ಕೊಲ್ಹಾರ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಆಡಳಿತ ಯಂತ್ರದ ಚುಕ್ಕಾಣೆ ಹಿಡಿದರೆ ದೇಶದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬದ ಮುಖ್ಯಸ್ಥಳಿಗೆ ಒಂದು ಲಕ್ಷ ರೂಪಾಯಿ ವಾರ್ಷಿಕವಾಗಿ ವಿತರಣೆ ಮಾಡು ಮೂಲಕ ಸ್ತ್ರೀ ಸಬಲೀಕರಣ ಸಶಕ್ತಗೊಳಿಸಲಾಗುವದು ಎಂದು ವಿಜಯಪೂರ ಜಿಲ್ಲಾ ಮಹಿಳಾ ಘಟಕದ ಉಪಾದ್ಯಕ್ಷೆ ಶ್ರೀಮತಿ ಕಮಲಾಬಾಯಿ ಮಾಕಾಳಿ ಹೇಳಿದರು.
ಪಟ್ಟಣದ ೩ನೇ ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇರುವಂತೆ ಪ್ರಸಕ್ತ ಸಾಲಿನ ಲೋಕಸಭಾ ಚುಣಾವಣೆಯ ಭರವಸೆಯ ಗ್ಯಾರಂಟಿ ಕಾರ್ಡಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ ಮತದಾರರು ಗೆಲ್ಲಿಸಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ ಮಾತ್ರ ಭರವಸೆಗಳನ್ನು ಈಡೇರಿಸಲಾಗುವದು ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜೋಡು ಎತ್ತಿನ ಸರಕಾರ ಜನರಿಗೆ ಕೊಟ್ಟ ಭರವಸೆಯನ್ನು ಜಾರಿಗೆ ತಂದು ಅನುಷ್ಠಾಣಗೊಳಿಸಿರುವದು ತಮಗೆಲ್ಲರಿಗೂ ತಿಳಿದ ವಿಷಯ ಸರ್ವ ಜನರ ಸರ್ವ ಜನಾಂಗದ ಸಮಸ್ಯೆಗಳನ್ನು ಅರಿತು ಸರ್ವರಿಗೂ ನ್ಯಾಯ ಒದಗಿಸುವ ಕಾಂಗ್ರೆಸ್ ಪಕ್ಷವನ್ನು ನಡೆಯುವ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಅಧಿಕಾರವನ್ನು ದೊರಕಿಸಿಕೊಡಲು ಮತದಾರರು ಮತವನ್ನು ತಪ್ಪದೇ ಚಲಾಯಿಸಬೇಕೆಂದು ವಿನಂತಿಸಿದರು.
ಈ ಸಂಧರ್ಬದಲ್ಲಿ ಶಕುಂತಲಾ ರೇವಣಕರ, ಗೌರವ್ವ ಹಕ್ಕಿ, ಸಂಗವ್ವ ಗರಸಂಗಿ, ಬೋರಮ್ಮ ಬೆಳ್ಳುಬ್ಬಿ, ವಿಜಯಲಕ್ಷಿö್ಮ ನಾಗನೂರ, ಶಕುಂತಲಾ ಕಿರಸೂರ, ಪಾರ್ವತಿ ಮಾಕಾಳಿ, ಅನೇಕ ಪ್ರಮುಖರು ಜೊತೆಯಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

