Author: editor.udayarashmi@gmail.com

ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಜಯಮೃತ್ಯುಂಜಯ ಶ್ರೀ ಅಭಿಮತ ದೇವರಹಿಪ್ಪರಗಿ: ಇಂದಿನ ಯುವಜನತೆ ತಮ್ಮ ಗ್ರಾಮ, ಪಟ್ಟಣ, ನಗರಗಳ ಹಿನ್ನೆಲೆ, ಇತಿಹಾಸ, ವಿಶಿಷ್ಟತೆಗಳ ಬಗ್ಗೆ ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಶನಿವಾರ ಜರುಗಿದ ಶ್ರೀಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ತೃತಿಯ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ದೇವರಹಿಪ್ಪರಗಿ ಪಟ್ಟಣ ವೀರಶರಣರ ಜನ್ಮಭೂಮಿಯೆಂದೂ ಮುಂದಿನ ಪೀಳಿಗೆ ಗುರುತಿಸಲು ಸಹಕಾರಿಯಾಗುವಂತೆ ಇನ್ನಷ್ಟು ಅಭಿವೃದ್ಧಿಗೊಳಿಸಬೇಕಾಗಿದೆ ಎಂದರು.ಗದ್ದಗಿಮಠದ ಮಡಿವಾಳೇಶ್ವರ ಸ್ವಾಮೀಜಿ, ಸದಯ್ಯನಮಠದ ವೀರಗಂಗಾಧರಶ್ರೀ, ಜಡಿಮಠದ ಜಡಿಸಿದ್ಧೇಶ್ವರಶ್ರೀಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸೃಷ್ಟಿ ಹಾಗೂ ಕುಮಾರಿ ಸುದೀಕ್ಷಾ ಬಿರಾದಾರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾಶೀಪತಿ ದೇವಣಗಾಂವ ಅಧ್ಯಕ್ಷತೆ ವಹಿಸಿದ್ದರು. ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ವ್ಹಿ.ಕೆ. ಪಾಟೀಲ ಸ್ವಾಗತಿಸಿದರು. ಸಂಚಾಲಕ ಬಿ.ಎಂ.ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು.ಸಮಾರಂಭದಲ್ಲಿ ರಾಷ್ಟ್ರೀಯ ವೀರಗಣಾಚಾರಿ…

Read More

ಮ.ನ.ಪಾ ವತಿಯಿಂದ ಸ್ವೀಪ್ ಅಡಿ ನಗರದ ವಿವಿಧ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಮಹಿಳೆಯರಿಂದ ಸಭೆ ವಿಜಯಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ರ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಮತದಾನದ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ವತಿಯಿಂದ ನಗರದ ವಿವಿಧ ಸ್ತ್ರೀಶಕ್ತಿ ಮತ್ತು ಸ್ವ-ಸಹಾಯ ಸಂಘದ ಗುಂಪುಗಳ ಪ್ರತಿನಿಧಿಗಳಿಗೆ ಸಭೆ ನಡೆಸಿ ತಮ್ಮ ಗುಂಪಿನ ಸದಸ್ಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಮತದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಕುರಿತು ಅರಿವು ಮೂಡಿಸಲು ಆಯೋಜಿಸಿರುವ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೇರವೆರಿಸಲುಮಹಾನಗರ ಪಾಲಿಕೆ ಸಭಾ ಭವನದಲ್ಲಿ ಸಭೆ ಜರುಗಿತು.ಸಹಾಯಕ ಚುನಾವಣಾ ಅಧಿಕಾರಿಗಳು ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ವಿಜಯಪುರ ನಗರ ಹಾಗೂ ಮಹಾನಗರ ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಇವರು ಮಾತನಾಡುತ್ತ, ನಮ್ಮ ಭಾರತಿಯರಿಗೆ ರಾಷ್ಟ್ರ ಪ್ರೇಮ ಮತ್ತು ಪ್ರಜಾಪ್ರಭುತ್ವದ ಮೇಲೆ ತುಂಬಾ ಹೆಮ್ಮೆ, ನ್ಯಾಯ ಸಮ್ಮತ ಚುನಾವಣೆ ಪ್ರಜಾಪ್ರಭುತ್ವದ ಆಧಾರ ಸ್ತಂಭ, ಏಕೆಂದರೆ ಜನರ ಸರ್ಕಾರವು, ಜನರಿಂದ ಮತ್ತು ಜನರಗೊಸ್ಕರ ಎಂದು ಚುನಾವಣೆಗಳು…

