Subscribe to Updates
Get the latest creative news from FooBar about art, design and business.
What's Hot
Author: editor.udayarashmi@gmail.com
ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮದ ನಿವಾಸಿಯಾದ ಲಾಲಪ್ಪ ಭಜಂತ್ರಿ ಎಂಬ ವ್ಯಕ್ತಿಯ ಸೊಸೆಯು ಇತ್ತೀಚೆಗೆ ಅಗ್ನಿಸ್ಪರ್ಶದಿಂದಾಗಿ ತೀವ್ರ ಗಾಯಗೊಂಡಿದ್ದಳು. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ನೊಂದಿತರ ಮನೆಗೆ ಭೇಟಿ ನೀಡಿ ಅವಳ ಆರೋಗ್ಯವನ್ನು ವಿಚಾರಿಸಿ ವೈಯಕ್ತಿಕವಾಗಿ ಧನಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದರು.ಶನಿವಾರ ತಾಲೂಕಿನ ನಾವದಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರಿಂದ ಇದರ ಮಾಹಿತಿಯನ್ನು ಪಡೆದ ಶಾಸಕರು ಕಾರ್ಯಕ್ರಮ ಮುಗಿಸಿ ನೇರವಾಗಿ ನೊಂದಿತ ಮಹಿಳೆಯ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು.ಈ ಸಮಯದಲ್ಲಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ರಾಜುಗೌಡ ಇಬ್ರಾಹಿಂಪೂರ (ನಾವದಗಿ), ಬಸನಗೌಡ ಬಿರಾದಾರ (ಟಿಪಿ). ಸಾಹೇಬಗೌಡ ರಾರಡ್ಡಿ, ನಿಂಗನಗೌಡ ಬಿರಾದಾರ (ಗಡಿಸೋಮನಾಳ) ಇದ್ದರು.
ವಿಜಯಪುರ: ಮುಂಬರುವ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾದ ಚೆಕ್‌ಪೋಸ್ಟ್ಗಳಿಗೆ ಶನಿವಾರ ತಡರಾತ್ರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ ಕುಮಾರ ಅವರು ದಿಢೀರ್ ಭೇಟಿ ನೀಡಿ ಚೆಕ್‌ಫೋಸ್ಟನ ಅಧಿಕಾರಿಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿದರು.ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ, ಅಳಗಿನಾಳ ಸೇರಿದಂತೆ ವಿವಿಧೆಡೆ ಸ್ಥಾಪಿಸಲಾದ ಚೆಕ್‌ಪೋಸ್ಟ್ಗಳಿಗೆ ಭೇಟಿ ನೀಡಿದ ಅವರು, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಭಾಗದ ವಿವಿಧ ಸ್ಥಳಗಳಲ್ಲಿ ಅಂತರರಾಜ್ಯ ಚೆಕ್‌ಫೋಸ್ಟ್ಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಚುನಾವಣಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಗಡಿಗೆ ಹೊಂದಿಕೊAಡAತಿರುವ ಒಳ ಬರುವ ಮತ್ತು ಹೊರ ಹೋಗುವ ವಾಹನಗಳನ್ನು ಕಡ್ಡಾಯವಾಗಿ ತಪಾಸಿಸಬೇಕು. ಪ್ರತಿ ವಾಹನಗಳ ಚಲನ-ವಲನ ಕುರಿತು ಚಲನ-ವಲನ ವಹಿ ಇಟ್ಟು ನಿರ್ವಹಿಸಬೇಕು. ಎಲ್ಲಾ ವಾಹನಗಳ ವಿವರ ದಾಖಲಿಸಬೇಕು. ಪ್ರತಿ ವಾಹನದ ಮೇಲೆ ನಿಗಾ ವಹಿಸಬೇಕು. ಯಾವುದೇ ರೀತಿಯ ಅಕ್ರಮ ವಸ್ತುಗಳ ಸಾಗಾಣಿಕೆ…
