ವಿಜಯಪುರ: ಕೊಳವೆ ಬಾವಿಗೆ ಸಿಲುಕಿದ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಕಂದ ಸಾತ್ವಿಕ್ ಬದುಕುಳಿಯಲು ಶ್ರಮಿಸಿದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳಿಗೂ ಹಾಗೂ ಜಿಲ್ಲಾಆಡಳಿತ ಮತ್ತು ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾಣಿ ಅವರಿಗೆ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಶ್ರಮವಹಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಿಬ್ಬಂದಿ ನೌಕರರಿಗೆ ಜಿಲ್ಲೆಯ ಸಮಸ್ತ ನೌಕರರ ಪರವಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.
ಕೃತಜ್ಞತೆ ಸಲ್ಲಿಸಿ ಮಾತನಾಡಿದ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಸತತ ಇಪ್ಪತ್ತು ಗಂಟೆಗಳ ಕಾಲ ಹಗಲು ರಾತ್ರಿ ಎನ್ನದೇ ಕಾರ್ಯಾಚರಣೆ ಮಾಡಿ ಕಂದಮ್ಮನನ್ನು ಸುರಕ್ಷೀತವಾಗಿ ಬದುಕಿಸಿ ಹೆತ್ತವರಿಗೆ ಮಡಿಲಿಗೆ ಸೇರಿಸಿ ನಾಡಿತ ಕೊಟ್ಟಂತರ ಜನರ ಸಂತಸಕ್ಕೆ ಕಾರಣರಾಗಿದ್ದಿರಿ ಶ್ರಮಿಸಿದ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೃತಜ್ಞತೆಗಳು ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೆರೂರ, ವಿಜಯಕುಮಾರ ಹತ್ತಿ, ಗಂಗಾಧರ ಜೇವೂರ, ಎಚ್.ಎಮ್.ಪಡಶೆಟ್ಟಿ, ಜಗದೀಶ ಬೋಳಸೂರ, ಚನ್ನಯ್ಯ ಮಠಪತಿ, ಬಸೀರ್ ನದಾಪ್, ಸಿ.ಕೆ.ಭಜಂತ್ರಿ, ಬಿ.ಎಸ್.ಮಜ್ಜಗಿ, ಎ.ಎಸ್.ಸೊನ್ನಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

