Author: editor.udayarashmi@gmail.com

ಸಿಂದಗಿ: ಮಡಿವಾಳ ಸಮುದಾಯದ ಮಹಾನ್ ಚೇತನ ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕವಾಗಿದೆ ಎಂದು ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ವಚನಕಾರ ಮಡಿವಾಳ ಮಾಚಿದೇವರ ಜಯಂತಿ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಚಿದೇವರು ಅನುಭವ ಮಂಟಪದಲ್ಲಿ ತಮ್ಮ ಅಮೂಲ್ಯ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪ್ಪಿಟ್ಟಿದ್ದರು ಎಂದರು.ಈ ವೇಳೆ ಮಡಿವಾಳ ಮಾಚಿದೇವರ ವೃತ್ತ ನಿರ್ಮಾಣ ಸಲುವಾಗಿ ಸಿಂದಗಿ ನಗರದಲ್ಲಿ ಜಾಗವನ್ನು ಒದಗಿಸಿ ಕೊಡುವಂತೆ ಸಮಾಜದ ಮುಖಂಡರು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಶೀಲ್ದಾರ್ ಐ.ಜೆ.ಬಳಗಾನೂರ, ಕಂದಾಯ ನಿರೀಕ್ಷಕ ಐ.ಎಂ. ಮಕಂದಾರ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಅಗಸರ, ಉಪಾಧ್ಯಕ್ಷ ಶಂಕರ ಅಗಸರ, ಗುರು ಅಗಸರ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ್, ಬಸವರಾಜ ಅಗಸರ, ದೊಡ್ಡಪ್ಪ ಅಗಸರ, ಸಿದ್ದು ಅಗಸರ, ಮಡಿವಾಳಪ್ಪ ಮಡಿವಾಳರ, ಮಹಾಂತೇಶ ಅಗಸರ, ಮಲ್ಲಿಕಾರ್ಜುನ ಅಗಸರ, ಅಶೋಕ ಅಗಸರ, ಪ್ರಜ್ವಲ ಅಗಸರ…

Read More

ಫೆ.೫ರಂದು ಸಿಂದಗಿಯಲ್ಲಿ ಜರುಗಲಿರುವ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಿಂದಗಿ: ಪಟ್ಟಣದ ಎಚ್.ಜಿ ಪ್ರೌಢಶಾಲೆ ಆವರಣದಲ್ಲಿ ಫೆ.೫ರಂದು ಜರುಗಲಿರುವ ಸಿಂದಗಿ ತಾಲೂಕು ೬ನೇ ಕನ್ನಡ ಸಾಹಿತ್ಯಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಉಪನ್ಯಾಸಕ, ಮಕ್ಕಳ ಸಾಹಿತಿ ರಾ.ಸಿ, ವಾಡೇದ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಮಕ್ಕಳ ಸಾಹಿತಿ ರಾ.ಸಿ, ವಾಡೇದ ಕನ್ನಡ ವಿಷಯದಲ್ಲಿ ಎಂಎ ಪದವೀಧರರು. ಅವರು ಸ್ಥಳೀಯ ಅಂಜುಮನ್ ಪಿಯು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೨ ವರ್ಷ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಉಪನ್ಯಾಸವಾದರೇ ಪ್ರವೃತ್ತಿ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಅವರು ಸುಂದರ ಚಂದಿರ, ಮಾಯದ ಕುದರೆ ಮತ್ತು ಇತರ ನಾಟಕಗಳು, ಕೈ ತೋಟ, ಚಿಣ್ಣರ ಆಟ, ಬೆಳಕು, ಧಡಂ ಧುಡಕಿ, ತುತ್ತೂರಿ, ಸ್ನೇಹ ಸಿರಿ, ಅಜ್ಜಿಯ ಆಸೆ, ಟಂಟಂ ಗಾಡಿ, ಜಾನಪದ ಕಥೆಗಳು ಹೀಗೆ ಮಕ್ಕಳ ಕೃತಿಗಳು ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ಚಿಂತನ ವೇದಿಕೆ ಅಧ್ಯಕ್ಷರಾಗಿ, ಚಲನಚಿತ್ರ ಬೆಳ್ಳಿ ಅಡಾಡೆಮಿ ವಿಜಯಪುರದ ಸದಸ್ಯರಾಗಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರಾಗಿ,…

