ವಿಜಯಪುರ: ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನರಾಮ ರವರ ೧೧೭ನೇ ಜಯಂತಿಯನ್ನು ವಿಜಯಪುರ ನಗರದ ಗೋದಾವರಿ ಹೋಟೆಲ್ ಹತ್ತಿರ ಸರ್ಕಲ್‌ದಲ್ಲಿ ಎಸ್.ಬಿ.ಗ್ರೂಫ್ ವತಿಯಿಂದ ಆಚರಣೆ ಮಾಡಲಾಯಿತು.
ಎಸ್.ಪಿ.ಗ್ರೂಫ್ ಅಧ್ಯಕ್ಷರಾದ ಶರಣು ಬ್ಯಾಳಿರವರು ಡಾ.ಬಾಬು ಜಗಜೀವನರಾಮ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತ ಡಾ. ಬಾಬು ಜಗಜೀವನ ರಾಮ್ ರವರು ಯಾವುದೇ ಕೆಲಸ ಮಾಡುವಾಗ ಅಲ್ಲಿ ಯಾವುದೇ ತರಹದ ದ್ವೇಷ ಅಸೂಹೆಗಳಿಗೆ ಎಡೆಮಾಡಿ ಕೊಡದೆ ಬುದ್ದಿವಂತಿಕೆಯಿAದ ಆಗಬೇಕಾದ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ಇವರು ತಾವು ಮಾಡಿದ ಕಾರ್ಯದ ಕುರಿತು ಎಂದಿಗೂ ಪ್ರಚಾರ ಪಡೆಯುತ್ತಿರಲಿಲ್ಲ. ಇದರೊಂದಿಗೆ ಅವರು ಮಾಡಿದ ಅನೇಕ “ಸಾಮಾಜಿಕ ಪರಿವರ್ತನೆ” ಯ ಕೆಲಸಗಳು ಇನ್ನುವರೆಗೆ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿವೆ. ಡಾ. ಬಾಬು ಜಗಜೀವನರಾಮ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲ ಜಾತಿ-ಮತ-ಪಂಥ ಎನ್ನದೇ ಜನರಿಗೆ ಹಲವಾರು ಜನಪರ ಯೋಜನೆಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಮಾದರ ಸಮುದಾಯದಲ್ಲಿ ಜನಿಸಿದರೂ ಸಹ ಎಂದಿಗೂ ಆ ಜಾತಿ ಈ ಜಾತಿ ಎಂಬ ಮೇಲು-ಕೀಳು ಎಂಬ ಬೇಧಭಾವ ತೋರದೆ ದೇಶದ ಉಪ ಪ್ರಧಾನಿಗಳಾದರೂ ಸಹ ತಮ್ಮ ಕಾರ್ಯಗಳನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಾಗೂ ಇವರು ಉಪ ಪ್ರಧಾನಿಗಳಾದ ಸಮಯದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಇವರ ಕಾರ್ಯಪ್ರವೃತ್ತಿ ಗುಣವನ್ನು ನಾವು ಎಂದೂ ಮರೆಯಬಾರದು ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಣಮಂತ ಬಿರಾದಾರ, ಪರಶುರಾಮ ರೋಣಿಹಾಳ, ಅನೀಲ ಸಾಗರ, ಪ್ರಕಾಶ ನಡುವಿನಕೇರಿ, ಸಂತೋಷ ಬ್ಯಾಳಿ, ಹಣಮಂತ ಮಾದರ, ಅನೀಲ ಮಾದರ, ಶಿವಲಿಂಗ ಮಾದರ, ಮಲ್ಲಿಕಾರ್ಜುನ ಜಿಗಜಿಣಗಿ, ಅರವಿಂದ ಹುಡಿಮನಿ, ಶೇಖರ ಕವಡಿಮಟ್ಟಿ, ಅನೀಲ ರತ್ನಾಕರ, ನಾಗರಜ ಮಾದರ, ಸುನೀಲ ದೇವರಮನಿ, ಅಕಾಶ ಕಲ್ಲೊಳ್ಳಿ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

