ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಮಠ್ಸ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಇ. ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಎಕ್ಸಪರ್ಟ ಪಿಯು ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ೮ನೇ ಸ್ಥಾನ ಗಿಟ್ಟಿಸುವ ಮೂಲಕ ಸಾಧನೆಗೈದಿದ್ದಾರೆ.
ಸನ್ನಿಧಿ ಚೌಥಾಯಿ -೫೯೧ (೯೮.೫%) ಅಂಕಗಳನ್ನು ಪಡೆದು ರಾಜ್ಯಕ್ಕೆ ೮ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ದೇವರಾಜ .ಆರ್. ಮಾಲಿಪಾಟಿಲ್ ೫೮೮ (೯೮%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಮತ್ತು ಸ್ನೇಹಾ ಅಮಾತಿಗೌಡ್ರ ಹಾಗೂ ಕುಮಾರ ದರ್ಶನ ಕಂಟಿಗೊಂಡ ತಲಾ ೫೮೬(೯೭.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.
ಸಂಸ್ಥೆಯಲ್ಲಿ ಒಟ್ಟು ೩೯೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ಗಮನಸೆಳೆದಿದೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಸರ್ ಮತ್ತು ಕಾಲೇಜಿನ ಪ್ರಾಂಶುಪಾಲ ಇರ್ಫಾನ ಬಾಗವಾನ ಸೇರಿದಂತೆ ಎಲ್ಲ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿಗಳು ಹರ್ಷವ್ಯಕ್ತಪಡೆಸಿರುತ್ತಾರೆ.
Subscribe to Updates
Get the latest creative news from FooBar about art, design and business.
ಎಕ್ಸಪರ್ಟ ಪಿಯು ಸೈನ್ಸ್ ಕಾಲೇಜ್ ವಿದ್ಯಾರ್ಥಿ ರಾಜ್ಯಕ್ಕೆ ೮ನೇ ಸ್ಥಾನ
Related Posts
Add A Comment

