ಹಿಂದೂಗಳ ಒಗ್ಗೂಡುವಿಕೆಗಾಗಿ ಇಂತಹ ಉತ್ಸವಗಳು: ಉಮೇಶ ವಂದಾಲ
ವಿಜಯಪುರ: ನಗರದಲ್ಲಿ ಮಾ.26 ರವಿವಾರದಂದು ಸಂಜೆ 4 ಗಂಟೆಗೆ ಶ್ರೀ ರಾಮನವಮಿ ಅಂಗವಾಗಿ ರಾಮನವಮಿ ಉತ್ಸವ ಸಮಿತಿ ವತಿಯಿಂದ 12 ಅಡಿ ಎತ್ತರದ ಶ್ರೀ ರಾಮನ ಮೂರ್ತಿಯ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಶ್ರೀ ರಾಮ ಮೂರ್ತಿಯ ಮೆರವಣಿಗೆಯು ನಗರದ ಶ್ರೀರಾಮ ಮಂದಿರದಿ0ದ ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕ, ಶಿವಾಜಿ ವೃತ್ತದ ಮೂಲಕ ಜೋರಾಪೂರ ಪೇಟವರೆಗೆ ಸಾಗಲಿದೆ ಎಂದು ತಿಳಿಸಿದರು.
ತಾವು ಕಳೆದ ೨೫ ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ವಿವಿಧ ಶಾಖೆಗಳಾದ ಭಜರಂಗದಳ, ವಿಶ್ವ ಹಿಂದು ಪರಿಷತ್‌ಗಳಲ್ಲಿ ಕಾರ್ಯನಿರ್ವಹಿಸಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದು, ಹಿಂದು ಮತ್ತು ಹಿಂದುತ್ವದ ಪರವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಹಿಂದುಗಳನ್ನು ಒಗ್ಗೂಡಿಸಲು ಶ್ರಮಿಸಿದ್ದಾಗಿ ಹೇಳಿದರು.
ತಾವು ನೂರಾರು ಗೋವುಗಳ ರಕ್ಷಣೆ, ಮತಾಂತರ, ಲವ್ ಜಿಹಾದ್ ತಡೆ ಇಂತಹ ಅನೇಕ ಹತ್ತು-ಹಲವು ಹಿಂದೂ ಪರ ಕಾರ್ಯಗಳನ್ನು ನಿರಂತರ ಮಾಡುತ್ತ ಬಂದಿದ್ದು, ಕಳೆದ ಹಲವು ವರ್ಷಗಳಿಂದ ಶ್ರೀ ರಾಮ ನವಮಿ ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಹಿಂದೂಗಳ ಒಗ್ಗೂಡುವಿಕೆಗಾಗಿ ಹಾಗೂ ಹಿಂದೂ ಭಾವನೆಗಳನ್ನು ಗಟ್ಟಿಗೊಳಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು.
ರಾಮನವಮಿ ಉತ್ಸವವನ್ನು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಮಾಡುತ್ತಿಲ್ಲ ಎಂದು ಸ್ಪಷ್ಠಪಡಿಸಿದ ಉಮೇಶ ವಂದಾಲ ಅವರು, ಕೆಲ ರಾಜಕೀಯ ದುಷ್ಠ ಶಕ್ತಿಗಳು ಇದನ್ನು ತಡೆಯಲು ಪ್ರಯಯತ್ನಿಸಿದ್ದವು ಎಂದರು.
ಕಳೆದ ೨೫ ವರ್ಷಗಳಿಂದ ತಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದು ತಾವೂ ಕೂಡ ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ಸ್ಪಷ್ಠಪಡಿಸಿದರು. ಸಣ್ಣ ಸಮಾಜಗಳನ್ನು ಗೌರವಿಸುವ ಬಿಜೆಪಿ ಈ ಬಾರಿ ತಮಗೆ ಟಿಕೆಟ್ ನೀಡುವ ವಿಶ್ವಾಸ ಹೊಂದಿರುವುದಾಗಿ ಉಮೇಶ ವಂದಾಲ ತಿಳಿಸಿದರು.
ಶಿವು ಬುಂಯಾರ, ಶರಣು ಸಬರದ, ಸಚಿನ ಸವನಳ್ಳಿ, ಅಪ್ಪು ಪೆಡ್ಡಿ, ಸಮೀರ ಕುಲಕರ್ಣಿ ಮತ್ತು ಮಹಾದೇವ ಕಠಾರಿ ಇದ್ದರು.