Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಶುಕ್ರವಾರ ಸಂಜೆ ಬೆಳೆ ಸಮೀಕ್ಷೆಗಾರರಿಗೆ ಟೀ ಶರ್ಟ್, ಕ್ಯಾಪ್ ವಿತರಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಮಾತನಾಡಿ, ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮಾಡುವ ಸಮೀಕ್ಷೆಗಾರರಿಗೆ ಕೃಷಿ ಇಲಾಖೆಯಿಂದ ಟೀ ಶರ್ಟ್, ಕ್ಯಾಪ್ ವಿತರಣೆ ಮಾಡಲಾಗುತ್ತಿದೆ. ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆಗಾರರನ್ನು ಗುರುತಿಸಲು ಇದು ನೆರವಾಗುತ್ತದೆ. ಎಲ್ಲ ಬೆಳೆ ಸಮೀಕ್ಷೆಗಾರರು ಸರಿಯಾಗಿ ಜಿಪಿಎಸ್ ಮಾಡುವ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಮಾಡಬೇಕೆಂದರು.ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್.ನಾಯಕಲಮಠ, ಕೃಷಿ ಇಲಾಖೆಯ ಚಿದಾನಂದ ಹಿರೇಮಠ, ಬಿ.ಎಸ್.ಸಕ್ರಿ, ಜಿ.ಬಿ.ಮೇದಕಿನಾಳ, ಆತ್ಮ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ, ಕಂದಾಯ ನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು ಇದ್ದರು.

Read More

ಬಸವನಬಾಗೇವಾಡಿ: ಪ್ರತಿಯೊಬ್ಬರೂ ತಮ್ಮ ಬದುಕನ್ನು ಹೇಗೆ ಸಾಗಿಸುತ್ತಾರೋ ಹಾಗೇ ಅವರ ಬದುಕು ಸಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಬದುಕನ್ನು ಉತ್ಸಾಹ,ಸಂತೋಷದಿಂದ ಸಾಗಿಸಬೇಕೆಂದು ತಾಳಿಕೋಟಿಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.ತಾಲೂಕಿನ ಅವಿಮುಕ್ತ ಸುಕ್ಷೇತ್ರ ಯರನಾಳ ವಿರಕ್ತಮಠದ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಗಳ ಜನ್ಮಸುವರ್ಣ ಮಹೋತ್ಸವದಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ತಾಯಂದಿರ ಉಡಿತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನು ನಮಗೆ ಒಳ್ಳೆಯ ಜೀವನವನ್ನು ಕೊಟ್ಟಿದ್ದಾನೆ. ಈ ಜೀವನದಲ್ಲಿ ಪ್ರತಿಯೊಬ್ಬರೂ ಎಲ್ಲರೊಂದಿಗೆ ಪ್ರೀತಿಯಿಂದ ಇರುವ ಮೂಲಕ ಸುಂದರವಾದ ಜೀವನ ಕಳೆಯಬೇಕು. ರಾಧಾಕೃಷ್ಣನ್ ಅವರು ಹೇಳುವಂತೆ ಜೀವನ ಒಂದು ಹಾಡು, ಆಟ, ಉತ್ಸವ. ಈ ಜೀವನವನ್ನು ಹಾಡುತ್ತಾ, ಆಡುತ್ತಾ, ಉತ್ಸಾಹದಿಂದ ಸಾಗಿಸಬೇಕೆಂದರು.ಜೀವನದಲ್ಲಿ ಯಾವುದು ಅಸಾಧ್ಯವೆಂಬುವದು ಇಲ್ಲ. ಜೀವನದಲ್ಲಿ ಸಾಧ್ಯವಾಗಿಸುವ ಶಕ್ತಿ ಗುರುವಿಗಿದೆ. ಪ್ರತಿಯೊಬ್ಬರೂ ಗುರುವಿನ ಕೃಪೆಗೆ ಸದಾ ಪಾತ್ರರಾಗಬೇಕು. ಶ್ರೀಮಠದ ಸಂಗನಬಸವ ಸ್ವಾಮೀಜಿಯವರು ತಮ್ಮ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯ ಮಾಡುವ ಮೂಲಕ ಭಕ್ತರ ಉದ್ಧಾರಕ್ಕೆ…

