ವಿಜಯಪುರ: ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ನಗರದ ಶ್ರೀ ಯಲಗೂರೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳಾದ ಕಲಾ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಆರತಿ ಸದಾಶಿವ ಹೆಂಡೆಗಾರ ೫೭೫ (೯೫.೮೩) ಅಂಕಗಳನ್ನು ಪಡೆದುಕೊಂಡರೆ ದ್ವಿತಿಯ ಸ್ಥಾನದಲ್ಲಿ ಸಾಧಿಯಾ ಸಿಕಂದರ ನದಾಫ ೫೬೭ (೯೪.೫%) ತೃತೀಯ ಸ್ಥಾನದಲ್ಲಿ ದೀಪಿಕಾ ರಾಘವೇಂದ್ರ ಸಹಾಪೂರ ೫೬೫ (೯೪.೧೬%) ಇನ್ನು ವಾಣಿಜ್ಯ ವಿಭಾಗದಲ್ಲಿ ಒಟ್ಟು ೨೧ ವಿದ್ಯಾರ್ಥಿಗಳು ಇದ್ದು, ಇವರೆಲ್ಲರೂ ಒಳ್ಳೆಯ ಶ್ರೇಣಿಯಲ್ಲಿ ಪಾಸಾಗಿದ್ದ ಇದರಲ್ಲಿ ಪ್ರಥಮ ಶ್ರೇಣಿಯಲ್ಲಿ ಸುಶ್ಮೀತಾ ಚನ್ನಪ್ಪ ಪಡನಾಡ ೫೩೨ (೮೮.೬೬%) ದ್ವಿತಿಯ ಸ್ಥಾನದಲ್ಲಿ ಅರ್ಶಾನ ಅ. ಮುಲ್ಲಾ ೫೩೦ (೮೮.೩೩%) ಹಾಗೂ ತೃತೀಯ ಸ್ಥಾನವನ್ನು ಪ್ರೀಯಾಂಕಾ ಭ. ರಜಪೂತರ ೪೯೩ (೮೨.೧೬%) ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ರೆಹಾನ ಮೊಹ್ಮದಅಲಿ ೫೭೬ ೯೬% ದ್ವಿತೀಯ ಸ್ಥಾನವನ್ನು ಸಾನಿಯಾ ಕಲಬುರ್ಗಿ ೫೭೫ (೯೫.೦೮%) ತೃತೀಯ ಸ್ಥಾನದಲ್ಲಿ ಅನ್ವರ ವಾಲಿಕಾರ ೫೭೩ (೯೫.೭೫%) ಜನತಾಬಾಯಿ ನಾಲಬಂದ ೫೭೩ (೯೫.೭೫%) ಹೀಗಾಗಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. ೧೦೦ಕ್ಕೆ ೧೦೦ ರಷ್ಟು ಫಲಿತಾಂಶವನ್ನು ಪಡೆದುಕೊಂಡು ಶಾಲೆಯ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಎಚ್.ಜಿ.ತೊನಶ್ಯಾಳ, ಪ್ರಾಚಾರ್ಯ ಶೋಭಾ ಪಾಟೀಲ, ಶಿಕ್ಷಕರಾದ ಶಿವಾನಂದ ಹಿರೇಕುರುಬರ, ವಿಜು ವಪ್ಪಾರೆ, ಆಯ್.ಎಸ್. ಅಗಸರ, ಅರಬ್ ಸರ್ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