Read More

ವಿಜಯಪುರ: ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ನೀರಿನ ಸಮಸ್ಯೆ ಉದ್ಭವಿಸುವ ಕಡೆಯಲ್ಲಿ ತುರ್ತಾಗಿ ಅಗತ್ಯ ಕ್ರಮ ಕೈಗೊಂಡು ನೀರು ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.ಶುಕ್ರವಾರ ಸಂಜೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ನಿರ್ವಹಣೆ ಕುರಿತು ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಧ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಆದ್ಯಾಗೂ ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿ ಲಭ್ಯವಿರುವ ನೀರಿನ ಸದ್ಭಳಕೆಯೊಂದಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.ಹೊನಗನಹಳ್ಳಿಯ ೫ ಎಂಎಲ್‌ಡಿ ನೀರು ಸರಬರಾಜು ಸಮಸ್ಯೆ ಕುರಿತು ನಾಳೆಯೇ ಸಂಬಂಧಿಸಿದ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸುವಂತೆ ಸೂಚಿಸಿದ ಅವರು, ವಿವಿಧೆಡೆ ಎಕ್ಸಟೆನ್‌ಶನ್ ಪ್ರದೇಶ ಹೆಚ್ಚಾಗಿ ನಿರ್ಮಾಣವಾಗುತ್ತಿರುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗಲಿದ್ದು, ನೀರಿನ ಅಭಾವವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವಿಜಯಪುರ ನಗರದಲ್ಲಿರುವ ವಿವಿಧ ಬೊರವೆಲ್‌ಗಳು, ಕೈಪಂಪುಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು.…

Read More

ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಶಿಕ್ಷಕರಿಗೆ ಸೂಚನೆ ವಿಜಯಪುರ: ಪ್ರಸಕ್ತ ವರ್ಷ ೨೦೨೪ರ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-೧ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏಪ್ರಿಲ್ ೧೫ರಿಂದ ವಿಜಯಪುರ ನಗರದಲ್ಲಿರುವ ಹತ್ತು ಮೌಲ್ಯಮಾಪನ ಕೇಂದ್ರಗಳಲ್ಲಿ ಜರುಗಲಿದ್ದು, ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿತ ಎಲ್ಲ ಶಿಕ್ಷಕರು ಮತ್ತು ಗುಂಪು ಬಿ ವೃಂದದ ಪ್ರೌಢಶಾಲಾ ಮುಖ್ಯೋಪಾಧ್ಯಾಯರುಗಳು ನಿಗದಿತ ದಿನಾಂಕ ಮತ್ತು ಸಮಯಕ್ಕೆ ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಸೂಚಿಸಿದ್ದಾರೆ.ಮೌಲ್ಯಮಾಪನ ಕಾರ್ಯಕ್ಕೆ ಅಗತ್ಯವಿರುವ ತಾಂತ್ರಿಕ ಸೌಲಭ್ಯಗಳ ಸಮೇತ ಎಲ್ಲ ಪೂರ್ವಸಿದ್ಧತೆಗಳು ಪೂರ್ಣಗೊಂಡಿದ್ದು, ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಎಲ್ಲ ವಿಷಯಗಳ ಶಿಕ್ಷಕರುಗಳ ಮೌಲ್ಯಮಾಪನ ಕಾರ್ಯದ ಆದೇಶಗಳನ್ನು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರುಗಳ ಲಾಗಿನ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಸಂಬಂಧಿಸಿದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ವಿಷಯ ಶಿಕ್ಷಕರುಗಳು ಕಡ್ಡಾಯವಾಗಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವಂತೆ ಕ್ರಮ ವಹಿಸಬೇಕು.…

