Author: editor.udayarashmi@gmail.com

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಮಠ್ಸ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಇ. ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಎಕ್ಸಪರ್ಟ ಪಿಯು ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ೮ನೇ ಸ್ಥಾನ ಗಿಟ್ಟಿಸುವ ಮೂಲಕ ಸಾಧನೆಗೈದಿದ್ದಾರೆ.ಸನ್ನಿಧಿ ಚೌಥಾಯಿ -೫೯೧ (೯೮.೫%) ಅಂಕಗಳನ್ನು ಪಡೆದು ರಾಜ್ಯಕ್ಕೆ ೮ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ದೇವರಾಜ .ಆರ್. ಮಾಲಿಪಾಟಿಲ್ ೫೮೮ (೯೮%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಮತ್ತು ಸ್ನೇಹಾ ಅಮಾತಿಗೌಡ್ರ ಹಾಗೂ ಕುಮಾರ ದರ್ಶನ ಕಂಟಿಗೊಂಡ ತಲಾ ೫೮೬(೯೭.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.ಸಂಸ್ಥೆಯಲ್ಲಿ ಒಟ್ಟು ೩೯೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ಗಮನಸೆಳೆದಿದೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಸರ್ ಮತ್ತು ಕಾಲೇಜಿನ ಪ್ರಾಂಶುಪಾಲ ಇರ್ಫಾನ ಬಾಗವಾನ ಸೇರಿದಂತೆ ಎಲ್ಲ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿಗಳು ಹರ್ಷವ್ಯಕ್ತಪಡೆಸಿರುತ್ತಾರೆ.

Read More

ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದ ದಲಿತರ ಏರಿಯಾಗಳಲ್ಲಿ ಸಕಾಲದಲ್ಲಿ ನೀರು ಬಿಡುತ್ತಿಲ್ಲ. ಈ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮದ ನಿವಾಸಿಗಳು ಇಲ್ಲಿನ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಡಿಎಸ್‌ಎಸ್ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಗ್ರಾಮದ ಹತ್ತಿರದಲ್ಲೇ ಕೃಷ್ಣಾ ನದಿ ಇದ್ದರೂ ನಮ್ಮ ಬಾಂಧವರು ನೀರಿಗಾಗಿ ಪರದಾಡುತ್ತಿರುವದು ನೋವಿನ ಸಂಗತಿ. ಈ ಸಮಸ್ಯೆ ಹಲವು ವರ್ಷಗಳಿಂದ ತಲೆದೋರಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸಮಸ್ಯೆ ಅನುಭವಿಸುತ್ತಿರುವ ಎಲ್ಲ ಕುಟುಂಬಗಳು ತಾಲೂಕು ಪಂಚಾಯತ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.ಗಂಗಪ್ಪ ಮಾದರ, ಅಭಿಲಾಷ ಮಾದರ, ಯಮನಪ್ಪ ಮಾದರ, ಶ್ರೀನಾಥ ಮಾದರ, ಸುರೇಶ ಮಾದರ, ಚಂದಪ್ಪ ಮಾದರ, ಶರಣವ್ವ ಮಾದರ, ದೇವಪ್ಪ ಮಾದರ, ಸಿದ್ದಪ್ಪ ಮಾದರ, ಬಸವಂತ ಮಾದರ ಸೇರಿದಂತೆ ಮತ್ತೀತರರು ಮನವಿ ಪತ್ರಕ್ಕೆ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

Read More

ವಿಜಯಪುರ: ಈ ಸಲದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ.೯೪.೮೯ ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲೇ ವಿಜಯಪುರ ಜಿಲ್ಲೆ ರ್‍ಯಾಂಕಿಂಗ್ ಪಟ್ಟಿಯಲ್ಲಿ ೩ ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇದೊಂದು ಅಭೂತಪೂರ್ವ ಶೈಕ್ಷಣಿಕ ಸಾಧನೆಯಾಗಿದ್ದು, ಉತ್ತಮ ಫಲಿತಾಂಶ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಜಿಲ್ಲೆ ಉನ್ನತ ಸ್ಥಾನಕ್ಕೇರಲು ಕಾರಣಿಕರ್ತರಾದ ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಶಿಕ್ಷಕರಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ವಾಯುವ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.ಇದೇ ವೇಳೆ ಎಲ್ಲರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಉನ್ನತ ಸ್ಥಾನಕ್ಕೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More

