಟು ಕೊಲ್ಲುತ್ತಿದೆ ಅವರಿಗೆ ನಾವು ನಮ್ಮಸೇನೆಯನ್ನು ಸಿದ್ಧಮಾಡಿಕೊಳ್ಳುವವರೆಗೂ ಗೇರಿಲ್ಲ ಮಾದರಿಯ ತರಬೇತಿಯನ್ನು ಕೊಡುವುದು ಶಸ್ತ್ರಾಸ್ತ್ರವನ್ನು ಪೂರೈಕೆ ಮಾಡುವುದು ಅವಶ್ಯವಾಗಿದೆ ಎಂದು ಹೇಳಿದರು. ಭಾರತದ ಗಡಿಯಲ್ಲಿ ಅವರಿಗೆ ಪ್ರತಿ ವಿಭಾಗ ಮಾಡಿ ಒಂದು ವಿಭಾಗಕ್ಕೆ ಸಾವಿರ ಜನರಿಗೆ ತರಬೇತಿ ನೀಡುವುದು ಆ ತರಬೇತಿಯ ಅವಧಿ 15 ದಿನಗಳಾಗಿರಲಿ ನಮ್ಮ ಸೈನ್ಯವೇ ಅವರಿಗೆ ತರಬೇತಿಯ ಏರ್ಪಾಡು ಮಾಡಬೇಕು ಒಂದು ಲಕ್ಷ ಜನರಿಗೆ ತರಬೇತಿ ವ್ಯವಸ್ಥೆಯನ್ನು ಮಾಡೋಣ ಎಂದು ಹೇಳಿದರು. ಇದಕ್ಕೆ ಮಾಣಿಕ್ ಶಾ ಅವರು ಒಪ್ಪಿಗೆ ನೀಡಿದರು. ಈಗ ಮಾನ್ಸೂನ್ ಸಮಯವಾಗಿದ್ದರಿಂದ ನಮ್ಮ ಸೇನೆ ನೇರವಾಗಿ ಯುದ್ಧಕ್ಕೆ ಕಳಿಸುವುದು ಬೇಡ ಅಲ್ಲಿಯ ಪಡೆಗಳಿಗೆ ಸಿದ್ಧ ಮಾಡಲು ಸಕಲ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಶೀಘ್ರದಲ್ಲೇ ಪ್ರಾರಂಭ ಮಾಡೋಣ ಎಂದರು.
ಪಾಕಿಸ್ತಾನ ಜನರಲ್ ಯಹ್ಯಾಖಾನ್ ರವರು ಸ್ಥಳೀಯ ಬಾಂಗ್ಲಾದೇಶದ ವಿಮೋಚನಕಾರರ ವಿರುದ್ಧ 25 ಮಾರ್ಚ್ 1971ರಲ್ಲಿ ‘ಆಪರೇಷನ್ ಸರ್ಚ್ ಲೈಟ್’ ಎಂಬ ಕಾರಾಚರಣೆಗೆ ಆದೇಶ ನೀಡಿದರು ಇದರಿಂದಾಗಿ ಬುದ್ಧಿಜೀವಿಗಳು ಹೋರಾಟಗಾರರು ಮಹಿಳೆಯರು ಎನ್ನದೆ ಅವರನ್ನು ಹುಡುಕಿ ಹುಡುಕಿ ಕೊಲ್ಲುವುದೇ ಈ ಕಾರ್ಯಾಚರಣೆಯ ಉದ್ದೇಶವಾಗಿತ್ತು.
