ವಿಜಯಪುರ: ಒಳ ಮೀಸಲಾತಿ ಜಾರಿಗೆ ತಂದು ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರಕ್ಕೆ ಈ ಭಾರಿ ಬಜಾರ ಸಮಾಜ ತಕ್ಕ ಪಾಠ ಕಲಿಸಲಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಸಮಾಜ ತಕ್ಕ ಪಾಠ ಕಲಿಸಿದೆ. ಸದ್ಯ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಇನೊಮ್ಮೆ ಬಿಜೆಪಿ ಸರ್ಕಾರಕ್ಕೆ ನಮ್ಮ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ.
ಭಾರತದಲ್ಲಿ ೧೪ ಕೋಟಿ ಜನ ಬಂದಾರ ಸಮಾಜದವರಿದ್ದೇವೆ. ಕರ್ನಾಟಕದಲ್ಲಿ ೪೫ ಲಕ್ಷ ಜನ ಇದ್ದೇವೆ. ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಂಡಗಳು ಅಂದರೆ ೫೧೮ ಅಂದರೆ ಜಿಲ್ಲೆಯಲಿವೆ. ಇಂಡಿ ತಾಲೂಕಿನಲ್ಲಿ ೪೨ ತಾಂಡಾಗಳಿವೆ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಪಕ್ಷಕ್ಕೆ ನಾವು ಯಾವುದೇ ರೀತಿಯಿಂದ ಬೆಂಬಲವನ್ನು ನೀಡುವದಿಲ್ಲ. ಈ ಬಾರಿ ಬಂಜಾರ ಸಮಾಜ ಕಾಂಗ್ರೆಸ್ ಪರವಾಗಿರಲಿದೆ ಆದ್ದರಿಂದ ನಾವು ಬಂಜಾರಾ ಸಮಾಜದವರು ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಸಮಾಜ ಕಾರ್ಯಗಳನ್ನು ಮಾಡಿಕೊಳ್ಳೋಣ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ.ಜಾ.ವಿಭಾಗದ ಜಿಲ್ಲಾ ಉಪಾಧ್ಯಕ್ಷರಾದ ರಾಜು ಶಂಕರ ಪವಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