Read More

ಮಮದಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಗಾಳಿ ಬೀಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಅವರು ಮತಯಾಚಿಸಿ ಮಾತನಾಡಿದರು.ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ಮೇಲೆ ದಾಳಿ ಮತ್ತು ಭಾರತ ಕೈಗೊಂಡ ಪ್ರತಿದಾಳಿಯಂಥ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ವರವಾಗಿದ್ದವು. ಮೋದಿ ಅವರು ನೀಡಿದ್ದ ಕಪ್ಪು ಹಣ ವಾಪಸ್ ತರುವುದು, ಪ್ರತಿಯೊಬ್ಬರ ಅಕೌಂಟಿಗೆ ರೂ. 15 ಲಕ್ಷ ಹಣ ಹಾಕುವುದು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಅಚ್ಛೇ ದಿನ್ ಭರವಸೆಗಳು ಈಡೇರಿಲ್ಲ. ಆದರೆ, ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. 2013-18ರ ಅವಧಿಯಲ್ಲಿ ನಾವು ಕೈಗೊಂಡ ನೀರಾವರಿ…

Read More

ಚಡಚಣ: ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದ ಮುಂಬದಲ್ಲಿರುವ ದೇವರ ದಾಸಿಮಯ್ಯ ವ್ರತ್ತದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಯಿತು.ಪರೋಪಕಾರವನ್ನೇ ಜೀವನವನ್ನಾಗಿಟ್ಟುಕೊಂಡು ಬದುಕುವ ಮಹಾನ್ ಆದರ್ಶ ಪುರುಷರಲ್ಲಿ ಜೇಡರ ದಾಸಿಮಯ್ಯ ಕೂಡ ಪ್ರಮುಖರಾಗಿದ್ದಾರೆ. ಮಹಿಳಾ ಸಮಾನತೆ, ಅಸ್ಮಿತೆಯ ಬಗ್ಗೆ ತನ್ನ ವಚನದ ಮೂಲಕವೇ ತಿಳಿಸಿದ ಶ್ರೇಷ್ಠ ವಚನಕಾರರಾಗಿದ್ದು, ಆತ್ಮಕ್ಕೆ ಯಾವುದೇ ಜಾತಿ, ಲಿಂಗ ಭೇದವಿಲ್ಲವೆಂದು ಅಂದಿನ ಕಾಲದಲ್ಲಿಯೇ ತಿಳಿಸಿದ ವಚನಕಾರ ಎಂದು ಕೆ ಟಿ ಏಳಗಿ ಅವರು ಹೇಳಿದರು.ಪಟ್ಟಣದ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಸಾಹಿತಿ ಹಾಗೂ ಸಮುದಾಯದ ಅಧ್ಯಕ್ಷ ಬಸವರಾಜ ಯಂಕಂಚಿ ಮಾತನಾಡಿ, ಬಸವಣ್ಣ, ದೇವರದಾಸಿಮಯ್ಯ ಹೀಗೆ ಅನೇಕ ವಚನಕಾರರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿವೆ. ಜಯಂತಿ ಆಚರಿಸುವ ಮೂಲಕ ಅವರ ಬದುಕಿನ ಅನೇಕ ಮಜಲುಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಗುರುಪಾದಪ್ಪಾ ಜೀರಂಕಲಗಿ, ಗಂಗಾಧರ…

Read More

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ 16 ರಿಂದ ಈವರೆಗೆ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ರೂ.300 ಕೋಟಿಗೂ ಅಧಿಕ ಮೌಲ್ಯದ ನಗದು, ಮದ್ಯ, ಮಾದಕವಸ್ತು ಹಾಗೂ ಮತದಾರರಿಗೆ ಆಮಿಷವೊಡ್ಡಲು ಬಳಸುವ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 16 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡ, ಪೊಲೀಸ್ ಅಧಿಕಾರಿಗಳನ್ನೊಳಗೊಂಡಿರುವ ಜಾರಿ ತಂಡಗಳ ಸಮನ್ವಯದಲ್ಲಿ ರೂ. 307.61 ಕೋಟಿ ಮೌಲ್ಯದ ನಗದು, ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.46.01 ಕೋಟಿ ರೂಪಾಯಿ ನಗದು, 7.73 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳು, 147 ಕೋಟಿ ರೂಪಾಯಿ ಮೌಲ್ಯದ ಮದ್ಯ, 9.75 ಕೋಟಿ ಮೌಲ್ಯದ ಮಾದಕ ವಸ್ತುಗಳು ಮತ್ತು 24.38 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತಿತರ ವಸ್ತುಗಳನ್ನು ವಶಕ್ಕೆ…

