ವಿಜಯಪುರ: ಪ್ರಸಕ್ತ ವರ್ಷ ಜರುಗಿದ ದ್ವೀತಿಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಬಾಲಕರ ಬಾಲಮಂದಿರ ಹಿರಿಯ ಹಾಗೂ ಸರಕಾರಿ ಬಾಲಕಿಯರ ಬಾಲಮಂದಿರದ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕುಮಾರಿ ಭವ್ಯಾ ಹಳ್ಳಿ ವಿಜ್ಞಾನ ವಿಭಾಗದಲ್ಲಿ ಶೇ.೮೨, ಕುಮಾರಿ ನಾಗರತ್ನ ನಾಗರಾಳ ವಾಣಿಜ್ಯ ವಿಭಾಗದಲ್ಲಿ ಶೇ.೮೭.೬೬, ಕುಮಾರಿ ಮೀನಾಕ್ಷಿ ಸುಣಗಾರ ವಾಣಿಜ್ಯ ವಿಭಾಗದಲ್ಲಿ ಶೇ.೬೮.೩೩ ಹಾಗೂ ಕುಮಾರಿ ಸಿದ್ದಮ್ಮ ಪಾಟೀಲ ಕಲಾ ವಿಭಾಗದಲ್ಲಿ ಶೇ.೬೬.೮೩ ಅಂಕ ಪಡೆದಿದ್ದು ಅದರಂತೆ ಸರಕಾರಿ ಹಿರಿಯ ಬಾಲಕರ ಬಾಲಮಂದಿರದ ೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕುಮಾರ ಗಣೇಶ ಲಮಾಣಿ ಕಲಾ ವಿಭಾಗದಲ್ಲಿ ಶೇ.೭೭, ನಿಂಗರಾಜ ಜಾಲವಾದಿ ಶೇ.೭೦.೧೭, ಅಲ್ಲಪ್ಪ ಮನಗೂಳಿ ಶೇ.೬೯, ಆಕಾಶ ಪಾರೆ ಶೇ.೬೩.೮೩, ರಫೀಕ ಭಜಂತ್ರಿ ಶೇ.೬೧.೧೭, ಬಸವರಾಜ ಕುಂಬಾರ ಶೇ.೫೯.೫೦, ತನ್ವೀರ ಕೊರಬು ಶೇ.೫೬.೮೩ ಹಾಗೂ ಕರೆಪ್ಪ ಬಿಸನಾಳ ವಾಣಿಜ್ಯ ವಿಭಾಗದಲ್ಲಿ ಶೇ.೭೪ ರಷ್ಟು ಅಂಕ ಪಡೆಯುವ ಮೂಲಕ ಬಾಲಮಂದಿರದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದು, ಸಂಸ್ಥೆಗೆ ಕೀರ್ತಿ ತಂದಿದ್ದು, ಇವರ ಸಾಧನೆಗೆ ಸಂಸ್ಥೆಯ ಅಧೀಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
