ಸಿಂದಗಿ: ೧೫ವರ್ಷಗಳಿಂದ ಅಧಿಕಾರದಲ್ಲಿದ್ದ ಮಾಜಿ ಲೋಕಸಭಾ ಸದಸ್ಯ ಹಾಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿರವರ ಸಾಧನೆ ಜಿಲ್ಲೆಗೆ ಸೊನ್ನೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರದೇಶ ಸಮಿತಿಯ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಪಟೇಲ್ ಬಿರಾದಾರ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿದ ಅವರು, ತಮ್ಮ ಪ್ರಚಾರದ ವೇದಿಕೆಗಳಲ್ಲಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ನಗರದಲ್ಲಿ ಪತ್ರಿಕ ವರದಿ ನೀಡಿರುವವರು ೨೫ಸಾವಿರ ಕೋಟಿ ಅನುದಾನ ದುರ್ಬಳಕೆಯಾಗಿದೆ. ಎಂಬ ಹೇಳಿಕೆ ಮತ್ತು ಗೋಲಗೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳರವರು ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಖಲೆ ಬಿಡುಗಡೆಗೊಳಿಸದೇ ಸುಖ ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಿಮಗೆ ದಲಿತರು, ಹಿಂದುಳಿದವರು, ಲಂಬಾಣ , ಜನಾಂಗದವರು ಅಲ್ಪಸಂಖ್ಯಾತರು, ನೆನಪಿಗೆ ಬರುವವರು ಅವರ ಮೀಸಲಾತಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದಾಗ ನಿಮ್ಮ ಬಾಯಿಗೆ ಏನಾಗಿತ್ತು? ರಸ್ತೆ ಡಾಂಬರೀಕರಣ, ಚಕ್ಕಡಿ ರಸ್ತೆಗಳ, ಹೆಸರಿನಲ್ಲಿ ಕೋಟ್ಯಾನು ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಇದ್ದಾಗ ಲೂಟಿ ಹೊಡೆದಿರುವ ನಿಮ್ಮ ಬಾಯಿಯಲ್ಲಿ ಭ್ರಷ್ಟಾಚಾರದ ಮಾತು? ಕೇಂದ್ರ ಸರ್ಕಾರದ ಜೆಜೆಎಂ ಕೆಲಸ ಸಂಪೂರ್ಣ ಕಳಪೆ ಇದೆ. ನೋಟ್ ಬ್ಯಾನ್ ಮಾಡಿ ೧೦೩, ಎನ್.ಆರ್.ಸಿ, ಸಿಎಎ, ಜಾರಿ ಮಾಡಿ ಸು.೭೦-೮೦, ರೈತ ವಿರೋಧಿ ಕಾನೂನು ರೂಪಿಸಿ ನೂರಾರು ರೈತರ ಪ್ರಾಣವನ್ನು ನುಂಗಿದ ಬಿಜೆಪಿ ಸರ್ಕಾರಕ್ಕೆ ಮೋದಿ ಹೆಸರಿನಲ್ಲಿ ಮತ ಕೇಳಲು ಯಾವ ನೈತಿಕತೆ ಇದೆ? ಮಸ್ಜಿದ್, ಮಂದಿರ ಎಂದು ದೇಶದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ, ಚೀನಾದವರು ಗಡಿಯನ್ನು ಮುಸುಳಿ ನುಗ್ಗಿ ಬಂದರು ಜನರಿಗೆ ದಾರಿ ತಪ್ಪಿಸಿ, ಕರೋನಾ ಮಹಾಮಾರಿಯಲ್ಲಿ ಸ್ವದೇಶದಲ್ಲಿ ಜನ ಸತ್ತರು ವಿದೇಶಕ್ಕೆ ಆಕ್ಸಿಜನ್ ರವಾನಿಸಿ ೮೦ ರೂಪಾಯಿಯ ಮಾಸ್ಕ್ ೪೮೦ರೂ. ಗಳಿಗೆ ಜನರ ತೆರಿಗೆ ಹಣದಲ್ಲಿ ವಂಚಿಸಿದ ಬಿಜೆಪಿಗೆ ಯಾವ ನೈತಿಕತೆ ಜನರ ಬಳಿ ಮತ ಕೇಳಲು ಇದೆ ಎಂದು ಪ್ರಶ್ನಿಸಿದರು.
ರಸ್ತೆಗಳ ಮೇಲೆ ಟೋಲ್ ಗಳನ್ನು ನಿರ್ಮಿಸಿ ಖಾಸಗಿ ಅವರಿಂದ ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡಿ, ಅತ್ಯುತ್ತಮ ರಸ್ತೆ ನಿರ್ಮಾಣದಲ್ಲಿ ನಿರ್ಲಕ್ಷ ತೋರಿದ ಕೇಂದ್ರ ಸರ್ಕಾರಕ್ಕೆ ರಸ್ತೆ ನಿರ್ಮಿಸಿದ್ದೇವೆ ಎಂದು ಹೇಳಲು ಯಾವ ನೈತಿಕತೆ ಇದೆ? ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಹಂಚಿ ೪೦೦ರೂ. ಇದ್ದ ಗ್ಯಾಸ್ ಬೆಲೆಯನ್ನು ೧೨೦೦ ಮಾಡಿ ಬಡವರ ಹೊಟ್ಟೆ ಮೇಲೆ ಹೊಡದಿದ್ದಾರೆ. ರಾಜ್ಯದಿಂದ ತೆರಿಗೆಯನ್ನು ಪಡೆದು ರಾಜ್ಯದ ರೈತರಿಗೆ ಬೆಳೆ ಪರಿಹಾರ ನೀಡದೇ ಇರುವ ಮೋದಿ ಸರ್ಕಾರಕ್ಕೆ ಮತ ಕೇಳಲು ಯಾವ ನೈತಿಕತೆ ಇದೆ. ಅಷ್ಟಕ್ಕೂ ೧೦ವರ್ಷದಲ್ಲಿ ಮೋದಿ ಮಾಡಿರುವ ಸಾಧನೆಗಳಾದರೂ ಏನಿದೆ ಎಂಬುವುದು ಜನರ ಮುಂದೆ ಬಿಚ್ಚಿಡಿ. ಇಲ್ಲ ಜನರ ಬಳಿ ಮತ ಕೇಳಲು ಹೋಗುವುದನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಿ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೊರಟಿದೆ. ಮುಂದೆಯೂ ಕೂಡ ಯಶಸ್ವಿಯಾಗಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತದೆ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯ ಜನರಿಗೆ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

