ಆಲಮಟ್ಟಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 50 ರ ಯಲಗೂರ ಕ್ರಾಸ್ ಬಳಿ ಇರುವ ಚೆಕ್ ಪೋಸ್ಟ್ ಹತ್ತಿರ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ರೂಗಳನ್ನು ನಿಡಗುಂದಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಇಲಕಲ್ಲನಿಂದ ವಿಜಯಪುರಕ್ಕೆ ಕಾರು ಮೂಲಕ ಸಾಗುತ್ತಿದ್ದ ಶಂಕರಪ್ಪ ಕಡಮಾನೂರ ಅವರ ಕಾರನ್ನು ಚೆಕ್ ಪೋಸ್ಟ್ ನಲ್ಲಿ ಪರಿಶೀಲಿಸುವಾಗ 4.5 ಲಕ್ಷ ರೂ ಹಣ ಪತ್ತೆಯಾಯಿತು. ಅದರಲ್ಲಿ 3 ಲಕ್ಷ ರೂ ಹಣಕ್ಕೆ ಅವರು ದಾಖಲೆ ಒದಗಿಸಿದರು.
ಹೀಗಾಗಿ ಉಳಿದ 1.5 ಲಕ್ಷ ರೂ ದಾಖಲೆಯಿಲ್ಲದೇ ಹಣ ಸಾಗಾಣಿಕೆಗಾಗಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ನಿಡಗುಂದಿ ಪಿಎಸ್ ಐ ಹಾಲಪ್ಪ ಬಾಲದಂಡಿ ಹಾಗೂ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ ತಿಳಿಸಿದ್ದಾರೆ.