Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ.
(ರಾಜ್ಯ ) ಜಿಲ್ಲೆ

ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ.

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಮದಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಹೇಳಿಕೆ

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಗಾಳಿ ಬೀಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಅವರು ಮತಯಾಚಿಸಿ ಮಾತನಾಡಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಪುಲ್ವಾಮಾ ಮೇಲೆ ದಾಳಿ ಮತ್ತು ಭಾರತ ಕೈಗೊಂಡ ಪ್ರತಿದಾಳಿಯಂಥ ಭಾವನಾತ್ಮಕ ವಿಚಾರಗಳು ಬಿಜೆಪಿಗೆ ವರವಾಗಿದ್ದವು. ಮೋದಿ ಅವರು ನೀಡಿದ್ದ ಕಪ್ಪು ಹಣ ವಾಪಸ್ ತರುವುದು, ಪ್ರತಿಯೊಬ್ಬರ ಅಕೌಂಟಿಗೆ ರೂ. 15 ಲಕ್ಷ ಹಣ ಹಾಕುವುದು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಯ ಅಚ್ಛೇ ದಿನ್ ಭರವಸೆಗಳು ಈಡೇರಿಲ್ಲ. ಆದರೆ, ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಗಾಳಿ ಬೀಸುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. 2013-18ರ ಅವಧಿಯಲ್ಲಿ ನಾವು ಕೈಗೊಂಡ ನೀರಾವರಿ ಯೋಜನೆಯಿಂದಾಗಿ ಅಂತರ್ಜಲ ಹೆಚ್ಚಾಗಿದ್ದು, ಇಂದು ರಾಜ್ಯಾದ್ಯಂತ ಭೀಕರ ಬರವಿದ್ದರೂ, ಜಿಲ್ಲೆಯಲ್ಲಿ ಅಷ್ಟೋಂದು ಪರಿಣಾಮ ಬೀರಿಲ್ಲ. ಕಾಂಗ್ರೆಸ್ ಸರಕಾರವಿದ್ಸಾಗ ತೈಲಬೆಲೆ ಕೇವಲ 10 ಪೈಸೆ ಹೆಚ್ಚಳವಾದರೂ ಬಿಜೆಪಿಯ ಸ್ಮೃತಿ ಇರಾನಿ ಮತ್ತು ಶೋಭಾ ಕರಂದ್ಲಾಜೆ ಸೇರಿದಂತೆ ನಾನಾ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ. 50 ಮತ್ತು ಅಡುಗೆ ಅನಿಲ ದರ ರೂ. 800 ರಷ್ಟು ಹೆಚ್ಚಾದರೂ ಅವರು ಮೌನ ವಹಿಸಿದ್ದಾರೆ. ಇವು ಬಿಜೆಪಿ ದೇಶದ ಜನರಿಗೆ ನೀಡಿರುವ ಅಚ್ಛೇ ದಿನ್ ಆಗಿವೆ ಎಂದು ಅವರು ಹೇಳಿದರು.
ಪ್ರಾಮಾಣಿಕರೆಂದು ಹೇಳುತ್ತಿದ್ದವರ ಮುಖವಾಡ ಚುನಾವಣೆ ಬಾಂಡ್ ಖರೀದಿಸಿದವರ ಹೆಸರು ಬಹಿರಂಗವಾದ ನಂತರ ಕಳಚಿ ಬಿದ್ದಿದೆ. ಐಟಿ, ಇಡಿ, ಸಿಬಿಐ ದಾಳಿಗೆ ಒಳಗಾದವರು ಚುನಾವಣೆ ಬಾಂಡ್ ಖರೀದಿ ಮಾಡಿರುವುದು ಈ ಸರಕಾರ ಭ್ರಷ್ಟಾಚಾರಕ್ಕೆ ಹೊಸ ಭಾಷೆ ಬರೆದಿರುವುದಕ್ಕೆ ಸಾಕ್ಷಿಯಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರದಲ್ಲಿ ಕಾಂಗ್ರೆಸ್ ಸ್ಥಾಪಿಸಿದ್ದ ಸಾರ್ವಜನಿಕ ಸಂಸ್ಥೆಗಳನ್ನು ಈಗಿನ ಕೇಂದ್ರ ಸರಕಾರ ಖಾಸಗೀಕರಣ ಮಾಡುತ್ತಿದೆ. ಇಬ್ಬರು ಮಾರಾಟಗಾರರು ಮತ್ತು ಇಬ್ಬರು ಖರೀದಿಗಾರರು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತ ಹಾಕಿದರೆ ಅದು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಎಸ್. ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ ಮತ್ತು ಎಂ. ಬಿ. ಪಾಟೀಲರಿ ಅವರಿಗೆ ಹಾಕಿದಂತೆ. ಅವರಿಗೆ ಮತ ಹಾಕಿ ನಮ್ಮ ಕೈ ಬಲಪಡಿಸಿ. ಈ ಮೂಲಕ ಭಾವೈಕ್ಯತೆ ಕೆಡಿಸಿ ಜನರ ಭಾವನೆ ಹಾಳು ಮಾಡುವವರಿಗೆ ಪಾಠ ಕಲಿಸಿ. ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಜಿಗಜಿಣಗಿ ಅವರ ಬದಲು ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡಲಿರುವ ಪ್ರೊ. ರಾಜು ಆಲಗೂರ ಅವರಿಗೆ ಮತಹಾಕಿ ಎಂದು ಎಂ. ಬಿ. ಪಾಟೀಲ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಐದು ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಸಚಿವ ಎಂ. ಬಿ. ಪಾಟೀಲ ಅವರು ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಿದ್ದಾರೆ. ಅಪೂರ್ಣ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನೀರು ಹರಿಸಿದ್ದಾರೆ. ಇವು ನನ್ನ ಗೆಲುವಿಗೆ ಕಾರಣವಾಗಲಿವೆ. ರಮೇಶ ಜಿಗಜಿಣಗಿ ಕಳೆದ 30 ವರ್ಷಗಳಿಂದ ಸಂಸದರಾಗಿ ಜಿಲ್ಲೆ ಮತ್ತು ರಾಜ್ಯದ ಸಮಸ್ಯೆಗಳ ಬಗ್ಗೆ ಎಂದೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಒಂದೂ ಕಾಮಗಾರಿ ಮಾಡಿಲ್ಲ. ಜನರನ್ನು ಭೇಟಿ ಮಾಡಿಲ್ಲ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿಲ್ಲ. ವಂದೇ ಭಾರತ ರೈಲು ಬಿಡಿಸಿಲ್ಲ. ನನಗೆ ಮತ ಹಾಕಿದರೆ ಲೋಕಸಭೆಯಲ್ಲಿ ವಿಜಯಪುರ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿದರು.
ಜಿ. ಪಂ. ಮಾಜಿ ಅಧ್ಯಕ್ಷರಾದ ವಿ. ಎಸ್. ಪಾಟೀಲ, ಬಸವರಾಜ ದೇಸಾಯಿ, ಮುಖಂಡರಾದ ಮೌಲಾಸಾಬ ಜಹಾಗಿರದಾರ, ಎಂ. ಕೆ. ಕುಲಕರ್ಣಿ, ಕುಮಾರ ದೇಸಾಯಿ, ರಫೀಕ ಖಾನೆ ಈ ಸಂದರ್ಭದಲ್ಲಿ ಮಾತನಾಡಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೃಷ್ಣಾಜಿ ಕುಲಕರ್ಣಿ, ಕಲ್ಲನಗೌಡ ಪಾಟೀಲ, ವಿ. ಎಚ್. ಬಿದರಿ, ಈರಣ್ಣ ಕೊಪ್ಪದ, ಆಶಾ ಕಟ್ಟಿಮನಿ, ಸುಮಿತ್ರಾ ಶಿರಬೂರ, ರೇಶ್ಮಾ ಮಲ್ಲಿಕಾರ್ಜುನ ಗಂಗೂರ, ಸುಖದೇವ ಕಟ್ಟಿಮನಿ, ರಮೇಶ ಜೈನಾಪೂರ, ಬಸವನಗೌಡ ಪಾಟೀಲ, ಕೌಸರ ನಿಯಾಜ ಅತ್ತಾರ, ಶೇಖು ಪೂಜಾರಿ, ಎಸ್. ಕೆ. ನಿಡೋಣಿ, ಬಸವರಾಜ ಮಲಕಗೊಂಡ, ಮಹಾದೇವ ಕಂತಿ, ಎಂ. ಎಂ. ಬಾಗವಾನ, ರೇಶ್ಮಾ, ಬಸಪ್ಪ ಬಾವಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಅಮರೇಶ ಹಾದಿಮನಿ ನಿರೂಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ

ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ

ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು

ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪರೀಕ್ಷಾ ನಿಯಮಗಳಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ನೂತನ ವ್ಯವಸ್ಥಾಪಕರಿಗೆ ಎಸ್‌ಸಿ-ಎಸ್‌ಟಿ ನೌಕರ ಸಂಘದಿಂದ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಯುವ ಪ್ರತಿಭೆಗಳ ಕನಸಿಗೆ ರೆಕ್ಕೆ ನೀಡುವ ಕೃತಕ ಬುದ್ದಿಮತ್ತೆ ವೇದಿಕೆಗಳು
    In (ರಾಜ್ಯ ) ಜಿಲ್ಲೆ
  • ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ ಸಂಸ್ಥೆ ಸದಾ ಬದ್ಧ
    In (ರಾಜ್ಯ ) ಜಿಲ್ಲೆ
  • ನೂತನ ಪದಾಧಿಕಾರಿಗಳ ಪದಗ್ರಹಣ ಯಶಸ್ವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ-ನಾರಾಯಣಪುರದಿಂದ ಕಾಲುವೆಗಳಿಗೆ ನೀರು
    In (ರಾಜ್ಯ ) ಜಿಲ್ಲೆ
  • ಜು.೨೯ ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮಾಜಿ ಸೈನಿಕರ ಮಕ್ಕಳಿಗೆ ಜನರಲ್ ಕೆ.ಎಸ್.ತಿಮ್ಮಯ್ಯ ನಗದು ಪ್ರಶಸ್ತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಿಷ್ಯವೇತನ, ಪುಸ್ತಕ ಅನುದಾನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಶಿಷ್ಯವೇತನಕ್ಕೆ ಮಾಜಿ ಸೈನಿಕರ ಮಕ್ಕಳಿಂದ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.