ಮುದ್ದೇಬಿಹಾಳ: ವಿಶೇಷ ಭಕ್ತರ ಆಮಂತ್ರದ ಮೇರೆಗೆ ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿಗೆ ಏ.೭ ರಂದು ಸಂಜೆ ೬ಗಂಟೆಗೆ ರಾಮ ಜನ್ಮ ಭೂಮಿಯ ಅಯೋಧ್ಯೆ ಟ್ರಸ್ಟ್ ನ ಸದಸ್ಯರೂ ಆಗಿರುವ, ಉಡುಪಿಯ ಪೇಜಾವರ ಮಠದ ಶ್ರೀ ೧೦೦೮ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಗಮಿಸುತ್ತಿದ್ದು ಎರಡು ದಿನ ವಿಶೇಶ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎ.೭ ರಂದು ಸಂಜೆ ೬ಕ್ಕೆ ಪುರ ಪ್ರಶೇಶಿಸುವ ಶ್ರೀಗಳಿಗೆ ಅದ್ಧೂರಿ ಸ್ವಾಗತ ನಂತರ ಅಮೃತೋಪದೇಶ, ಎ.೮ ರಂದು ಬೆಳಿಗ್ಗೆ ೮ ಕ್ಕೆ ಶ್ರೀ ರಾಘವೇಂದ್ರ ರಾಯರ ಕಲ್ಯಾಣ ಮಂಟಪದಲ್ಲಿ ಪಾದಪೂಜೆ, ೧೦:೩೦ ಕ್ಕೆ ಶ್ರೀಗಳಿಂದ ಶ್ರೀ ಚಿದಂಬರೇಶ್ವರ ದೇವಸ್ಥಾನ ವೀಕ್ಷಣೆ, ೧೧:೩೦ ಕ್ಕೆ ಸಂಸ್ಥಾನ ಪೂಜೆ, ೧:೩೦ ಕ್ಕೆ ತೀರ್ಥ ಪ್ರಸಾದ ಕಾರ್ಯಕ್ರಮಗಳು ಜರುಗಲಿವೆ. ಸದ್ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ಮತ್ತು ಶ್ರೀಗಳ ಪಾದಪೂಜೆ ಹಾಗೂ ಇತರೆ ಸೇವೆಯಲ್ಲಿ ಭಾಗವಹಿಸುವ ಆಸಕ್ತ ಭಕ್ತಾದಿಗಳು ಮೊದಲೇ ತಮ್ಮ ಹೆಸರನ್ನು ಶ್ರೀ ಮಠದ ಮ್ಯಾನೇಜರ ಬಳಿ ನೊಂದಾಯಿಸಿಕೊಳ್ಳುವಂತೆ ಸಮಸ್ತ ವಿಪ್ರ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
