ಕೊಲ್ಹಾರ: ಮನುಜಕುಲವನ್ನು ಈ ಲೋಕಕ್ಕೆ ಧಾರೆ ಎರೆಯುವ ಜೀವ ಎಂದರೆ ಹೆಣ್ಣು. ಇಂಥಹ ಹೆಣ್ಣು ಎಂಬ ಮನುಕುಲಕ್ಕೆ ಕ್ರೂರ ಮನಸ್ಸಿನ ವ್ಯಕ್ತಿಗಳಿಂದ ಏನೆಲ್ಲ ನಡೆಯಬಾರದೋ ಅಂತಹ ಘಟನೆಗಳು ನಡೆಯುತ್ತಿರುವದು ನಮ್ಮ ದಾರಿ ಎತ್ತ ಸಾಗುತ್ತಿದೆ? ಮಾನವೀಯತೆ ಏನಾದರೂ ಪತನದ ಕಡೆಗೆ ಹೊರಟಿದೆ ಎನ್ನುವದು ಭಾಸವಾಗುತ್ತಿದೆ ಎಂದು ಯುವ ಚಿಂತಕ ಖುದಾತಖಾನ್ ಪಠಾಣ ವಿಷಾದ ವ್ಯಕ್ತಪಡಿಸಿದರು.
ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಘಟನೆಗಳ ಕುರಿತು ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಚಿಂತಕ ಖುದಾತ್‌ಖಾನ ಪಠಾಣ ಅಹಿಂಸಾ ಧರ್ಮದ ಮೂಲಕ ಸ್ವಾತಂತ್ರ ಪಡೆದ ನಾವುಗಳು ಹಿಂಸೆಯ ಮಾರ್ಗದಲ್ಲಿ ನಡೆಯುತ್ತಿರುವದು ಬಸವಾದಿ ಪ್ರಮಥರ ಪ್ರವಾದಿ ಪೈಗಂಬರರಂತಹ ಗುರುನಾನಕ್‌ರ ಮತ್ತು ಮಹಾತ್ಮಾ ಗಾಂಧಿಜಿ ಅವರ ಅಹಿಂಸಾ ಧರ್ಮದ ಮಾನವೀಯತೆಯ ಸಾಮರಸ್ಯ ಎತ್ತ ಸಾಗುತ್ತಿದೆ ಎನ್ನುವದನ್ನು ಸುಶೀಕ್ಷಿತರು ಚಿಂತನೆ ಮಾಡುವ ಅವಶ್ಯಕತೆ ಜೊತೆಗೆ ಸಮಾಜದಲ್ಲಿ ಪರಸ್ಪರ ಮನುಷ್ಯತ್ವದ ಭಾವನೆಗಳನ್ನು ಬಿತ್ತುವ ಆಲೋಚನೆಯಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದರು.
ವಿದ್ಯಾರ್ಜನೆಗೆ, ಮಾರುಕಟ್ಟೆಗೆ, ಸಭೆ ಸಮಾರಂಭಗಳಿಗೆ, ಬಂಧುಗಳ ಸ್ನೇಹಿತರ ಭೇಟಿಗೆ ಹೋದ ಮಗಳು ಮತ್ತೆ ಮನೆಗೆ ಬರುತ್ತಾಳೋ ಇಲ್ಲವೋ ಎನ್ನುವ ಭಯದ ವಾತಾವರಣದಲ್ಲಿ ನಮ್ಮ ಕುಟುಂಬ ವ್ಯವಸ್ಥೆಯಲ್ಲಿರುವ ತಂದೆ ತಾಯಿಗಳಿಗೆ ನಿತ್ಯವೂ ಕಾಡುವ ಅಲ್ಲದೇ ಅಂತಹ ಮನಸ್ಥಿತಿಗೆ ತಲುಪುತ್ತಿದೇವೋ ಎನ್ನುವ ವಾತಾವರಣ ಪ್ರತಿಯೊಬ್ಬ ಮನುಷ್ಯನ ಮನಸ್ಸು ಭಾರವಾಗುವಂತೆ ಮಾಡುತ್ತಿದೆ ಇಂತಹ ಹೀನ ಕೃತ್ಯದಲ್ಲಿ ತೊಡಗಿಕೊಳ್ಳುವ ಪಾಪಿಗಳನ್ನು ಸರಕಾರ ಯಾವುದೇ ಕಾರಣವನ್ನು ಕೊಡದೇ ಅವರಿಗೆ ತಕ್ಕ ಪಾಠ ಕಲಿಸುವ ದಿಟ್ಟ ನಿರ್ಧಾರ ಕೈಗೊಳ್ಳುವ ದೃಡ ಸಂಕಲ್ಪವನ್ನು ಮಾಡಬೇಕಾಗಿದೆ ಎಂದರು.
Subscribe to Updates
Get the latest creative news from FooBar about art, design and business.
ಸಮಾಜದಲ್ಲಿ ಪರಸ್ಪರ ಮನುಷ್ಯತ್ವದ ಭಾವನೆಗಳನ್ನು ಬಿತ್ತಿ :ಪಠಾಣ
Related Posts
Add A Comment

