ಮುದ್ದೇಬಿಹಾಳ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವನ್ನು ಖಂಡಿಸಿ ಪಟ್ಟಣದ ಜಂಗಮ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಮಾಜಗಳ ಬೆಂಬಲದೊಂದಿಗೆ ಆರೋಪಿ ಫಯಾಜನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಿಂದ ಶುರುವಾದ ಮೆರವಣಿಗೆ, ಬಜಾರ ನ ಗ್ರಾಮ ದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯ ವರೆಗೂ ಸಾಗಿತು.
ನಂತರ ನಡೆದ ಬಹಿರಂಗ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ ನಾಟೆಕಾರ, ಮಾಜಿ ಪುರಸಭೆ ಸದಸ್ಯ ಕಾಮರಾಜ ಬಿರಾದಾರ, ದಾನಯ್ಯ ಹಿರೇಮಠ, ಗುರಮೂರ್ತಿ ದೇವರು, ಸಂಗಯ್ಯ ಶಾಸ್ತಿçಗಳು, ಎಚ್.ಆರ್.ಬಾಗವಾನ, ಬಸವರಾಜ ಸಿದ್ದಾಪೂರ, ವಾಯ್.ಎಚ್.ವಿಜಯಕರ ಮಾತನಾಡಿ, ಮಹಿಳೆಯರನ್ನು ದೇವತೆಯ ರೂಪದಲ್ಲಿ ಕಾಣುವ ನಮ್ಮ ನಾಡಿನಲ್ಲಿ ನಡೆದ ಈ ಕೃತ್ಯ ಮಾನವ ಜನಾಂಗ ತಲೆ ತಗ್ಗಿಸುವಂಥದ್ದು. ಈ ಬರ್ಬರ ಹತ್ಯೆಗೆ ಕಾರಣನಾದ ಆರೋಪಿ ಫಯಾಜ ನನ್ನು ಕೂಡಲೇ ಗುಂಡಿಕ್ಕಿ ಕೊಲ್ಲಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಉತ್ತರ ಪ್ರದೇಶದ ಮಾದರಿಯ ಕಾನೂನು ನಮ್ಮಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಜಾರಿಯಾಗಬೇಕು ಅಂದಾಗ ಮಾತ್ರ ಇಂತಹ ಪೈಶಾಚಿಕ ಕ್ರತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಜಂಗಮ ಸಮಾಜದ ಅಧ್ಯಕ್ಷ ಸಿದ್ದಯ್ಯ ಕಲ್ಯಾಣಮಠ ಮನವಿ ಪತ್ರವನ್ನು ಓದಿದರು. ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಪತ್ರ ನೀಡಲಾಯಿತು. ಈ ವೇಳೆ ಸಂಗಣ್ಣ ಮೇಲಿನಮನಿ, ಮಹಾಂತೇಶ ಮಠಪತಿ, ಶಿವಾನಂದ ಹಿರೇಮಠ, ಶಂಕರ ಸಾಲಿಮಠ, ಮುತ್ತು ಕನ್ನೂರ, ಎಸ್.ಎಂ.ಶಿವಯೋಗಿಮಠ, ರಾಚಮ್ಮ ಗಣಾಚಾರಿ, ಲಕ್ಷ್ಮೀ ಶಿವಯೋಗಿಮಠ, ಸುಗಲಾ ಶಿವಯೋಗಿಮಠ, ಜಯಶ್ರೀ ಶಿಯೋಗಿಮಠ, ಎಸ್.ಸಿ.ಹಿರೇಮಠ ವಕೀಲರು, ಜಿ.ಎಸ್.ಸಾಲಿಮಠ, ಸದಾಶಿವ ಮಠ, ಎಸ್.ಬಿ.ಸಾಲಿಮಠ, ಪ್ರವೀಣ ಪಾಟೀಲ, ಶಿವರಾಜ ಬಿರಾದಾರ, ಎ.ಎಂ.ಸಂಕಿನಮಠ, ಎಸ್.ಕೆ.ಕಟ್ಟಿ, ಹುಸೇನ ಮುಲ್ಲಾ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