ವಿಜಯಪುರ: ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟು ಶೇ.೯೪.೮೯% ಫಲಿತಾಂಶ ಪಡೆಯುವ ಮೂಲಕ ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಟಾಪ್ ಮೂರನೇ ಸ್ಥಾನಕ್ಕೆ ಏರಿದ್ದು ಇಡಿ ಜಿಲ್ಲೆಯೇ ಹೆಮ್ಮೆ ಪಡುವ ಶೈಕ್ಷಣಿಕ ಸಾಧನೆಯಾಗಿದೆ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ೧ ನೇ ರ‍್ಯಾಂಕ್ ಪಡೆದ ವೇದಾಂತ ನಾವಿ ಸೇರಿ ಜಿಲ್ಲೆಗೆ ಕೀರ್ತಿ ತಂದ ಎಲ್ಲಾ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಎಲ್ಲಾ ಶಿಕ್ಷಕ ಬಳಗ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಯ ವಿದ್ಯಾರ್ಥಿ ವೇದಾಂತ ನಾವಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ಗಳಿಸಿರುವುದು ಇಡಿ ವಿಜಯಪುರಕ್ಕೆ ಹೆಮ್ಮೆಯ ಸಂಗತಿ. ಅಲ್ಲದೇ ಅವರಂತೆ ವಿವಿಧ ವಿಭಾಗಗಳಲ್ಲಿ ಜಿಲ್ಲೆಯ ಸಾಕಷ್ಟು ವಿದ್ಯಾರ್ಥಿಗಳು ಪರಿಶ್ರಮಪಟ್ಟು ಅತ್ಯುತ್ತಮ ಫಲಿತಾಂಶ ಪಡೆದು ಹೆತ್ತವರಿಗೆ, ಶಿಕ್ಷಕರಿಗೆ ಹಾಗೂ ಇಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು.ಹಾಗೇ ಉತ್ತಮ ಫಲಿತಾಂಶ ಪಡೆಯಲಾಗದ,…

Read More

ಮುದ್ದೇಬಿಹಾಳ: ಕರ್ನಾಟಕ ಭೀಮ್ ಸೇನೆಯ ವತಿಯಿಂದ ಕೊಡಮಾಡುವ ಅಂಬೇಡ್ಕರ್ ರತ್ನ ಪ್ರಶಸ್ತಿಗೆ ಪತ್ರಕರ್ತ ಪರಶುರಾಮ ಕೊಣ್ಣೂರ, ತಾಲೂಕಿನ ಹೋರಾಟಗಾರರಾದ ಮಲ್ಲು ತಳವಾರ, ಹರೀಶ ನಾಟೆಕಾರ ಮತ್ತು ಸಿ.ಜೆ.ವಿಜಯಕರ ಇವರುಗಳನ್ನು ಆಯ್ಕೆ ಮಾಡಲಾಗಿದೆ.ನಿಡಗುಂದಿ ತಾಲೂಕಿನ ಚಿಮ್ಮಲಗಿ-೨ ಗ್ರಾಮದಲ್ಲಿ ನಡೆಯುವ ಡಾ.ಬಾಬಾಬ ಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವ ಹಾಗೂ ಮಹಿಳಾ ಘಟಕ ಉದ್ಘಾಟನಾ ಸಂಮಾರಂಭದ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸೇನೆಯ ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಇಂಡಿ: ಬಡ ರೈತರ ಮೇಲೆ ಇಂಡಿ ಗ್ರಾಮೀಣ ಸಿಪಿಐ ದಬ್ಬಾಳಿಕೆ ಮಾಡುತ್ತಿದ್ದಾರೆ, ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದರೂ ಒಂದು ಪಕ್ಷಗಾರರ ಪರವಾಗಿ ಕಾರ್ಯ ಮಾಡಿ, ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದು ಮಾಜಿ ಶಾಸಕ ರವಿಕಾಂತ್ ಪಾಟೀಲ ಆರೋಪಿಸಿದರು.ಬುಧವಾರ ಕರೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಅಗರಖೇಡ ಗ್ರಾಮದ ರೈತ ಭೀಮಾಶಂಕರ ಸಾವಳಗಿ, ಸಂಗನಬಸವ ಸಾವಳಗಿ ಹಾಗೂ ಇವರ ಕುಟುಂಬದ ಮೇಲೆ ಸುಖಾ ಸುಮ್ಮನೆ ಸಿಪಿಐ ತೊಂದರೆ ಕೊಡುತ್ತಿದ್ದಾರೆ. ಸುಮಾರು ೮ ವರ್ಷಗಳ ಹಿಂದೆ ಸ್ವಗ್ರಾಮದ ಬಿರಾದಾರ ಎಂಬುವರ ಕಡೆ ಸಾವಳಗಿ ಕುಟುಂಬಸ್ಥರು ಸಾಲ ಪಡೆದು ಅವರಿಗೆ ಜಮೀನು ಬರೆದು ಕೊಟ್ಟಿದ್ದಾರೆ. ಅದನ್ನು ೩ ವರ್ಷದೊಳಗಾಗಿ ಹಣ ಕೊಟ್ಟು ಮರಳಿ ಪಡೆಯಬೇಕೆಂದು ಅನೇಕ ಬಾರಿ ಪ್ರಯತ್ನ ಪಟ್ಟರು. ಆದರೆ ಬಿರಾದಾರ ಅವರು ಕೊಟ್ಟ ಹಣಕ್ಕಿಂತ ಹೆಚ್ಚಿನ ಹಣ ಬೇಡಿಕೆ ಇಟ್ಟಿರುವುದರಿಂದ ಗ್ರಾಮಸ್ಥರು ಸೇರಿ ಪಂಚಾಯತ್ ನಡೆಸಿದರೂ ಆ ಸಮಸ್ಯೆ ಪರಿಹಾರ ಕಾಣಲಿಲ್ಲ. ಆದ್ದರಿಂದ ಸವಳಗಿ ಕುಟುಂಬದವರು ನ್ಯಾಯಾಲಯದ ಮೊರೆ ಹೊಗಿದ್ದಾರೆ. ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದಿರುವ…