Read More

ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾಡಳಿತದಿಂದ ಶನಿವಾರ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ದೇವರ ದಾಸಿಮಯ್ಯನವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿ, ಬಸವಣ್ಣನವರ ಕಾಲದ ಪೂರ್ವದಲ್ಲಿ ೧೧ ನೇ ಶತಮಾನದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಕೀರ್ತಿ ಆದ್ಯ ವಚನಕಾರ ದೇವರ ದಾಸಿಮಯ್ಯನವರಿಗೆ ಸಲ್ಲುತದೆ. ಅಂತಹ ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸುಂದರ ಮಾಡಿಕೊಳ್ಳಬೇಕೆಂದರು.ನಿವೃತ್ತ ಶಿಕ್ಷಕ ಎಸ್.ಕೆ.ಸೋಮನಕಟ್ಟಿ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ, ಡಾ.ಶ್ರೀಶೈಲ ಕೂಡಗಿ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ ಅವರು ದೇವರ ದಾಸಿಮಯ್ಯನವರ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಶಿವಪುತ್ರ ಅಂಕದ, ಎಸ್.ಬಿ.ಚವ್ಹಾಣ, ಬಸವರಾಜ ನಾಯ್ಕೋಡಿ, ವಿಲಾಸ ಜಾಡರ, ಬಸವರಾಜ ಪಟ್ಟಣದ, ಸೋಮು ಗೋಟೆದ, ಐ.ಜಿ.ಬೆಕಿನಾಳ ಇತರರು ಇದ್ದರು. ಜಿಲ್ಲಾ ಕುರುಹಿನ ಶೆಟ್ಟಿ ಸಮಾಜ ನಿರ್ದೇಶಕ ಶ್ರೀಶೈಲ ಶಿರಗುಪ್ಪಿ ನಿರೂಪಿಸಿ, ವಂದಿಸಿದರು.

Read More

ಬಸವನಬಾಗೇವಾಡಿ: ಜಗತ್ತಿನ ಯಾವ ಧರ್ಮಪರಂಪರೆಯಲ್ಲಿ ಸಿಗದೇ ಇರುವ ಅಮೂಲ್ಯ ತತ್ವಗಳಾದ ಕಾಯಕ-ದಾಸೋಹ-ಇಷ್ಟಲಿಂಗ ಪೂಜೆ ಶರಣಧರ್ಮದಲ್ಲಿದೆ. ಶರಣಧರ್ಮ ಪರಂಪರೆ ನೀಡಿರುವ ಮೌಲ್ಯಗಳನ್ನು ಜಗತ್ತು ಅಳವಡಿಸಿಕೊಂಡರೆ ಪ್ರಗತಿಯಾಗಲು ಸಾಧ್ಯ ಎಂದು ಮುದಗಲ್ದ ಕಲ್ಯಾಣ ಆಶ್ರಮ, ಮಹಾಂತೇಶ್ವರಮಠದ ಮಹಾಂತ ಸ್ವಾಮೀಜಿ ಹೇಳಿದರು.ತಾಲೂಕಿನ ಯರನಾಳ ವಿರಕ್ತಮಠದಲ್ಲಿ ಶುಕ್ರವಾರ ಸಂಜೆ ಕರ್ತೃ ಜಗದ್ಗುರು ಪಂಪಾಪತಿ ಶಿವಯೋಗಿಗಳ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಯವರ ಜನ್ಮಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಮನುಷ್ಯನಿಗೆ ಅನೇಕ ದಾಹಗಳಿವೆ. ಶರಣರು ಈ ದಾಹಕ್ಕೆ ಸೋ ಎಂಬ ಶಬ್ಧ ಸೇರಿಸಿ ವಿಶಾಲವಾದ ದಾಸೋಹದ ಕಲ್ಪನೆ ನೀಡಿದ್ದಾರೆ. ದಾಸೋಹವೆಂದರೆ ಕೇವಲ ಶ್ರೀಮಠಗಳಿಗೆ ಸೀಮಿತವಲ್ಲ. ಇಡೀ ವಿಶ್ವವನ್ನು ಗಮನದಲ್ಲಿಕೊಂಡು ವಿಶಾಲಾರ್ಥದಲ್ಲಿ ಶರಣರು ದಾಸೋಹದ ಪರಿಕಲ್ಪನೆ ನೀಡಿದ್ದಾರೆ. ಈ ತತ್ವವನ್ನು ಅಳವಡಿಸಿಕೊಂಡರೆ ಇಡೀ ಜಗತ್ತು ಸಮೃದ್ಧಿಯಾಗುತ್ತದೆ. ಬಸವಾದಿ ಶರಣರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳದೇ ಹೋದರೆ ಜಗತ್ತು ಅಭಿವೃದ್ಧಿಯಾಗುವದಿಲ್ಲ. ಇಂದು ಎಲ್ಲರೂ ತಮ್ಮ ಸ್ವಾರ್ಥ ಜೀವನದಿಂದಾಗಿ ಮನುಷ್ಯತ್ವ ಕಳೆದುಕೊಳ್ಳುತ್ತಿರುವುದು ವಿಷಾದಕರ ಸಂಗತಿ. ಎಲ್ಲರೂ ಶರಣ ಧರ್ಮವನ್ನು…