Read More

ವಿಜಯಪುರ: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದ ಅನುಭವ ಮಂಟಪದ ೧೨ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು ಆದಿಸೆಯಲ್ಲಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ ಮಡಿವಾಳ ಮಾಚಿದೇವ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಗುರುವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶರಣರು ಅಂದು ಹಾಕಿಕೊಟ್ಟ ಹಾಗೂ ತಿಳಿಸಿದ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಅಂದಿನ ಬಸವಾದಿ ಶರಣರು ಕಾಯಕ ತತ್ವವನ್ನು ಅನುಸರಿಸಬೇಕು ಹಾಗೂ ಅವರ ಜೀವನ ಆದರ್ಶಗಳನ್ನು ಅಳವಡಿಕೊಳ್ಳಬೇಕು ಎಂದು ಅವರು ಹೇಳಿದರು.ಅಪರ ಪೊಲೀಸ್ ವರಿಷ್ಟಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, ಶರಣರು ೧೨ ನೇ ಶತಮಾನದಲ್ಲಿ ಸುಮರು ೭೭೦ ಶಿವಶರಣರು ಒಂದೆಡೆ ಸೇರಿ ಅನುಭವ ಮಂಟಪದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಏಕತೆಗಾಗಿ ಚಿಂತನ-ಮಂಥನ ಹಾಗೂ ಗೋಷ್ಠಿಗಳನ್ನು ನಡೆಸುತ್ತಿದ್ದರು. ಅಂದಿನ ವಚನಗಳು ಇಂದು ನಮ್ಮ ಜೀವನೋಪಾಯ ನಡೆಸಲು ಒಂದು…

Read More

ವಿಜಯಪುರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸರ್ವೇ ಜನ ಸುಖಿನೋ ಭವಂತು: ಎಂಬ ಉಕ್ತಿಗೆ ಉದಾಹರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೈತ ಕಲ್ಯಾಣ, ಕಾರ್ಮಿಕ ಸಬಲೀಕರಣ, ಮಹಿಳಾ ಸಬಲೀಕರಣ ಹೀಗೆ ಎಲ್ಲರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ‌. ಜನಪ್ರೀಯತೆಗಿಂತ ಜನಪರಕ್ಕೆ ಆದ್ಯತೆ ದೊರಕಿದೆ.ಜನಸಾಮಾನ್ಯರಿಗೆ ಯಾವುದೇ ಆದಾಯ ತೆರಿಗೆ ಹೊರೆ ಇಲ್ಲ,ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ ವಿಸ್ತರಣೆ ಮಾಡುವ ನಿರ್ಧಾರ, ಲಕ್ಷಾಧಿಪತಿ ದೀದಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಕಾರಜೋಳ ಹೇಳಿದ್ದಾರೆ.

Read More

’ವೀಣಾಂತರಂಗ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಎಲ್ಲೋ ಓದಿದ ನೆನಪು…ಓರ್ವ ವೃದ್ಧ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ಎದ್ದು ಕುಳಿತುಕೊಳ್ಳುವ ತ್ರಾಣವು ಇರಲಿಲ್ಲ. ಆತನ ಮೆದುಳಿಗೆ ಹಾನಿಯಾಗಿದ್ದು ನೆನಪಿನ ಶಕ್ತಿ ಕಳೆದು ಹೋಗಿದೆ, ಅದು ಮರುಕಳಿಸುವ ಸಾಧ್ಯತೆ ಬಹುತೇಕ ಕಮ್ಮಿ ಎಂದು ವೈದ್ಯರು ಹೇಳಿದ್ದರು. ಆದರೆ ಮನೆಯ ಜನ ತಮ್ಮ ಭರವಸೆ ಕಳೆದುಕೊಂಡಿರಲಿಲ್ಲ. ಮರುದಿನ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಆಸ್ಪತ್ರೆಯಲ್ಲಿ ಆತನನ್ನಿರಿಸಿದ ಕೋಣೆಯಲ್ಲಿ ಆತನ ಮನೆಯಲ್ಲಿ ದೈನಂದಿನ ಪೂಜಾ ಕ್ರಿಯೆಗಳು ಜರುಗುವಂತೆ ಜೋರಾಗಿ ಗಂಟೆ ಜಾಗಟೆಗಳ ಶಬ್ದ ಸುಗಂಧಭರಿತ ಪುಷ್ಪಗಳ ಸುವಾಸನೆ ತುಂಬಿಹೋಯಿತು. ಗಂಟೆಯ ಶಬ್ದದಿಂದ ಎಚ್ಚೆತ್ತ ಆ ವ್ಯಕ್ತಿ ತನ್ನ ಪತ್ನಿಯನ್ನು ಕುರಿತು ಅಯ್ಯೋ!! ಬೆಳಗಾಗಿ ಹೋಯಿತೇ? ನನ್ನನ್ನೇಕೆ ಎಬ್ಬಿಸಲಿಲ್ಲ, ಸ್ನಾನ ಪೂಜೆಗೆ ಹೊತ್ತಾಯಿತು ಟವೆಲ್ಲು ಕೊಡು ಎಂದು ಪತ್ನಿಗೆ ಹೇಳುತ್ತಾ ಎದ್ದು ಹೊರಟರು. ಮುಂದೆ ವೈದ್ಯಕೀಯ ಜಗತ್ತಿಗೆ ಸವಾಲಾಗುವಂತೆ ಆ ವ್ಯಕ್ತಿ ತನ್ನ ತೊಂದರೆಯಿಂದ ಪಾರಾದನು…. ಇದು ಒಬ್ಬ ವ್ಯಕ್ತಿಯ ನೆನಪಿನ ಕೋಶಗಳಲ್ಲಿ ಉಳಿದುಕೊಳ್ಳಬಹುದಾದ ಅತ್ಯುತ್ತಮ ಅಭ್ಯಾಸ.…