ಪಶ್ಚಿಮ ಪಾಕಿಸ್ತಾನದಿಂದ ಅಂದು ಮೂರು ಸಾವಿರ ಜನ ಸೈನಿಕರು ಯುದ್ಧ ಟ್ಯಾಂಕರ್ ನೊಂದಿಗೆ ಅಮೆರಿಕದ ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ರಾಜಸ್ಥಾನದ ಮರುಭೂಮಿಯನ್ನು ದಾಟಿ ಭಾರತದ ಭೂ ನೆಲೆಗಳತ್ತ ಹೊರಟಿದ್ದರು. ಆ ಸೇನಯು ಹೊರಟದ್ದು ರಾತ್ರಿಯ ಸಮಯದಲ್ಲಿ ಭಾರಿ ಮೈ ಕೊರೆಯುವ ಚಳಿಯಲ್ಲಿ ಅಲ್ಲಿ ಭಾರತೀಯ ಒಂದೇ ಬಟಾಲಿಯನ್ ಕಾರ್ಯನಿರ್ವಹಿಸುತ್ತಿತ್ತು. ಆ ಬಟಾಲಿಯನದಲ್ಲಿ ಕೇವಲ ನಮ್ಮ ಸೈನಿಕರು 130 ಜನ ಮಾತ್ರ. ಪಾಕಿಸ್ತಾನ ಸೇನೆ ನುಗ್ಗುತ್ತಿರುವುದನ್ನು ಗಮನಿಸಿದ ಭಾರತೀಯ ಸೈನ್ಯದ ಕಮಾಂಡರ್ ಕುಲದೀಪ್ ಸಿಂಗ್ ಚೌಡಾಪೂರಿ ಅವರು ಮೊದಲು ರಕ್ಷಣಾ ಕಾರ್ಯಾಲಯಕ್ಕೆ ಸುದ್ದಿ ಮುಟ್ಟಿಸಿದರು. ಬಾಬು ಜಗಜೀವನ್ ರಾಮ ಅವರು ಆ ಸಮಯದಲ್ಲಿ ತಮ್ಮ ಮನೆಗೆ ಹೋಗದೆ ರಕ್ಷಣಾ ಕಾರ್ಯಾಲಯದ ವಾರ ರೂಮ್ ನಲ್ಲಿ ಕುಳಿತು ಸೈನ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಈ ಸುದ್ದಿ ಬಂದ ನಂತರ ಅವರು ನಮ್ಮ ವಾಯುಪಡೆಯು ರಾತ್ರಿ ಸಮಯದಲ್ಲಿ ಕಾರ್ಯನಿರ್ವಹಿಸುವುದಿಲ್ಲ ರಾತ್ರಿ ಕಳೆಯುವವರೆಗೂ ಆ ಪಾಕಿಗಳನ್ನು ತಡೆಯಬೇಕು ಮರಳುಗಾಡಿನಲ್ಲಿ ಗೆರಿಲ್ಲಾ ಯುದ್ಧಕ್ಕೆ ಸಿದ್ದರಾಗಿರಿ ಅವರಿಗೆ ಹೆಚ್ಚು ಸೈನ್ಯ್ ಇದ್ದಾರೆ ಎಂಬ ಭ್ರಮೆ ಬರುವಂತೆ ಎಲ್ಲಾ ಕಡೆ ಮೊಬ್ಬತ್ತಿ ಬೆಳಕುಹಚ್ಚಿರಿ. ಗೆರಿಲ್ಲ ಯುದ್ಧವನ್ನು ಪ್ರಾರಂಭಿಸಿ ಎಂದು ಆದೇಶಿಸಿದರು. ಮೂರು ಸಾವಿರ ಸೈನ್ಯದ ವಿರುದ್ಧ 130 ಭಾರತೀಯ ಸೈನಿಕರು ಬೆಳಗಿನವರೆಗೂ ಆ ಸೈನ್ಯವನ್ನು ತಡೆದರು.