Read More

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಕೊಲ್ಕತ್ತಾ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಇಬ್ಬರು ಆರೋಪಿಗಳಿಗೆ ಕೊಲ್ಕತ್ತಾ ಕೋರ್ಟ್ ಶುಕ್ರವಾರ ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಎನ್‌ಐಎಗೆ ಅನುಮತಿ ನೀಡಿದೆ.ಬಂಧಿತ ಆರೋಪಿಗಳಾದ ಮುಸಾವಿರ್​ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್​ ತಾಹಾನನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿ ಮೇರೆಗೆ ಸಿಟಿ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮೂರು ದಿನಗಳ ಟ್ರಾನ್ಸಿಟ್ ರಿಮಾಂಡ್ ಗೆ ಅನುಮತಿ ನೀಡಿದ್ದಾರೆ. ಕೋರ್ಟ್ ನಿಂದ ವಶಕ್ಕೆ ಪಡೆದು ಆರೋಪಿಗಳನ್ನು ಎನ್​​ಐಎ ತಂಡ ಬೆಂಗಳೂರಿಗೆ ಕರೆತರಲಿದೆ ಎನ್ನಲಾಗಿದೆ.

Read More

ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯಾಗಿ ಆಲಗೂರರಿಂದ ನಾಮತ್ರ ಸಲ್ಲಿಕೆ ವಿಜಯಪುರ: ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.ನಂತರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಕಾಂಗ್ರೆಸ್‌ನ ಕೆಲಸ ನಮ್ಮ ಕೈಹಿಡಿಯಲಿದೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು.ನನಗೆ ಪೂರ್ತಿ ಜಿಲ್ಲೆ ಗೊತ್ತಿಲ್ಲ ಎನ್ನುವ ಸಂಸದ ರಮೇಶ ಜಿಗಜಿಣಗಿಯವರಿಗೆ ಏನು ಹೇಳಬೇಕು. ನಾನು ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಇಡೀ ಜಿಲ್ಲೆ ಪರಿಚಿತನಿದ್ದೇನೆ. ಎರಡು ಸಲ ಶಾಸಕನಾಗಿದ್ದೇನೆ. ನನಗೆ ರಾಜಕೀಯದ ಇತಿಹಾಸವಿದೆ, ದುಡಿದಿದ್ದೇನೆ. ಆದರೆ, ಚಿರಪರಿಚಿತರಾಗಿರುವ ಜಿಗಜಿಣಗಿಯವರ ಮುಖವನ್ನೇ ಜನರು ಮರೆತಿದ್ದಾರಲ್ಲ, ಯಾಕೆಂದರೆ ಇವರು ಯಾರಿಗೆ ಮುಖ ತೋರಿಸಿದ್ದಾರೆ ಹೇಳಿ ಎಂದು ವ್ಯಂಗ್ಯವಾಡಿದರು.ಯಾರು ಏನೇ ಮಾತಾಡಿದರೂ ಮತದಾರರಿಗೆ ಕಾಂಗ್ರೆಸ್ ಪಕ್ಷ ಜನಾನುರಾಗಿ ಅಂತ ಗೊತ್ತಾಗಿದೆ. ಅಭಿವೃದ್ಧಿ ಮಂತ್ರವಾಗಿಸಿಕೊಂಡು ಅವರ ಮುಂದೆ ನಾನೀಗ ನಿತಿದ್ದೇನೆ. ಗೆಲುವು ಆಗೇ ಆಗುತ್ತದೆ, ಜನರ ಪ್ರತಿಕ್ರಿಯೆ-ಉತ್ಸಾಹದಿಂದ ಈ ಮಾತು ಹೇಳುತ್ತಿರುವೆ. ಗೆದ್ದರೆ ಅವರ ಋಣ ತೀರಿಸುತ್ತೇನೆ…

Read More