Read More

ವಿಜಯಪುರ: 2047ರ ವೇಳೆಗೆ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ಡಾ.ಗೌತಮ್.ಆರ್‌.ಚೌಧರಿ ಹೇಳಿದ್ದಾರೆ.ಕಳೆದ 10 ವರ್ಷಗಳಲ್ಲಿ ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಮಹಿಳೆಯರಿಗೆ, ರೈತರಿಗೆ, ಪ್ರವಾಸೋದ್ಯಮಕ್ಕೆ, ರೈಲು ಅಭಿವೃದ್ಧಿಗೆ ಹಾಗೂ ಎಂಎಸ್‌‌ಎಂಇ ಉದ್ಯಮಗಳಿಗೆ, ಪರಿಸರಕ್ಕೆ ಸರ್ಕಾರ ಆದ್ಯತೆ ಕೊಟ್ಟಿರುವುದು ಇಡೀ ದೇಶದ ಜನರು ಖುಷಿ ಪಡುವ ವಿಚಾರ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಮಂಡಿಸಿರುವ ಈ ಬಜೆಟ್ ಎಲ್ಲ ವರ್ಗದವರಿಗೂ ಅನಕೂಲಕರವಾಗಿದೆ ಎಂದು ಡಾ.ಗೌತಮ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.

Read More

ಚಡಚಣ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಮಾರ್ಗದರ್ಶನ ಬಹಳ ಅವಶ್ಯಕ. ಶಿಕ್ಷಕರು ಪಠ್ಯಪುಸ್ತಕದ ಜ್ಞಾನದ ಜೊತೆಗೆ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎಸ್.ಹಾವಿನಾಳ ಹೇಳಿದರು .ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಕಮಲ್‌ ಪಬ್ಲಿಕ್‌ ಶಾಲೆಯ 20ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿಶತಮಾನೋತ್ಸವದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಸಂಸ್ಥೆಗಳು ಎಂದರೆ ಕೇವಲ ಕಟ್ಟಡವಲ್ಲ. ಅಲ್ಲಿ ಕಲಿಸುವ ವಿಧಾನ, ಆಡಳಿತ ಮಂಡಳಿಯ ಇಚ್ಛಾಶಕ್ತಿಯಿಂದ ಮಕ್ಕಳು ಗುಣಾತ್ಮಕ ಶಿಕ್ಷಣವನ್ನ ಪಡೆದು ಸವಾರ್ಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ಶೈಕ್ಷಣಿಕ ಉನ್ನತಿಯಲ್ಲಿ ದೇಶದ ಪ್ರಗತಿ ಅಡಗಿರುತ್ತದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅವಶ್ಯಕ ಎಂದರು.ಪ್ರಾಸ್ಥಾವಿಕವಾಗಿ ಮುಖ್ಯ ಶಿಕ್ಷಕ ಎಸ್‌ ಎಸ್‌ ಪಾಟೀಲ ಮಾತನಾಡಿ, 2004 ರಲ್ಲಿ 9 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆಯಲ್ಲಿ ಸರ್ವೋತೋಮುಖ ಬೆಳವಣಿಗೆ ಹಾಗೂ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ…

Read More

ವಿಜಯಪುರ: ಹೊಸ ಸಂಸತ್ ಭವನದಲ್ಲಿ ಮಂಡನೆಯಾಗಿರುವ ಬಜೆಟ್ ನಲ್ಲಿ ಹೊಸತನವನ್ನು ನಿರೀಕ್ಷಿಸಿದ್ದ ಸಮಸ್ತ ಭಾರತೀಯರಿಗೆ ನಿರಾಸೆಯಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದರು.ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಚುನಾವಣೆ ಬಿತ್ತಿ ಪತ್ರದಂತೆ ಈ ಬಜೆಟ್ ಭಾಸವಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಕಿವಿಗೆ ಇಂಪಾದ ಸೊಗಸಾದ ಇಂಗ್ಲಿಷ್ನಲ್ಲಿ ಬಜೆಟ್ಟನ್ನು ಮಂಡಿಸಿದ್ದಾರೆ. ಅದು ಕೇಳಲು ಇಂಪಾಗಿದೆ ಹೊರತು ಜನರ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗಿರುವುದು ವಿಫಲತೆಯತ್ತಲೇ ಸಾಗಿರುವುದು ದೇಶದ ಜನತೆಯ ದೌರ್ಭಾಗ್ಯ ಎಂದು ಸಂಗಮೇಶ ಬಬಲೇಶ್ವರ ವ್ಯಂಗ್ಯವಾಡಿದ್ದಾರೆ.