ಭಾರತೀಯ ಸೈನ್ಯದ ಗೇರಿಲ್ಲ ಯುದ್ಧದ ತಂತ್ರಕ್ಕೆ ಪಾಕಿಸ್ತಾನದ ಸೈನಿಕರು ಕಕ್ಕಾಬಿಕ್ಕಿಯಾದರು. ಯಾವ ಕಡೆಯಿಂದ ದಾಳಿ ಆಗುತ್ತಿದೆ ಎಂಬುದೇ ಅವರಿಗೆ ತಿಳಿಯದಾ ಗಿತ್ತು. ಚುಮುಚುಮು ಬೆಳಕಿನೊಂದಿಗೆ ಭಾರತೀಯ ಸೈನ್ಯ ಆಗಸದಲ್ಲಿ ಲಗ್ಗೆ ಇಟ್ಟಿತು ವಾಯು ದಾಳಿಯ ಹೊಡೆತಕ್ಕೆ ಪಾಕಿಸ್ತಾನ್ ಸೇನೆ ದಿಕ್ಕಪಲಾಗಿ ಓಡಿತು. ಬೆಳಗಿನ ಸಮಯದಲ್ಲಿ ಬಾಬೂಜಿಯವರು ಸೈನ್ಯದ ಜೊತೆ ಇದ್ದುದ್ದು ವಿಶೇಷವಾಗಿತ್ತು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುತ್ತಾ ಕಾರ್ಯತಂತ್ರ ಹೆಣೆಯುತ್ತ 130 ಸೈನಿಕರು ಪಾಕಿಸ್ತಾನದ ಮೂರು ಸಾವಿರ ಸೈನಿಕರನ್ನು ಉಡಾಯಿಸಿದರು. ಬಾಪೂಜಿಯವರ ಈ ಕಾರ್ಯತಂತ್ರ ಅವರ ಕಾರ್ಯಧ್ಯಕ್ಷತೆಗೆ ಸಾಕ್ಷಿಯಾಗಿತ್ತು.
ಭಾರತವು ನೇರವಾಗಿ ಬಾಂಗ್ಲಾದೇಶದ ವಿಮೋಚನೆಗೆ ಅದರ ನೆಲಕ್ಕೆ 3 ಡಿಸೆಂಬರ್ 1971 ರಂದು ಪ್ರವೇಶಿಸಿತ್ತು ಪಾಕಿಸ್ತಾನದ ಸೈನಿಕರು ಭಾರತೀಯ ಸೈನ್ಯದ ಹೊಡೆತಕ್ಕೆ ನಲಿಗಿ ಹೋಗಿ 16 ಡಿಸೆಂಬರ್ 1971 ರಂದು ಭಾರತೀಯ ಸೈನ್ಯಕ್ಕೆ ಶರಣಾಗತರಾದರು. ಡಾ. ಬಾಬು ಜಗಜೀವನರಾಮ್ ಅವರ ದಿಟ್ಟ ಕಾರಾಚರಣೆಯ ವಿಧಾನ ದಿಂದಾಗಿ ಈ ಯುದ್ಧವು ಎರಡನೆಯ ವಿಶ್ವಯುದ್ಧದ ನಂತರ ಸಶಸ್ತ್ರ ಪಡಯು ಅತಿ ದೊಡ್ಡ ಶರಣಾಗತಿ ಇದೇ ಮೊದಲು. ಭಾರತದ ಶಕ್ತಿ ಸಾಮರ್ಥ್ಯಕ್ಕೆ ವಿಶ್ವವೇ ಬೆರಗುಗಣ್ಣುಗಳಿಂದ ನೋಡಿತು ಪಾಕಿಸ್ತಾನದ ಮಿತ್ರ ರಾಷ್ಟ್ರವಾದ ಅಮೆರಿಕವು ಮಾರಿಗೆ ಮುಸುಕು ಹಾಕಿಕೊಂಡಿತು ಭಾರತದ ಸೈನ್ಯದ ಶಕ್ತಿ ಮತ್ತು ಬಲವನ್ನು ಜಗತ್ತಿಗೆ ಬಾಬು ಜಿ ಅವರು ಪರಿಚಯಿಸಿದರು.
