ಮುದ್ದೇಬಿಹಾಳ: ತಾಲೂಕಿನ ಅಮರಗೋಳ ಗ್ರಾಮದ ದಲಿತರ ಏರಿಯಾಗಳಲ್ಲಿ ಸಕಾಲದಲ್ಲಿ ನೀರು ಬಿಡುತ್ತಿಲ್ಲ. ಈ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿ ಗ್ರಾಮದ ನಿವಾಸಿಗಳು ಇಲ್ಲಿನ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಡಿಎಸ್‌ಎಸ್ ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಗ್ರಾಮದ ಹತ್ತಿರದಲ್ಲೇ ಕೃಷ್ಣಾ ನದಿ ಇದ್ದರೂ ನಮ್ಮ ಬಾಂಧವರು ನೀರಿಗಾಗಿ ಪರದಾಡುತ್ತಿರುವದು ನೋವಿನ ಸಂಗತಿ. ಈ ಸಮಸ್ಯೆ ಹಲವು ವರ್ಷಗಳಿಂದ ತಲೆದೋರಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸಮಸ್ಯೆ ಅನುಭವಿಸುತ್ತಿರುವ ಎಲ್ಲ ಕುಟುಂಬಗಳು ತಾಲೂಕು ಪಂಚಾಯತ ಕಾರ್ಯಾಲಯದ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಗಂಗಪ್ಪ ಮಾದರ, ಅಭಿಲಾಷ ಮಾದರ, ಯಮನಪ್ಪ ಮಾದರ, ಶ್ರೀನಾಥ ಮಾದರ, ಸುರೇಶ ಮಾದರ, ಚಂದಪ್ಪ ಮಾದರ, ಶರಣವ್ವ ಮಾದರ, ದೇವಪ್ಪ ಮಾದರ, ಸಿದ್ದಪ್ಪ ಮಾದರ, ಬಸವಂತ ಮಾದರ ಸೇರಿದಂತೆ ಮತ್ತೀತರರು ಮನವಿ ಪತ್ರಕ್ಕೆ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