ಮನಸ್ಸನ್ನು ಇನ್ನೆಷ್ಟು ಹತೋಟಿಗೆ ತರಲಿ, ಆಗುತ್ತಿಲ್ಲ ನನಗೆ. ಹೌದು ನನ್ನಲ್ಲಿ ಏನೋ ಬದಲಾವಣೆ ಆಗುತ್ತಿದೆ. ಇದು ಸರಿಯಲ್ಲ.ದೇವರು ನನ್ನನ್ನು ಗಂಡು ಹುಡುಗನ ಶರೀರ ಕೊಟ್ಟು ಹುಟ್ಟಿಸಿದ್ದಾನೆ.ಆದರೆ ಇಂದೇಕೆ ನನಗೆ ಆ ಹುಡುಗಿಯ ಬಳೆ ಕುಂಕುಮ, ಜುಮುಕಿಯ ಮೇಲೆ ಎಲ್ಲಿಲ್ಲದ ಆಸೆ? ಅಮ್ಮ ನನಗೆ ಅಕ್ಕನ ಚಿಕ್ಕ ಫ್ರಾಕ್ ಹಾಕಿ ಫೋಟೋ ತೆಗೆಸಿದ್ದಳಂತೆ. ಆ ದಿನ ಫ್ರಾಕ್ ಹಾಕಬೇಡ ಎಂದು ತುಂಬಾ ಅತ್ತಿದ್ದೆನೆಂದು ಅಕ್ಕ ಹೇಳುತ್ತಲಿರುತ್ತಾಳೆ. ಇಂದು ನನಗೆ ಅದೇ ಅಕ್ಕನ ಬಟ್ಟೆಯ ಮೇಲೆ ಎಲ್ಲಿಲ್ಲದ ವ್ಯಾಮೋಹ.ಆಹಾ! ಅಕ್ಕ ಹಾಕಿಕೊಳ್ಳುವ ಜುಮುಕಿ ಎಷ್ಟು ಸುಂದರ.ಒಮ್ಮೆಯಾದರೂ ಆ ಜುಮುಕಿ ಹಾಕಿಕೊಳ್ಳಬೇಕೆಂಬ ತುಡಿತ. ಅಬ್ಬಾ….ಸುಂದರ ಮಾಲೆ,ತಲೆ ತುಂಬಾ ಕೂದಲು,ಉದ್ದ ಜಡೆ ಇದೆಲ್ಲವನ್ನೂ ಅನುಭವಿಸಬೇಕೆಂಬ ಹಂಬಲ ಯಾಕೆ?? ಇವೆಲ್ಲ ನನ್ನ ಬದುಕಲ್ಲಿ ಇರದೇ ಇದ್ದರೆ ಎಲ್ಲಿ ನನ್ನ ಉಸಿರೇ ನಿಲ್ಲುತ್ತದೋ ಎನ್ನುವ ಮಟ್ಟದ ಸಂಕಟ.ಏಯ್.. ಹುಚ್ಚ! ನಿನ್ನ ಚಿಗುರು ಮೀಸೆ ನೋಡು.ನಿನ್ನ ಮೈ ಕಟ್ಟು ನೋಡು. ನೋಡಲು ನಾನು ಗಂಡು.ಆದರೆ ಭಾವನೆಗಳು ಹೆಣ್ಣಿನದ್ದು.ಮೊದಲೆಲ್ಲ ನನ್ನಲ್ಲಿ ಈ ರೀತಿಯ…
ಡಿಎಸ್ಸೆಸ್ ಮುಖಂಡರಿಂದ ಸುದ್ದಿಗೋಷ್ಠಿ: ಆಲಗೂರ ಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ ವಿಜಯಪುರ: ಬರಲಿರುವ ವಿದಾನಸಭೆ ಚುನಾವಣೆಯಲ್ಲಿ ನಾಗಠಾಣ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಶಾಸಕ ರಾಜು ಆಲಗೂರ ಅವರನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಅವರಿಗೆ ಟಕೆಟ್ ಕೈ ತಪ್ಪಿದರೆ ಜಿಲ್ಲೆಯಾದ್ಯಂತ ಎಸ್ ಸಿ ಬಲಗೈ ಸಮುದಾಯವು ಮತದಾನವನ್ನು ಬಹಿಷ್ಕರಿಸುವುದಾಗಿ ಜಿಲ್ಲೆಯ ಡಿಎಸ್ಸೆಸ್ ಮುಖಂಡರು ಒಕ್ಕೊರಲಿನಿಂದ ಎಚ್ಚರಿಕೆ ನೀಡಿದರು.ಶನಿವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಸೆಸ್ ಮುಖಂಡರಾದ ರಮೇಶ ಆಸಂಗಿ, ವಿನಾಯಕ ಗುಣಸಾಗರ, ಸಿದ್ದು ರಾಯಣ್ಣ, ಅಶೋಕ ಚಲವಾದಿ, ಅಡಿವೆಪ್ಪ ಸಾಲಗಲ್ ಮೊದಲಾದವರು ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಲೇಬೇಕೆಂದು ಆಗ್ರಹಿಸಿದರು.ರಾಜು ಆಲಗೂರ ಅವರು ೧೯೯೦ ರಿಂದಲೂ ಅವಳಿ ಜಿಲ್ಲೆಯಲ್ಲಿ ಡಿಎಸ್ಸೆಸ್ ಸಂಘಟನೆ ಮೂಲಕ ಹತ್ತು ಹಲವು ಹೋರಾಟಗಳಿಂದ ಜನನಾಯಕರಾಗಿ ಬೆಳೆದವರು. ಮಾಜಿ ಸಚಿವ ದಿ. ಬಿ.ಎಂ. ಪಾಟೀಲರು ಇವರಿಗೆ ರಾಜಕೀಯಕ್ಕೆ ಕರೆ ತಂದು ಅವಕಾಶ ಒದಗಿಸಿದರು. ಈಗ ಶಾಸಕ ಎಂ.ಬಿ. ಪಾಟೀಲ ಅವರು ಸಹ…