ಇಂಥ ಮಹಾನ್ ನಾಯಕನು ಐದನೇ ಏಪ್ರಿಲ್ ನಂದು ಬಿಹಾರದ ಕಡುಬಡತನದ ದಲಿತ ಕುಟುಂಬದಲ್ಲಿ ಜನಿಸಿದವರು ಮದನ್ ಮೋಹನ್ ಮಾಳಿವಿ ಅವರ ಮಾರ್ಗದರ್ಶನದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿ ದೇಶದ ಉನ್ನತಿಗಾಗಿ ಶ್ರಮಿಸಿದರು ದುರ್ದೈವ ಬಾಂಗ್ಲಾದೇಶದ ರಚನೆಯಲ್ಲಿ ಮುಂಚಣಿಯಿದ್ದ ಇವರನ್ನು ಇತಿಹಾಸಕಾರರು ನಿರ್ಲಕ್ಷ ಮಾಡಿದ್ದು ಖೇದಕರ ಸಂಗತಿ ಸಣ್ಣಪುಟ್ಟ ರಾಜಕಾರಣಿಗಳಿಗೆ ಭಾರತ ರತ್ನ ದಂತಹ ಉನ್ನತ ಪ್ರಶಸ್ತಿ ಕೊಡುತ್ತಿರುವ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಾರತಕ್ಕೆ ಆಹಾರ ಭದ್ರತೆಯನ್ನು ಒದಗಿಸಿಕೊಟ್ಟ ಧೀಮಂತ ದೇಶದ ಸೈನ್ಯ ಬಲವನ್ನು ಹೆಚ್ಚಿಸಿದ ನಾಯಕ ದೀನ ದಲಿತ ಬಡವರ ಬಂಧು ಬಾಬು ಜಗಜೀವನರಾಮ್ ಅವರಿಗೆ ಅವರ ಜಯಂತಿಯಂದು ಶುಭಕಾಮನೆಗಳು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್

ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ

ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶ್ವಶಾಂತಿಗಾಗಿ 14ನೇ ವೇದಾಂತ ಪರಿಷತ್
    In (ರಾಜ್ಯ ) ಜಿಲ್ಲೆ
  • ಅಡಿಹುಡಿ ಸರ್ಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ
    In (ರಾಜ್ಯ ) ಜಿಲ್ಲೆ
  • ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ಕೊಲ್ಹಾರ ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಭೇಟಿ : ಪರಿಶೀಲನೆ
    In (ರಾಜ್ಯ ) ಜಿಲ್ಲೆ
  • ಉತ್ತಮ ನಿರ್ಧಾರ ಯಶಸ್ಸಿನ ಕೀಲಿ ಕೈ
    In ವಿಶೇಷ ಲೇಖನ
  • ಸರಗೂರು ತಾಲೂಕಿನಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ
    In (ರಾಜ್ಯ ) ಜಿಲ್ಲೆ
  • ಕೇವಲ ಅಂಕ ಗಳಿಕೆ ಶಿಕ್ಷಣವಲ್ಲˌ ತಹಶೀಲ್ದಾರ ಅನೀಲ ಬಡಿಗೇರ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಬ್ಯಾಂಕುಗಳಿಂದ ಆರ್ಥಿಕ ಸಾಕ್ಷರತೆ ಸಪ್ತಾಹ
    In (ರಾಜ್ಯ ) ಜಿಲ್ಲೆ
  • ಶನಿವಾರ ವಿದ್ಯುತ್ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಆಂಧ್ರದಲ್ಲಿ ಕೆ.ಜಿ ತಂಬಾಕಿಗೆ 400, ಕರ್ನಾಟಕದಲ್ಲಿ ಕೇವಲ 292 ರೂ.ಹೆಚ್ ಡಿ ಕೋಟೆಯಲ್ಲಿ ಹರಾಜು ಮಾರುಕಟ್ಟೆ ಬಂದ್, ರೈತರ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆಉದಯರಶ್ಮಿ ದಿನಪತ್ರಿಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.