Read More

ತಿಕೋಟಾ: ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವುದು ಎಲ್ಲ ಮತದಾರರ ಆದ್ಯ ಕರ್ತವ್ಯ ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬಿಡಕರ್ ಹೇಳಿದರು.ತಾಲೂಕು ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತಿ, ತಿಕೋಟಾ ವತಿಯಿಂದ ತಿಕೋಟಾ ಪಟ್ಟಣದಲ್ಲಿ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡ ಬೈಕ್ ರ‍್ಯಾಲಿ ಮತ್ತು ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.೨೦೨೪ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದು ಎಲ್ಲ ಮತದಾರರ ಆದ್ಯ ಕರ್ತವ್ಯ ಹೀಗಾಗಿ ಎಲ್ಲ ಅರ್ಹ ಮತದಾರರು ಅಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಅವರು ತಿಳಿಸಿದರು.ಮತದಾನ ಎನ್ನುವುದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ, ಅಂದರೆ ಎಲ್ಲಾ ಭಾರತೀಯರು ತಮ್ಮ ಆಯ್ಕೆಯ ಸಂಸದರನ್ನು ಆಯ್ಕೆ ಮಾಡಲು ಮತವನ್ನು ಚಲಾಯಿಸಬೇಕು. ಮತದಾನವು ನಮ್ಮ ದೇಶದ ಭವಿಷ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವ ಪ್ರಮುಖ ನಾಗರಿಕ ಕರ್ತವ್ಯವಾಗಿದೆ. ಮತದಾನವು ರಾಜಕಾರಣಿಗಳನ್ನು ಅವರ ಕಾರ್ಯಗಳಿಗೆ ಜವಾಬ್ದಾರರಾಗಿರಲು ಸಹಾಯ ಮಾಡುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವದ ಚೌಕಟ್ಟನ್ನು ಸೃಷ್ಟಿಸುತ್ತದೆ.ಕಾರ್ಯಕ್ರಮದ…

Read More

ಹೊನವಾಡ: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿದ್ಯಾವರ್ಧಕ ಸಂಘದ ಬಸವಂತರಾಯ ಪದವಿ ಪೂರ್ವ ಕಾಲೇಜು ಹೊನವಾಡ ಉತ್ತಮ ಫಲಿತಾಂಶ ಬಂದಿದ್ದು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಪ್ರಾಚಾರ್ಯರು ಉಪನ್ಯಾಸಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಥಮ ಕುಮಾರಿ ಸುಶ್ಮಿತಾ ಖೈರಾವ 564-94%, ದ್ವಿತೀಯಕುಮಾರಿ ಕಾಶಿಬಾಯಿ ಕುಂಬಾರ 563 – 93.83%, ತೃತೀಯ ಕುಮಾರಿ ಕಾವೇರಿ ಪೂಜಾರಿ 555 – 92%, ತೃತೀಯ ಭಾಗ್ಯಶ್ರೀ ಭೋಸಲೆ 555-92%