Read More

ಆಲಮಟ್ಟಿ: ಫೆ.3 ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಲಮಟ್ಟಿಗೆ ಆಗಮಿಸಲಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.ಶನಿವಾರ ಕಲಬುರಗಿಯಿಂದ ರಸ್ತೆ ಮೂಲಕ ಮಧ್ಯಾಹ್ನ 12 ಕ್ಕೆ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿಯ ಸಂಗನಬಸವ ಸ್ವಾಮೀಜಿಗಳ ಬೆಳ್ಳಿ ಮಹೋತ್ಸವ ಅಂಗವಾಗಿ ಮನಗೂಳಿ ಕಲ್ಯಾಣ ಮಂಟಪದಲ್ಲಿ ನೂತನ ರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಅಲ್ಲಿಂದ ಮಧ್ಯಾಹ್ನ 3 ಕ್ಕೆ ಆಲಮಟ್ಟಿಗೆ ಆಗಮಿಸುವ ಅವರು, ಇಲ್ಲಿಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಕೆಬಿಜೆಎನ್ ಎಲ್ ಅಧಿಕಾರಿಗಳ ಜತೆ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಂಜೆ 6 ಕ್ಕೆ ಆಲಮಟ್ಟಿಯಿಂದ ಹುಬ್ಬಳ್ಳಿಗೆ ರಸ್ತೆ ಮೂಲಕ ತೆರಳಿ ಅಲ್ಲಿಂದ ಬೆಂಗಳೂರಿಗೆ ತೆರಳಲಿದ್ದಾರೆ.

Read More

ಆಲಮಟ್ಟಿ: ಸಮೀಪದ ಚಿಮ್ಮಲಗಿಯ ಅರಳೆಲೆಕಟ್ಟಿಮನಿ ಹಿರೇಮಠದ ಲಿಂಗೈಕ್ಯ ನೀಲಕಂಠ ಸ್ವಾಮೀಜಿ ಅವರ ಪ್ರಥಮ ಪುಣ್ಯ ಸ್ಮರಣೆ, ಸಿದ್ಧರೇಣುಕ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮ ಗುರುವಾರ ಜರುಗಿತು.ಬೆಳಿಗ್ಗೆಯಿಂದಲೇ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆಯ ನಂತರ, ಗ್ರಾಮದ ತುಂಬೆಲ್ಲಾ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ಜರುಗಿತು.ನಂತರ ನಾಲ್ಕು ಜತೆ ಸಾಮೂಹಿಕ ವಿವಾಹಗಳು ಜರುಗಿದವು.ಬಸನಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಬದುಕಿನುದ್ದಕ್ಕೂ ಸವಾಲುಗಳನ್ನು ಎದುರಿಸಿ ಸತ್ಯ ಸಂಸ್ಕೃತಿ ಪುನರುತ್ಥಾನಕ್ಕಾಗಿ ಸದಾ ಶ್ರಮಿಸಿದವರು ನೀಲಕಂಠ ಶ್ರೀಗಳು. ಪರಮ ತಪಸ್ವಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗರಡಿಯಲ್ಲಿ ಪಳಗಿ ಗುರು ಕಾರುಣ್ಯ ಪಡೆದರು. ಪೂಜಾ ತಪಸ್ಸು ಧ್ಯಾನ ಮೂಲಕ ಭಕ್ತರ ಬಾಳ ಬದುಕನ್ನು ಹಸನಗೊಳಿಸಿದವರು ಎಂದರು.ಶ್ರೀ ಮಠದ ಪೀಠಾಧೀಪತಿ ಸಿದ್ಧರೇಣುಕ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಮುತ್ತಗಿಯ ಗುರುಲಿಂಗ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಗುಂಡಕನಾಳ ಗುರುಲಿಂಗ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಸ್ವಾಮೀಜಿ, ಕೊಟ್ಟೂರಿನ ಡಾ ಸಿದ್ಧಲಿಂಗ ಸ್ವಾಮೀಜಿ,…

Read More