Read More

ಮುದ್ದೇಬಿಹಾಳ: ಬಿಸಿಲಿನ ಧಗೆಯಿಂದ ಬೇಸತ್ತ ಪಟ್ಟಣದ ಜನತೆಗೆ ಮಳೆರಾಯ ಶನಿವಾರ ತಂಪೆರೆದಿದ್ದು, ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಕಳೆದ ಕೆಲ ದಿನಗಳಿಂದ ಬೆಳಿಗ್ಗೆ ೧೧ ಗಂಟೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು ಆವರಿಸಿ ಸಂಜೆಯಾದರೂ ಸಾರ್ವಜನಿಕರು ಹೊರಗಡೆ ತಿರುಗಾಡಲು ಭಯ ಪಡುವಂತಾಗಿತ್ತು. ಗರಿಷ್ಟ ತಾಪಮಾನ ೪೨ ರವರಗೂ ಏರಿದ್ದು ಈ ಬಿಸಿಲಿಂದ ಮುಕ್ತಿ ಯಾವಾಗಪ್ಪಾ ಎನ್ನುತ್ತಿದ್ದವರಿಗೆ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿ ಸಿಕ್ಕಿದೆ.

Read More

ವಿಜಯಪುರ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತದ ವತಿಯಿಂದ ಶನಿವಾರ ಸರಳವಾಗಿ ದೇವರದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸರಳ ಜಯಂತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಶೀಲ್ದಾರರಾದ ಕವಿತಾ ಅವರು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ವಿವಿಧ ಸಮಾಜದ ಬಿ.ಎಂ.ನೂಲವಿ, ಎ.ಬಿ.ಕೋಷ್ಠಿ, ಎ.ಬಿ.ಅಂಕದ, ಆನಂದ ಹುಲಮನಿ, ಜವಳಗಿ ಎಂ.ಸಿ., ನಾಗಪ್ಪ ಭಾವಿಕಟ್ಟಿ, ಸಂತೋಷ ಬಂಡೆ, ಪಿ.ಎಂ.ಬಲ್ಲಾಳ, ಶ್ರೀಮತಿ ವಿದ್ಯಾವತಿ ಅಂಕಲಗಿ, ಬಸವರಾಜ ಒಂಟಗೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More

ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರದ ಶಾಸ್ತ್ರಿ ನಗರದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಯಾದ ಕುಮಾರ ವೇದಾಂತ ನಾವಿ ಪ್ರಸಕ್ತ ವರ್ಷ ಜರುಗಿದ ದ್ವೀತಿಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ವಿದ್ಯಾರ್ಥಿಯ ಸಾಧನೆಗೆ ಜಿಲ್ಲಾ ಅಧಿಕಾರಿಗಳು ಹಾಗೂ ತಾಲೂಕಾ ಕಲ್ಯಾಣಾಧಿಕಾರಿಗಳು, ನಿಲಯ ಮೇಲ್ವಿಚಾರಕರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಪ್ರಸಕ್ತ ವರ್ಷ ಜರುಗಿದ ದ್ವೀತಿಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಾಲಕರ ಬಾಲಮಂದಿರ ಹಿರಿಯ ಹಾಗೂ ಸರಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಮಾರಿ ಭವ್ಯಾ ಹಳ್ಳಿ ವಿಜ್ಞಾನ ವಿಭಾಗದಲ್ಲಿ ಶೇ.೮೨, ಕುಮಾರಿ ನಾಗರತ್ನ ನಾಗರಾಳ ವಾಣಿಜ್ಯ ವಿಭಾಗದಲ್ಲಿ ಶೇ.೮೭.೬೬, ಕುಮಾರಿ ಮೀನಾಕ್ಷಿ ಸುಣಗಾರ ವಾಣಿಜ್ಯ ವಿಭಾಗದಲ್ಲಿ ಶೇ.೬೮.೩೩ ಹಾಗೂ ಕುಮಾರಿ ಸಿದ್ದಮ್ಮ ಪಾಟೀಲ ಕಲಾ ವಿಭಾಗದಲ್ಲಿ ಶೇ.೬೬.೮೩ ಅಂಕ ಪಡೆದಿದ್ದು ಅದರಂತೆ ಸರಕಾರಿ ಹಿರಿಯ ಬಾಲಕರ ಬಾಲಮಂದಿರದ ೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕುಮಾರ ಗಣೇಶ ಲಮಾಣಿ ಕಲಾ ವಿಭಾಗದಲ್ಲಿ ಶೇ.೭೭, ನಿಂಗರಾಜ ಜಾಲವಾದಿ ಶೇ.೭೦.೧೭, ಅಲ್ಲಪ್ಪ ಮನಗೂಳಿ ಶೇ.೬೯, ಆಕಾಶ ಪಾರೆ ಶೇ.೬೩.೮೩, ರಫೀಕ ಭಜಂತ್ರಿ ಶೇ.೬೧.೧೭, ಬಸವರಾಜ ಕುಂಬಾರ ಶೇ.೫೯.೫೦, ತನ್ವೀರ ಕೊರಬು ಶೇ.೫೬.೮೩ ಹಾಗೂ…

