ಕೊಲ್ಹಾರ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರೊಬ್ಬರ ಮಗಳು ನೇಹಾ ಹಿರೇಮಠ ಅವರನ್ನು ಲವ್ ಜಿಹಾದ್ ಎಂಬ ಹೆಸರಿನಲ್ಲಿ ಕೊಲೆ ಮಾಡಿರುವದನ್ನು ನಾನು ಮತ್ತು ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಅಗಶಿಯ ಹತ್ತಿರ ಪ್ರತಿಭಟಣೆಯನ್ನು ಹಮ್ಮಿಕೊಂಡು ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌದದಲ್ಲಿಯೇ ಪಾಕಿಸ್ತಾನ ಜಿಂದಾಬಾದ ಎನ್ನುವ ಘೋಷಣೆ ಕೂಗುತ್ತಿದ್ದರು ಅದರಂತೆ ಲವ್ ಜಿಹಾದ ಸಂಘಟಣೆಯ ಯುವಕರು ಹಿಂದೂ ಯುವತಿಯರ ಮೇಲೆ ದೌರ್ಜನ್ಯ ಎಸಗುತ್ತಾ ಕೊಲೆ ಮಾಡುವಂತಹ ಹೀನಕೃತ್ಯದಲ್ಲಿ ತೊಡಗಿದರೂ ಮುಖ್ಯಮಂತ್ರಿ ಗೃಹ ಸಚಿವರು ಉಢಾಪೆ ಉತ್ತರ ಕೊಡುತ್ತಿರುವದು ರಾಜ್ಯದ ಜನತೆಗೆ ದ್ರೋಹ ಬಗೆದಂತೆ ಅಲ್ಲವೇ ಇದು ಆಡಳಿತ ಮಾಡುವ ಜನಪ್ರತಿನಿಧಿಗಳಿಗೆ ಶೋಭೆ ತರುವಂತಹದಲ್ಲ ಎಂದು ವ್ಯಂಗ್ಯವಾಡಿದರು.
ಇಂತಹ ಹೇಯ ಕೃತ್ಯವನ್ನು ಎಸಗಿರುವ ಫಯಾಜನನ್ನು ಸಾರ್ವಜನಿಕರ ಸಮ್ಮುಖದಲ್ಲಿ ಎನ್‌ಕೌಂಟರ್ ಮಾಡಲು ಸರಕಾರ ಆದೇಶ ಹೊರಡಿಸಬೇಕು ರಾಜದಲ್ಲಿರುವ ಮತಾಂಧರಿಗೆ ಕಾನೂನು ಭಯ ಇಲ್ಲದಂತೆ ಮಾಡುತ್ತಿರುವ ಮುಸ್ಲೀಂ ತುಷ್ಟಿಕರಣ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಸರಕಾರ ಹರಾಜುಕತೆಯ ವಾತಾವರಣವನ್ನು ಸೃಷ್ಟಿಮಾಡುತ್ತಿದೆ ನೇಹಾ ಹಿರೇಮಠ ಅವಳ ಕೊಲೆಯಲ್ಲಿ ಲವ್ ಜಿಹಾದ್ ಛಾಯೆ ಸ್ಪಷ್ಟವಾಗಿ ಎದ್ದು ಕಾಣುತ್ತಿದ್ದು ಆರೋಪಿಗೆ ತಕ್ಕ ಶಿಕ್ಷೆ ಮಾಡಬೇಕು ಹಿರೇಮಠ ಕುಟುಂಬಕ್ಕೆ ಹಾಗೂ ರಾಜ್ಯದಲ್ಲಿರುವ ಜನತೆಗೆ ನ್ಯಾಯ ಸಿಗುವಂತೆ ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.
ಪಟ್ಟಣ ಪಂಚಾಯತ ಸದಸ್ಯ ಬಾಬು ಭಜಂತ್ರಿ, ಚಂದ್ರಶೇಖರಯ್ಯ ಗಣಕುಮಾರ, ಈರಯ್ಯ ಮಠಪತಿ, ಮಾಹಾಂತಯ್ಯ ಹಿರೇಮಠ, ಕಲ್ಲಪ್ಪ ಗಿಡ್ಡಪ್ಪಗೋಳ, ಚಂದ್ರು ನೆಟೆಕಟ್ಟಿ, ಚನ್ನಯ್ಯ ಗಣಕುಮಾರ, ದುಂಡಪ್ಪ ರಾ ಕೊಠಾರಿ, ಮಲ್ಲಪ್ಪ ಬಾಟಿ, ಈರಪ್ಪ ನಂ ಗಿಡ್ಡಪ್ಪಗೋಳ, ಅನೇಕ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮೃತಳ ನಿಧನಕ್ಕೆ ಎರಡು ನಿಮಿಷಗಳ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

