ತಾಳಿಕೋಟಿ: ತಾಲೂಕಿನ ನಾವದಗಿ ಗ್ರಾಮದ ನಿವಾಸಿಯಾದ ಲಾಲಪ್ಪ ಭಜಂತ್ರಿ ಎಂಬ ವ್ಯಕ್ತಿಯ ಸೊಸೆಯು ಇತ್ತೀಚೆಗೆ ಅಗ್ನಿಸ್ಪರ್ಶದಿಂದಾಗಿ ತೀವ್ರ ಗಾಯಗೊಂಡಿದ್ದಳು. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಅವರು ನೊಂದಿತರ ಮನೆಗೆ ಭೇಟಿ ನೀಡಿ ಅವಳ ಆರೋಗ್ಯವನ್ನು ವಿಚಾರಿಸಿ ವೈಯಕ್ತಿಕವಾಗಿ ಧನಸಹಾಯವನ್ನು ಮಾಡಿ ಮಾನವೀಯತೆಯನ್ನು ಮೆರೆದರು.
ಶನಿವಾರ ತಾಲೂಕಿನ ನಾವದಗಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತರಿಂದ ಇದರ ಮಾಹಿತಿಯನ್ನು ಪಡೆದ ಶಾಸಕರು ಕಾರ್ಯಕ್ರಮ ಮುಗಿಸಿ ನೇರವಾಗಿ ನೊಂದಿತ ಮಹಿಳೆಯ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯ ಮಾಡಿದರು.
ಈ ಸಮಯದಲ್ಲಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ರಾಜುಗೌಡ ಇಬ್ರಾಹಿಂಪೂರ (ನಾವದಗಿ), ಬಸನಗೌಡ ಬಿರಾದಾರ (ಟಿಪಿ). ಸಾಹೇಬಗೌಡ ರಾರಡ್ಡಿ, ನಿಂಗನಗೌಡ ಬಿರಾದಾರ (ಗಡಿಸೋಮನಾಳ) ಇದ್ದರು.
Related Posts
Add A Comment