Read More

ಡಾ.ಪೂರ್ಣಿಮಾ ಕೆ ಧಾಮಣ್ಣವರಉಪನ್ಯಾಸಕರು, ಕನ್ನಡ ಅಧ್ಯಯನ ವಿಭಾಗ, ರಾಣಿ ಚನ್ನಮ್ಮ ವಿವಿ, ಡಾ ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಿಜಯಪುರ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಬ್ಬರು ಮಹಾನಶಕ್ತಿ. ಜ್ಞಾನದ ಶಿಖರವನ್ನೇರಿ ಕುಳಿತ ಜ್ಞಾನಸೂರ್ಯ, ಕಠಿಣ ಪರಿಶ್ರಮ ಮತ್ತು ಸ್ವ ಸಾಮರ್ಥ್ಯದಿಂದ ಈ ದೇಶದ ಅಗ್ರಗಣ್ಯ ರಾಷ್ಟ್ರನಾಯಕನಾಗಿ ಶೋಷಣೆಗೊಳಪಟ್ಟಿದ ಮೇರು ಪುರುಷ ಡಾ ಅಂಬೇಡ್ಕರ್.೬೦ಕ್ಕಿಂತ ಹೆಚ್ಚು ವಿಶ್ವದ ಎಲ್ಲ ಸಂವಿಧಾನವನ್ನು ಅಧ್ಯಯನ ಮಾಡಿ ಜೀರ್ಣಿಸಿಕೊಂಡವರು ಅಂಬೇಡ್ಕರ್ ಅವರು. ಇಂದು ಪ್ರಪಂಚಕ್ಕೆ ಮಾದರಿಯಾಗಿರುವ ವಿಶ್ವವಿಖ್ಯಾತ ಭಾರತ ಸಂವಿಧಾನವನ್ನು ರಚಿಸುವುದರ ಮೂಲಕ ಡಾ. ಅಂಬೇಡ್ಕರ್ ಯಾರಿಂದಲೂ ಬೆಲೆ ಕಟ್ಟಲಾಗದ ಹಾಗೂ ಈ ಪ್ರಜಾಪ್ರಭುತ್ವ ವ್ಯವಸ್ಥೆ ಇರುವವರೆಗೂ ಶಾಶ್ವತವಾಗಿ ಉಳಿಯುವಂತಹ ಮಹತ್ಕಾರ್ಯ ಮಾಡಿದ್ದಾರೆ.ಪ್ರಸ್ತುತ ವಿಶ್ವದಲ್ಲಿ ನಮ್ಮ ಭಾರತ ದೇಶಕ್ಕೆ ವಿಶೇಷ ಗೌರವ, ಘನತೆ, ಕೀರ್ತಿ ಲಭಿಸುತ್ತಿರುವುದೇ ನಮ್ಮ ಸಂವಿಧಾನ ಮತ್ತು ಸಂವಿಧಾನದ ಮೂಲಕ ನಿರ್ಮಾಣಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಿಂದಾಗಿ ಎಂಬ ವಾಸ್ತವವನ್ನು ಹೇಳಿಕೊಳ್ಳಲು ನಮ್ಮಗೆಲ್ಲ ಹೆಮ್ಮೆಯ ವಿಷಯ.ಕೊಲಂಬಿಯಾ ವಿಶ್ವವಿದ್ಯಾಲಯ ಅಮೇರಿಕಾದಲ್ಲಿ ಡಾ. ಅಂಬೇಡ್ಕರ್…

Read More

ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ವಿಜಯಪುರ: ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡುವ ಕಾರ್ಯವಾಗಬೇಕು ಎಂದು ವಿಜಯಪುರ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕರಾಗಿರುವ ಐ ಆರ್ ಎಸ್ ಅಧಿಕಾರಿ ಅನುಪಕುಮಾರ ಸೂಚಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರದಂದು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಚುನಾವಣೆಯಾದರು ಕೂಡ ನಿರ್ಲಕ್ಷಿಸುವಂತಿಲ್ಲ, ವಿದಾನ ಸಭೆ ಚುನಾವಣೆಯಂತೆ ಲೋಕಸಭಾ ಚುನಾವಣೆಯನ್ನು ಕೂಡಾ ಅಷ್ಟೇ ಗಂಬೀರವಾಗಿ ಪರಿಗಣಿಸಿ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಬ್ಯಾಂಕುಗಳಲ್ಲಿ ಹೊಸ ಖಾತೆಗಳನ್ನು ತೆರೆಯಲಾಗುತ್ತಿದೆಯಾ ಎಂದು ಪರಿಶೀಲಿಸಿ ಮತ್ತು ಆ ಖಾತೆಗಳಿಗೆ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆಯಾಗುತ್ತಿದೆಯಾ ಎಂಬುದನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು, ಚೆಕ್ ಪೋಸ್ಟಗಳಲ್ಲಿ ಕಾಟಾಚಾರಕ್ಕೆ ಮಾಡಿದಂತೆ ತಪಾಸಣೆಯಾಗಬಾರದು, ಕಟ್ಟು ನಿಟ್ಟಾಗಿ ಪರಿಶೀಲಿಸುವದರೊಂದಿಗೆ ಸಾರ್ವಜನಿಕರಿಗೆ ತೊಂದೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.ಮದ್ಯದಂಗಡಿಗಳಲ್ಲಿ ನಿಗದಿಪಡಿಸಿದಕಿಂತ ಹೆಚ್ಚಿನ ಮಟ್ಟದ ಸಾರಾಯಿ ಮಾರಾಟವಾದಲ್ಲಿ ತಕ್ಷಣ ಗಮನಕ್ಕೆ…

Read More