Read More

ವಿಜಯಪುರ: ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ನಗರದ ಶ್ರೀ ಯಲಗೂರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಆರತಿ ಸದಾಶಿವ ಹೆಂಡೆಗಾರ ೫೭೫ (೯೫.೮೩) ಅಂಕಗಳನ್ನು ಪಡೆದುಕೊಂಡರೆ ದ್ವಿತಿಯ ಸ್ಥಾನದಲ್ಲಿ ಸಾಧಿಯಾ ಸಿಕಂದರ ನದಾಫ ೫೬೭ (೯೪.೫%) ತೃತೀಯ ಸ್ಥಾನದಲ್ಲಿ ದೀಪಿಕಾ ರಾಘವೇಂದ್ರ ಸಹಾಪೂರ ೫೬೫ (೯೪.೧೬%) ಇನ್ನು ವಾಣಿಜ್ಯ ವಿಭಾಗದಲ್ಲಿ ಒಟ್ಟು ೨೧ ವಿದ್ಯಾರ್ಥಿಗಳು ಇದ್ದು, ಇವರೆಲ್ಲರೂ ಒಳ್ಳೆಯ ಶ್ರೇಣಿಯಲ್ಲಿ ಪಾಸಾಗಿದ್ದ ಇದರಲ್ಲಿ ಪ್ರಥಮ ಶ್ರೇಣಿಯಲ್ಲಿ ಸುಶ್ಮೀತಾ ಚನ್ನಪ್ಪ ಪಡನಾಡ ೫೩೨ (೮೮.೬೬%) ದ್ವಿತಿಯ ಸ್ಥಾನದಲ್ಲಿ ಅರ್ಶಾನ ಅ. ಮುಲ್ಲಾ ೫೩೦ (೮೮.೩೩%) ಹಾಗೂ ತೃತೀಯ ಸ್ಥಾನವನ್ನು ಪ್ರೀಯಾಂಕಾ ಭ. ರಜಪೂತರ ೪೯೩ (೮೨.೧೬%) ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ರೆಹಾನ ಮೊಹ್ಮದಅಲಿ ೫೭೬ ೯೬% ದ್ವಿತೀಯ ಸ್ಥಾನವನ್ನು ಸಾನಿಯಾ ಕಲಬುರ್ಗಿ ೫೭೫ (೯೫.೦೮%) ತೃತೀಯ ಸ್ಥಾನದಲ್ಲಿ ಅನ್ವರ ವಾಲಿಕಾರ ೫೭೩ (೯೫.೭೫%) ಜನತಾಬಾಯಿ ನಾಲಬಂದ ೫೭೩ (೯೫.೭೫%) ಹೀಗಾಗಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ…

Read More

ಇಂಡಿ: ೨೦೨೪-ಮಾರ್ಚ್ ತಿಂಗಳಲ್ಲಿ ನಡೆದ ೨೦೨೩-೨೪ ನೇ ಸಾಲಿನ ಚವಡಿಹಾಳದ ಗುರುಬಸವ ಪ.ಪೂ ವಿಜ್ಞಾನ ಕಾಲೇಜಿನ ಒಟ್ಟು ೫೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೫೬ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಒಟ್ಟಾರೆ ಫಲಿತಾಂಶ ಶೇಕಡಾ ೧೦೦% ರಷ್ಟು ಆಗಿರುತ್ತದೆ.ಕುಮಾರ. ಬಿಳೇನಸಿದ್ಧ ಹಿರೇಕುರಬರ ಇವನು ಶೇಕಡಾ ೯೬.೫೦% ರಷ್ಟು (೫೭೯) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕುಮಾರಿ. ಭಾಗ್ಯಶ್ರೀ ಹೊಸಮನಿ ೯೫.೫೦% ರಷ್ಟು (೫೭೩) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ ಹಾಗೂ ಕುಮಾರಿ. ಕಾಂಚನಾ ಚೋರಗಿಮಠ ೯೫.೩೩% ರಷ್ಟು (೫೭೨) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.ಜೀವಶಾಸ್ತ್ರ ವಿಷಯದಲ್ಲಿ ೭ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Read More