ಹಿಂದೂಗಳ ಒಗ್ಗೂಡುವಿಕೆಗಾಗಿ ಇಂತಹ ಉತ್ಸವಗಳು: ಉಮೇಶ ವಂದಾಲ ವಿಜಯಪುರ: ನಗರದಲ್ಲಿ ಮಾ.26 ರವಿವಾರದಂದು ಸಂಜೆ 4 ಗಂಟೆಗೆ ಶ್ರೀ ರಾಮನವಮಿ ಅಂಗವಾಗಿ ರಾಮನವಮಿ ಉತ್ಸವ ಸಮಿತಿ ವತಿಯಿಂದ 12 ಅಡಿ ಎತ್ತರದ ಶ್ರೀ ರಾಮನ ಮೂರ್ತಿಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಶ್ರೀ ರಾಮ ಮೂರ್ತಿಯ ಮೆರವಣಿಗೆಯು ನಗರದ ಶ್ರೀರಾಮ ಮಂದಿರದಿ0ದ ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ, ಶಿವಾಜಿ ವೃತ್ತದ ಮೂಲಕ ಜೋರಾಪೂರ ಪೇಟವರೆಗೆ ಸಾಗಲಿದೆ ಎಂದು ತಿಳಿಸಿದರು.ತಾವು ಕಳೆದ ೨೫ ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ವಿವಿಧ ಶಾಖೆಗಳಾದ ಭಜರಂಗದಳ, ವಿಶ್ವ ಹಿಂದು ಪರಿಷತ್‌ಗಳಲ್ಲಿ ಕಾರ್ಯನಿರ್ವಹಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದು, ಹಿಂದು ಮತ್ತು ಹಿಂದುತ್ವದ ಪರವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಹಿಂದುಗಳನ್ನು ಒಗ್ಗೂಡಿಸಲು ಶ್ರಮಿಸಿದ್ದಾಗಿ ಹೇಳಿದರು.ತಾವು ನೂರಾರು ಗೋವುಗಳ ರಕ್ಷಣೆ, ಮತಾಂತರ, ಲವ್ ಜಿಹಾದ್ ತಡೆ ಇಂತಹ ಅನೇಕ ಹತ್ತು-ಹಲವು…
ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ, ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾದ ವ್ಯಕ್ತಿ.ಈತನನ್ನು ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆತನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಜಧಾನಿ ಲಾಡ್ಜ್ ರೂಮ್ ನಂಬರ್ 114 ನಲ್ಲಿ ಎರಡೂ ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವುದು ಪತ್ತೆಯಾಗಿದೆ.ಇಂದ್ರಕುಮಾರ ಎಂಬವನು ಇದೇ ಮಾರ್ಚ್ 22ರಂದು ಲಾಡ್ಜ್ ಗೆ ಆಗಮಿಸಿ ತನ್ನ ಆಧಾರ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದು ಕೊಂಡಿದ್ದನು. ನಂತರ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲೂ ಸಹ ತೆರೆದಿರಲಿಲ್ಲ. ಶುಕ್ರವಾರ ಬೆಳಗ್ಗೆ 10ಗಂಟೆ ಸುಮಾರಿಗೆ…
ಆಲಮಟ್ಟಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 50 ರ ಯಲಗೂರ ಕ್ರಾಸ್ ಬಳಿ ಇರುವ ಚೆಕ್ ಪೋಸ್ಟ್ ಹತ್ತಿರ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ರೂಗಳನ್ನು ನಿಡಗುಂದಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಶುಕ್ರವಾರ ಇಲಕಲ್ಲನಿಂದ ವಿಜಯಪುರಕ್ಕೆ ಕಾರು ಮೂಲಕ ಸಾಗುತ್ತಿದ್ದ ಶಂಕರಪ್ಪ ಕಡಮಾನೂರ ಅವರ ಕಾರನ್ನು ಚೆಕ್ ಪೋಸ್ಟ್ ನಲ್ಲಿ ಪರಿಶೀಲಿಸುವಾಗ 4.5 ಲಕ್ಷ ರೂ ಹಣ ಪತ್ತೆಯಾಯಿತು. ಅದರಲ್ಲಿ 3 ಲಕ್ಷ ರೂ ಹಣಕ್ಕೆ ಅವರು ದಾಖಲೆ ಒದಗಿಸಿದರು. ಹೀಗಾಗಿ ಉಳಿದ 1.5 ಲಕ್ಷ ರೂ ದಾಖಲೆಯಿಲ್ಲದೇ ಹಣ ಸಾಗಾಣಿಕೆಗಾಗಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ನಿಡಗುಂದಿ ಪಿಎಸ್ ಐ ಹಾಲಪ್ಪ ಬಾಲದಂಡಿ ಹಾಗೂ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ ತಿಳಿಸಿದ್ದಾರೆ.